AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ಮೆರೆದ ಭಾರತ

Iran-Israel War: ಇರಾನ್-ಇಸ್ರೇಲ್ ನಡುವಿನ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಪರವಾಗಿ ನಿಂತು ತಾನೂ ಇರಾನ್ ಮೇಲೆ ದಾಳಿ ನಡೆಸಿತ್ತು. ಹೀಗಾಗಿ, ಅಕ್ಕಪಕ್ಕದ ಈ ಎರಡು ದೇಶಗಳ ನಡುವಿನ ಯುದ್ಧದಲ್ಲಿ ಅಮೆರಿಕ ಕೂಡ ಮುಖ್ಯ ಭಾಗ ಪಡೆದಿದೆ. ಈ ಯುದ್ಧದಲ್ಲಿ ಭಾರತ ಯಾವ ದೇಶದ ಪರವಾಗಿದೆ ಎಂದು ಘೋಷಿಸದಿದ್ದರೂ ಮೊದಲಿನಿಂದಲೂ ಇಸ್ರೇಲ್ ಜೊತೆ ಭಾರತ ಸರ್ಕಾರ ಕೊಂಚ ಹೆಚ್ಚು ಆತ್ಮೀಯತೆ ಹೊಂದಿದೆ. ಇದೀಗ ಭಾರತ ಯುದ್ಧದಿಂದ ವಿನಾಶದಂಚಿಗೆ ತಲುಪಿರುವ ಇರಾನ್ ದೇಶಕ್ಕೆ ವೈದ್ಯಕೀಯ ಕಿಟ್​​ಗಳನ್ನು ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದೆ.

ಇರಾನ್​ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ಮೆರೆದ ಭಾರತ
India Sends Medical Aid To Iran
ಸುಷ್ಮಾ ಚಕ್ರೆ
|

Updated on:Mar 18, 2026 | 3:40 PM

Share

ನವದೆಹಲಿ, ಮಾರ್ಚ್ 18: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಇನ್ನೂ ನಿಂತಿಲ್ಲ. ಅತ್ತ ಇರಾನ್ ಕೂಡ ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಈ ಯುದ್ಧದಲ್ಲಿ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳಿಗೆ ಹಾನಿಯಾಗಿದ್ದು ಬಿಟ್ಟರೆ ಅಮೆರಿಕ ದೇಶದ ಮೇಲೆ ಯಾವುದೇ ದಾಳಿ ನಡೆದಿಲ್ಲ. ಆದರೆ, ಇಸ್ರೇಲ್ ಮತ್ತು ಇರಾನ್ ಅಕ್ಷರಶಃ ಸ್ಮಶಾನದಂತಾಗಿದೆ. ತನ್ನ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು. ಇದು ಜಾಗತಿಕವಾಗಿ ತೈಲ ಟ್ಯಾಂಕರ್​ಗಳು ಹಾದುಹೋಗುವ ಪ್ರಮುಖ ಜಲಮಾರ್ಗವಾಗಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಇರಾನ್ ವಿರುದ್ಧ ಬೇರೆ ದೇಶಗಳು ಯುದ್ಧನೌಕೆಗಳನ್ನು ಕಳುಹಿಸಿ ಎಚ್ಚರಿಕೆ ನೀಡಬೇಕೆಂದು ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಘೋಷಿಸಿದ್ದರು. ಇರಾನ್ (Iran War) ಮೇಲೆ ಮತ್ತೆ ದಾಳಿ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇದೆಲ್ಲದರ ನಡುವೆ ಭಾರತ ಇರಾನ್​ ದೇಶಕ್ಕೆ ವೈದ್ಯಕೀಯ ನೆರವು ನೀಡಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಪ್ರಧಾನಿ ಮೋದಿ ಬಹಳ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಶಾಂತಿ ಮಾತುಕತೆಯ ಮೂಲಕ ಯುದ್ಧಕ್ಕೆ ಅಂತ್ಯ ಹಾಡಲು ಮೋದಿ ಇಸ್ರೇಲ್​ಗೆ ಮನವಿ ಮಾಡಿದ್ದರು. ಈ ಯುದ್ಧ ಆರಂಭವಾದಾಗಿನಿಂದ ಹಲವು ಬಾರಿ ಇಸ್ರೇಲ್ ಜೊತೆ ಪ್ರಧಾನಿ ಮೋದಿ ಮಾತುಕತೆ ಕೂಡ ನಡೆಸಿದ್ದರು. ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ಬಗ್ಗೆ ಮೌನ ತಳೆದಿದ್ದ ಭಾರತ ಕೊನೆಗೆ ಖಮೇನಿಯ ಸಂತಾಪ ಸಭೆಯಲ್ಲಿ ಭಾಗವಹಿಸಿತ್ತು. ಇದಾದ ನಂತರ ಇರಾನ್ ಜೊತೆ ಮಾತುಕತೆ ನಡೆಸಿ ಭಾರತದ ತೈಲ ಟ್ಯಾಂಕರ್​ಗಳನ್ನು ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟ ಮಾಡಲು ಅನುಮತಿ ನೀಡಲು ಮವಿ ಮಾಡಲಾಗಿತ್ತು. ಅದಕ್ಕೆ ಒಪ್ಪಿದ್ದ ಇರಾನ್ ಭಾರತದ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಿತ್ತು. ಇದೀಗ ಭಾರತ ಇರಾನ್​ಗೆ ವೈದ್ಯಕೀಯ ನೆರವು ನೀಡಿದ್ದು, ಭಾರತೀಯರಿಗೆ ಹಾಗೂ ಭಾರತ ಸರ್ಕಾರಕ್ಕೆ ಇರಾನ್ ವಿಶೇಷವಾಗಿ ಧನ್ಯವಾದ ತಿಳಿಸಿದೆ.

ಇದನ್ನೂ ಓದಿ: ಟ್ರಂಪ್​ಗೆ ಭಾರೀ ಹೊಡೆತ; ಇರಾನ್ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕದ ಅಧಿಕಾರಿ ರಾಜೀನಾಮೆ

ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಬಗೆಹರಿಸಿಕೊಳ್ಳುವಂತೆ ಭಾರತ ಶಾಂತಿಯ ಮಂತ್ರ ಪಠಿಸುತ್ತಲೇ ಇದೆ. ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಇತರೆ ದೇಶಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಕ್ಕೆ ಇರಾನ್​ಗೆ ಎಲ್ಲ ದೇಶಗಳೂ ಸೇರಿ ಪಾಠ ಕಲಿಸಬೇಕೆಂದು ಟ್ರಂಪ್ ಹೇಳಿಕೆ ನೀಡಿದ್ದರು. ಈ ಕುರಿತು ಭಾರತ ಸೇರಿದಂತೆ ಥೈಲ್ಯಾಂಡ್, ಚೀನಾ ಮುಂತಾದ ದೇಶಗಳನ್ನು ಅಮೆರಿಕ ಸಂಪರ್ಕ ಮಾಡಿದ್ದು, ಹಾರ್ಮುಜ್ ಜಲಸಂಧಿಗೆ ಯುದ್ಧನೌಕೆಯನ್ನು ಕಳುಹಿಸಲು ಕೋರಿದೆ ಎನ್ನಲಾಗುತ್ತಿದೆ. ಆದರೆ, ಅಮೆರಿಕದ ಈ ಮನವಿಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

ಇದನ್ನೂ ಓದಿ: ಅಮೆರಿಕ, ಇಸ್ರೇಲ್ ನಮ್ಮೆದುರು ಮಂಡಿಯೂರಬೇಕು; ಇರಾನ್‌ ಸುಪ್ರೀಂ ನಾಯಕ ಪಟ್ಟು

ಯುದ್ಧದಿಂದ ಕಂಗೆಟ್ಟಿರುವ ಇರಾನ್ ದೇಶಕ್ಕೆ ಭಾರತದಿಂದ ವೈದ್ಯಕೀಯ ಕಿಟ್​ಗಳು ರವಾನೆಯಾಗಿದೆ. ಇವು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಗೆ ತಲುಪಿದೆ. ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಒಳಗೊಂಡಿರುವ ಈ ಕಿಟ್​ಗಳನ್ನು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಗೆ ತಲುಪಿಸಲಾಗಿದೆ. ಇದು ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ಮಾನವೀಯತೆಯ ನಿರ್ಧಾರವಾಗಿದೆ.

ಭಾರತದಲ್ಲಿನ ಇಸ್ಲಾಮಿಕ್ ಗಣರಾಜ್ಯ ಇರಾನ್ ರಾಯಭಾರ ಕಚೇರಿಯು ಭಾರತದ ಈ ನೆರವನ್ನು ಒಪ್ಪಿಕೊಂಡಿದೆ. ಹಾಗೇ, ಭಾರತೀಯ ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ. ಇರಾನ್​ನ ರಾಯಭಾರ ಕಚೇರಿಯು ಭಾರತದಿಂದ ಕಳುಹಿಸಲಾದ ವೈದ್ಯಕೀಯ ಸಾಮಗ್ರಿಗಳ ವಿತರಣೆಯನ್ನು ತೋರಿಸುವ ವೀಡಿಯೊ ತುಣುಕನ್ನು ಸಹ ಹಂಚಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ 

Published On - 3:35 pm, Wed, 18 March 26

Follow Us