ಚರಂಡಿಯಲ್ಲಿ ಪತ್ತೆಯಾಯ್ತು ಭ್ರೂಣ, ಅಪ್ರಾಪ್ತನೊಂದಿಗಿನ ಸಂಬಂಧದಿಂದ ಗರ್ಭಿಣಿಯಾಗಿದ್ದ ಬಾಲಕಿ
ಬಾಲಕಿಯೊಬ್ಬಳು ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಲಕನೊಂದಿಗೆ ಸಂಬಂಧಹೊಂದಿ ಗರ್ಭಿಣಿಯಾಗಿದ್ದಳು, ಬಳಿಕ ಮಾತ್ರೆಯನ್ನು ತೆಗೆದುಕೊಂಡು ಗರ್ಭಪಾತವಾದಾಗ ಆಕೆ ಭ್ರೂಣವನ್ನು ಚರಂಡಿಗೆ ಎಸೆದಿದ್ದಳು. ಬಾಲಕನನ್ನು ಬಂಧಿಸಲಾಗಿದ್ದು, ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರ ಹುಡುಕಾಟವು ಬಳಿಕ 16 ವರ್ಷದ ಬಾಲಕಿಯ ಮನೆ ಬಾಗಿಲಿಗೆ ಬಂದಿತ್ತು.
ಸೂರತ್‌ನ ಚರಂಡಿಯೊಳಗೆ ಸಿಗರೇಟ್, ಬಲೂನ್, ಇತರೆ ಪ್ಲಾಸ್ಟಿಕ್ ಪ್ಯಾಕೆಟ್ಗಳ ನಡುವೆ ಭ್ರೂಣ ಪತ್ತೆಯಾಗಿತ್ತು. ಪಕ್ಷಿಗಳು ಅದರ ಮೇಲೆ ಹಾರಾಡುತ್ತಿದ್ದವು. ಅದನ್ನು ಚದುರಿಸಲು ಮಕ್ಕಳು ಕಲ್ಲು ಎಸೆದಿದ್ದರು. ಬಳಿಕ ಅಲ್ಲಿ ಭ್ರೂಣವಿದ್ದುದನ್ನು ನೋಡಿ ಮಕ್ಕಳು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದರು. ಅವರು ಪೊಲೀಸರಿಗೆ ಕರೆ ಮಾಡಿದ್ದರು.
ಭ್ರೂಣವನ್ನು ಕೂಡಲೇ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಜನವರಿ 9 ರಂದು ಸೂರತ್‌ನ ಅಪೇಕ್ಷಾನಗರದಲ್ಲಿ ಘಟನೆ ವರದಿಯಾಗಿದೆ. ಪೊಲೀಸರ ಹುಡುಕಾಟವು ಬಳಿಕ 16 ವರ್ಷದ ಬಾಲಕಿಯ ಮನೆ ಬಾಗಿಲಿಗೆ ಬಂದಿತ್ತು, ಆಕೆಯ ತಾಯಿ ಇಲ್ಲ ತಮ್ಮ ಮಗಳು ಅಂಥಾ ಕೆಲಸ ಮಾಡಿಲ್ಲ ಎಂದು ಹೇಳಿದ್ದರು, ಪೊಲೀಸರು ಪಟ್ಟುಹಿಡಿದರು ಮತ್ತು 16 ವರ್ಷದ ಯುವತಿಯನ್ನು ನ್ಯೂ ಸಿವಿಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವಳು ಗರ್ಭಿಣಿಯಾಗಿದ್ದಾಳೆಂದು ಖಚಿತಪಡಿಸಿದರು ಎಂದು ಜಿಲ್ಲಾಧಿಕಾರಿ ವಿಜಯ್ ಸಿಂಗ್ ಗುರ್ಜರ್ ಹೇಳಿದ್ದಾರೆ.
ಆಕೆ ಜನವರಿ 3 ರಂದು ಶಾಲೆಗೆ ಹೋಗಿದ್ದಳು, ತನಿಖೆಯ ಬಳಿಕ ಆಕೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾಳೆ. ತಾನು ಇನ್ಸ್ಟಾಗ್ರಾಂ ಮೂಲಕ 17 ವರ್ಷದ ವ್ಯಕ್ತಿಯನ್ನು ಭೇಟಿಯಾದೆ, ಬಳಿಕ ಸ್ನೇಹಿತರಾದೆವು ಎಂದಿದ್ದಾಳೆ.
ಮತ್ತಷ್ಟು ಓದಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ; ಸಾವಿರಾರು ಕರುಳ ಬಳ್ಳಿಗಳನ್ನ ಕೊಂದಿದ್ದವ ಅರೆಸ್ಟ್
ಹುಡುಗ ಸೂರತ್‌ನ ಕೈಗಾರಿಕಾ ಪ್ರದೇಶವಾದ ಪಾಂಡೇಸರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು ಮತ್ತು ಅವರಿಬ್ಬರು ದೈಹಿಕ ಸಂಬಂಧ ಹೊಂದಿದ್ದರು, ಇದರಿಂದಾಗಿ ಹುಡುಗಿ ಗರ್ಭಿಣಿಯಾಗಿದ್ದಳು. ಬಾಲಕಿ ಗರ್ಭಿಣಿ ಎಂದು ತಿಳಿದ ಹುಡುಗ ಉತ್ತರ ಪ್ರದೇಶದ ತನ್ನ ಮನೆಗೆ ಮತ್ತು ನಂತರ ಮುಂಬೈಗೆ ಓಡಿಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈಗೆ ಹೋಗಿ ಗರ್ಭಪಾತ ಮಾಡಿಸಿಕೊಳ್ಳಲು ಕೆಲವು ಮಾತ್ರೆಗಳನ್ನು ಕಳುಹಿಸಿದ್ದ, ಅವಳು ಎರಡು ಮಾತ್ರೆಗಳನ್ನು ತೆಗೆದುಕೊಂಡಳು ಮತ್ತು ಮನೆಯಲ್ಲಿ ಗರ್ಭಪಾತವಾಯಿತು, ಬಳಿಕ ಭ್ರೂಣವನ್ನು ಎಸೆದಿದ್ದಳು.
ನಾವು ಅವರ (ಹುಡುಗ ಮತ್ತು ಹುಡುಗಿ) ಡಿಎನ್ಎ ಮಾದರಿಗಳನ್ನು ತೆಗೆದುಕೊಂಡಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನನ್ನು ಬಂಧಿಸಲಾಗಿದ್ದು, ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:33 am, Sun, 19 January 25