AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಗ ಬದಲಿಸಿ ಮಂಗಳೂರಿಗೆ ಬರುತ್ತಿದೆ ರಷ್ಯಾದ ಮತ್ತೊಂದು ತೈಲ ಟ್ಯಾಂಕರ್‌

ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್‌ ಭಾರತಕ್ಕೆ ಯು-ಟರ್ನ್ ತೆಗೆದುಕೊಂಡಿದೆ. ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ತುಂಬಿದ ಟ್ಯಾಂಕರ್ ಮಂಗಳೂರಿನ ಬಂದರಿನತ್ತ ಆಗಮಿಸುತ್ತಿದೆ. ಭಾರತದ ರಷ್ಯಾದಿಂದ ತೈಲದ ಆಮದುಗಳನ್ನು ದ್ವಿಗುಣಗೊಳಿಸಲು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಆ ಟ್ಯಾಂಕರ್ ಈಗ ಭಾರತಕ್ಕೆ ಆಗಮಿಸುತ್ತಿದೆ. ಹಡಗು-ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರ ಬಂದರಿನಿಂದ ಲೋಡ್ ಮಾಡಿದ ತನ್ನ ಯುರಲ್ಸ್ ಸರಕುಗಳೊಂದಿಗೆ ಅಕ್ವಾ ಟೈಟಾನ್ ಮಾರ್ಚ್ 21ರಂದು ನವ ಮಂಗಳೂರಿಗೆ ಆಗಮಿಸಲಿದೆ.

ಮಾರ್ಗ ಬದಲಿಸಿ ಮಂಗಳೂರಿಗೆ ಬರುತ್ತಿದೆ ರಷ್ಯಾದ ಮತ್ತೊಂದು ತೈಲ ಟ್ಯಾಂಕರ್‌
Russian ShipImage Credit source: Vessel finder
ಸುಷ್ಮಾ ಚಕ್ರೆ
|

Updated on:Mar 18, 2026 | 5:36 PM

Share

ನವದೆಹಲಿ, ಮಾರ್ಚ್ 18: ಚೀನಾಕ್ಕೆ ಹೋಗುತ್ತಿದ್ದ ರಷ್ಯಾದ ತೈಲ (Oil Tanker) ತುಂಬಿದ ಟ್ಯಾಂಕರ್ ದಕ್ಷಿಣ ಚೀನಾದ ಸಮುದ್ರದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿದೆ. ಆ ಹಡಗು ಯು-ಟರ್ನ್ ಹೊಡೆದು ಈಗ ಭಾರತಕ್ಕೆ ಆಗಮಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿಗೆ ಈ ಹಡಗು ತೈಲವನ್ನು ಹೊತ್ತು ತರುತ್ತಿದೆ. ಅಮೆರಿಕ, ಇಸ್ರೇಲ್-ಇರಾನ್ ಯುದ್ಧದ ಮಧ್ಯೆ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಡಗಿನ ಟ್ರ್ಯಾಕಿಂಗ್ ಡೇಟಾ ಅಫ್ರಾಮ್ಯಾಕ್ಸ್ ಟ್ಯಾಂಕರ್ ಅಕ್ವಾ ಟೈಟಾನ್ ಮಾರ್ಚ್ 21ರಂದು ರಷ್ಯಾದ ಯುರಲ್ಸ್ ಕಚ್ಚಾ ತೈಲದ ಸರಕುಗಳನ್ನು ಹೊತ್ತು ನವಮಂಗಳೂರು ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ತೋರಿಸಿದೆ.

ಜನವರಿ ಅಂತ್ಯದಲ್ಲಿ ಈ ಹಡಗು ಬಾಲ್ಟಿಕ್ ಸಮುದ್ರದ ಬಂದರಿನಿಂದ ತೈಲವನ್ನು ಲೋಡ್ ಮಾಡಿತ್ತು. ಆರಂಭದಲ್ಲಿ ಆ ಹಡಗು ಚೀನಾದ ರಿಜಾವೊ ಬಂದರಿಗೆ ಹೋಗಬೇಕೆಂದು ಸೂಚಿಸಲಾಗಿತ್ತು. ಆದರೆ, ಇದೀಗ ಆ ಹಡಗು ಯು-ಟರ್ನ್ ತೆಗೆದುಕೊಂಡು ಭಾರತಕ್ಕೆ ಆಗಮಿಸುತ್ತಿದೆ.

ಅಮೆರಿಕ ರಷ್ಯಾದ ಖರೀದಿಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸಲು ಭಾರತಕ್ಕೆ ಹಸಿರು ನಿಶಾನೆ ತೋರಿಸಿತ್ತು. ಇದಾದ ನಂತರ ಭಾರತೀಯ ಸಂಸ್ಕರಣಾಗಾರರು 30 ಮಿಲಿಯನ್ ಬ್ಯಾರೆಲ್‌ಗಳಷ್ಟು ರಷ್ಯಾದ ತೈಲವನ್ನು ಖರೀದಿಸಿದ್ದರು. ಇದು ಇರಾನ್‌ನಲ್ಲಿನ ಯುದ್ಧದಿಂದಾಗಿ ನಷ್ಟವಾದ ಮಧ್ಯಪ್ರಾಚ್ಯ ಪೂರೈಕೆಗಳನ್ನು ನಿಭಾಯಿಸಲು ಭಾರತಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಅಂದಿನಿಂದ, ಹೆಚ್ಚಿನ ದೇಶಗಳು ರಷ್ಯಾದಿಂದ ತೈಲ ಖರೀದಿಯನ್ನು ಪುನರಾರಂಭಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಇಂದು ಭಾರತಕ್ಕೆ ಬಂದು ಸೇರಲಿದೆ ಮತ್ತೆರಡು ತೈಲ ಹಡಗು: ಮಂಗಳೂರಿನಲ್ಲಿ 26 ಸಾವಿರ ಮೆಟ್ರಿಕ್‌ ಟನ್ LPG ಅನ್‌ಲೋಡ್‌

ವೋರ್ಟೆಕ್ಸಾ ಲಿಮಿಟೆಡ್ ಪ್ರಕಾರ, ರಷ್ಯಾದ ತೈಲವನ್ನು ಸಾಗಿಸುವ 7 ಟ್ಯಾಂಕರ್‌ಗಳು ಚೀನಾದ ಬದಲಾಗಿ ಭಾರತಕ್ಕೆ ಆಗಮಿಸುತ್ತಿವೆ. ತೈಲ ಟ್ಯಾಂಕರ್ ಮೊದಲು ರಷ್ಯಾದ ಕಪ್ಪು ಸಮುದ್ರದ ನೊವೊರೊಸಿಸ್ಕ್‌ನಿಂದ ಪಯಣಿಸಿತ್ತು. ಇದು ಆರಂಭದಲ್ಲಿ ಚೀನಾದ ರಿಝಾವೊ ಬಳಿಯ ನೀರಿನ ಕಡೆಗೆ ಸಾಗುತ್ತಿತ್ತು. ಇದೀಗ ಆ ಹಡಗನ್ನು ಭಾರತಕ್ಕೆ ತಿರುಗಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ 

Published On - 5:30 pm, Wed, 18 March 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ