ಭಾರತದ ಸೂಪರ್​ ಸಾನಿಕ್​ ಕ್ಷಿಪಣಿ ನಮ್ಮ ವಾಯುಪ್ರದೇಶಕ್ಕೆ ಬಂದು ಕೆಳಗೆ ಬಿತ್ತು ಎಂದ ನೆರೆರಾಷ್ಟ್ರ ಪಾಕಿಸ್ತಾನ

ಮಾರ್ಚ್​ 9ರಂದು ಈ ಘಟನೆ ನಡೆದಿದೆ. ಕ್ಷಿಪಣಿ ಪತನಗೊಂಡ ಬಳಿಕ ಅದರ ಅವಶೇಷಗಳ ಪರೀಕ್ಷೆಯನ್ನು ಮಾಡಲಾಯಿತು. ಆಗ ಇದೊಂದು ಸೂಪರ್ ಸಾನಿಕ್​ ಕ್ಷಿಪಣಿಯೆಂಬುದು ಗೊತ್ತಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಭಾರತದ ಸೂಪರ್​ ಸಾನಿಕ್​ ಕ್ಷಿಪಣಿ ನಮ್ಮ ವಾಯುಪ್ರದೇಶಕ್ಕೆ ಬಂದು ಕೆಳಗೆ ಬಿತ್ತು ಎಂದ ನೆರೆರಾಷ್ಟ್ರ ಪಾಕಿಸ್ತಾನ
ಬಾಬರ್​ ಇಫ್ತಿಕಾರ್​
Follow us
TV9 Web
| Updated By: Lakshmi Hegde

Updated on:Mar 11, 2022 | 11:29 AM

ಭಾರತದ ಸೂಪರ್​ ಸಾನಿಕ್​ ಕ್ಷಿಪಣಿ (Supersonic Missile) ಪಾಕಿಸ್ತಾನದ ವಾಯುಪ್ರದೇಶಕ್ಕೆ (Paikstan Airspace) ಲಗ್ಗೆಯಿಟ್ಟಿತ್ತು ಎಂದು ಪಾಕ್​ ಮಿಲಿಟರಿ ಹೇಳಿದೆ. ಭಾರತದ ಸಿರ್ಸಾ (ಹರ್ಯಾಣದ ನಗರ)ದಿಂದ ಟೇಕ್​ ಆಫ್​ ಆಗಿದ್ದ ಕ್ಷಿಪಣಿ ಇದು. ಪಾಕಿಸ್ತಾನದ ವಾಯುಪ್ರದೇಶದೊಳಗೆ ಸುಮಾರು 124 ಕಿಮೀ ದೂರದವರೆಗೆ ಪ್ರವೇಶಿಸಿತ್ತು. ನಂತರ ಪಾಕ್​​ನ ಖಾನೇವಾಲ್​ ಜಿಲ್ಲೆಯ ಮಿಯಾನ್​ ಚನ್ನು ಎಂಬಲ್ಲಿ ಪತನಗೊಂಡಿದೆ.  ಈ ಕ್ಷಿಪಣಿಯಿಂದ ನಾಗರಿಕರ ಆಸ್ತಿಪಾಸ್ತಿ ಹಾನಿಯಾಗಿದೆ. ಯಾರದ್ದೂ ಜೀವ ಹೋಗಿದ್ದು ವರದಿಯಾಗಿಲ್ಲ ಎಂದು ಪಾಕಿಸ್ತಾನ ಇಂಟರ್​ ಸರ್ವೀಸ್​ ಪಬ್ಲಿಕ್​ ರಿಲೇಶನ್ಸ್​​ನ ಡೈರೆಕ್ಟರ್ ಜನರಲ್​ ಬಾಬರ್​ ಇಫ್ತಿಕಾರ್​ ತಿಳಿಸಿದ್ದಾರೆ.   ಮಾರ್ಚ್​ 9ರಂದು ಈ ಘಟನೆ ನಡೆದಿದೆ. ಕ್ಷಿಪಣಿ ಪತನಗೊಂಡ ಬಳಿಕ ಅದರ ಅವಶೇಷಗಳ ಪರೀಕ್ಷೆಯನ್ನು ಮಾಡಲಾಯಿತು. ಆಗ ಇದೊಂದು ಸೂಪರ್ ಸಾನಿಕ್​ ಕ್ಷಿಪಣಿಯೆಂಬುದು ಗೊತ್ತಾಗಿದೆ. ಆದರೆ ಈ ಕ್ಷಿಪಣಿಯಲ್ಲಿ ಯಾವುದೇ ಶಸ್ತ್ರಗಳೂ ಇರಲಿಲ್ಲ. ನಿಶಸ್ತ್ರವಾಗಿದ್ದು ಸ್ಪಷ್ಟವಾಗಿದೆ ಎಂದೂ ಪಾಕಿಸ್ತಾನ ಹೇಳಿದೆ.

ಬುಧವಾರ ಸಂಜೆ 6.43ರ ಹೊತ್ತಿಗೆ ಈ ಕ್ಷಿಪಣಿ ಅತ್ಯಂತ ವೇಗವಾಗಿ ಪಾಕಿಸ್ತಾನದ ವಾಯುಪ್ರದೇಶದೊಳಗೆ ಪ್ರವೇಶಿಸಿದೆ. ಸಂಜೆ 6.50ರ ಹೊತ್ತಿಗೆ ಪಾಕಿಸ್ತಾನದ ಮಿಯಾನ್​ ಚನ್ನು ಎಂಬಲ್ಲಿ ಪತನಗೊಂಡಿದೆ.  ಅದು ಬೀಳುವ ಸ್ಥಳದಲ್ಲಿದ್ದ ನಾಗರಿಕರ ಜಮೀನು ಹಾಳಾಗಿದೆ.  ಯಾರದ್ದೂ ಜೀವ ಹೋಗದೆ ಇರುವುದು ಅದೃಷ್ಟ. ಈ ಫ್ಲೈಟ್ ಬಂದ ಮಾರ್ಗವನ್ನು ಪಾಕಿಸ್ತಾನ ವಾಯುಪಡೆ ಪತ್ತೆಹಚ್ಚಿದೆ. ಇದರ ಮೂಲ ಭಾರತ ಸಿರ್ಸಾ ಎಂದು ಗೊತ್ತಾಗಿದೆ ಎಂದೂ ಬಾಬರ್​ ಹೇಳಿದ್ದಾರೆ. ಆದರೆ ಪಾಕಿಸ್ತಾನದ ಈ ಆರೋಪಯುಕ್ತ ಹೇಳಿಕೆಗೆ ಭಾರತದ ಸೇನೆಯಿಂದ ಸದ್ಯ ಯಾವುದೇ ಪ್ರತಿಕ್ರಿಯೆಯೂ ಹೊರಬಿದ್ದಿಲ್ಲ.

ಈ ಬಗ್ಗೆ ಮಾತನಾಡಿದ ಏರ್​ ವೈಸ್ ಮಾರ್ಷಲ್​ ತಾರಿಕ್​ ಜಿಯಾ, ಕ್ಷಿಪಣಿ ತನ್ನ ಟೇಕ್​ ಆಫ್​ ನೆಲದಿಂದ ಹೊರಟು ಪಾಕಿಸ್ತಾನದ ನೆಲದಲ್ಲಿ ಕೆಳಗೆ ಬೀಳುವವರೆಗೂ ಸುಮಾರು 6 ನಿಮಿಷ 46 ಸೆಕೆಂಡ್​ಗಳ ಕಾಲ ಹಾರಾಡಿದೆ. ಇದು ಪಾಕಿಸ್ತಾನದ ನೆಲದಲ್ಲಿ ಇದ್ದ ಅವಧಿ 3 ನಿಮಿಷ 44 ಸೆಕೆಂಡ್​ಗಳು ಎಂದು ತಿಳಿಸಿದ್ದಾರೆ. ಹಾಗೇ, ಇದು ಸಮುದ್ರ ಮಟ್ಟದಿಂದ 40 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದ್ದಾಗಿಯೂ ಮಾಹಿತಿ ನೀಡಿದ್ದಾರೆ. 2005ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿರುವ ಒಪ್ಪಂದದ ಪ್ರಕಾರ ಯಾವುದೇ ದೇಶ, ಇನ್ನೊಂದು ದೇಶದ ಭೂ, ವಾಯು ಮತ್ತು ಸಾಗರದ ಪ್ರದೇಶದ ಮೇಲೆ ಬ್ಯಾಲಿಸ್ಟಿಕ್​ ಕ್ಷಿಪಣಿ ಪರೀಕ್ಷಾರ್ಥ ಹಾರಾಟ ನಡೆಸುವುದೇ ಆದಲ್ಲಿ, ಆ ರಾಷ್ಟ್ರಕ್ಕೆ ಮೂರು ದಿನಗಳ ಮುಂಚಿತವಾಗಿಯೇ ತಿಳಿಸಬೇಕು. ಸದ್ಯ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Salaam Soldier: ‘ಜೇಮ್ಸ್​’ ಹೊಸ ಹಾಡು ‘ಸಲಾಂ ಸೋಲ್ಜರ್​’ ರಿಲೀಸ್​; ಸಲಾಂ​ ಪುನೀತ್​ ಎಂದ ಅಪ್ಪು ಫ್ಯಾನ್ಸ್​​

Published On - 11:00 am, Fri, 11 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ