ಮುಡಾ ಹಗರಣ: ಕೋಕನಟ್ ಕೋಡ್ವರ್ಡ್ ಬಳಸಿ ಅಕ್ರಮ ವ್ಯವಹಾರ, ಇಡಿ ತನಿಖೆಯಲ್ಲಿ ಬಯಲು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಇಡಿ 300 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಬಿಲ್ಡರ್ ಜಯರಾಮ್ "ಕೋಕನಟ್" ಕೋಡ್ ವರ್ಡ್ ಬಳಸಿ ಕಪ್ಪು ಹಣ ವ್ಯವಹಾರ ನಡೆಸುತ್ತಿದ್ದ ಎಂದು ಪತ್ತೆಯಾಗಿದೆ. 631 ನಿವೇಶನಗಳ ಅಕ್ರಮದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಇಡಿ ತನಿಖೆ ಚುರುಕಾಗಿದೆ.

ಮುಡಾ ಹಗರಣ: ಕೋಕನಟ್ ಕೋಡ್ವರ್ಡ್ ಬಳಸಿ ಅಕ್ರಮ ವ್ಯವಹಾರ, ಇಡಿ ತನಿಖೆಯಲ್ಲಿ ಬಯಲು
ಮುಡಾ
Follow us
ದಿಲೀಪ್​, ಚೌಡಹಳ್ಳಿ
| Updated By: ವಿವೇಕ ಬಿರಾದಾರ

Updated on:Jan 19, 2025 | 8:54 AM

ಮೈಸೂರು, ಜನವರಿ 19: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿದೆ. ಈ ಹಿಂದೆ ಇಡಿ (ED) ದಾಳಿಗೆ ಒಳಗಾಗಿದ್ದ ಮೈಸೂರು ಮೂಲದ ಬಿಲ್ದಡ್​ ಜಯರಾಮ್​ ಕೋಕನಟ್ ಕೋಡ್ವರ್ಡ್​ ಬಳಸಿ ಅಕ್ರಮ ವ್ಯವಹಾರ ನಡೆಸುತ್ತಿದ್ದನು ಎಂದು ಜಾರಿ ನಿರ್ದೇಶನಾಯಲ ಪತ್ತೆ ಹಚ್ಚಿದೆ.

ಮುಡಾದಲ್ಲಿ ನಡೆದಿರುವ ಹಗರಣದಲ್ಲಿ ಬಿಲ್ಡರ್ ಜಯರಾಮ್ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇನಾಮಿಯಾಗಿದ್ದ ಎಂದು ಹೇಳಲಾಗುತ್ತಿದೆ. ಅದರಲ್ಲೂ ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದಿಂದ ಸಾಕಷ್ಟು ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಅಲ್ಲದೇ, ಇಲ್ಲಿ ಸಾಕಷ್ಟು ಕಪ್ಪು ಹಣದ ವ್ಯವಹಾರ ಕೂಡ ನಡೆದಿದ್ದು, ಇದಕ್ಕೆ ಜಯರಾಮ್ ಕೋಕನಟ್ ​ಎಂದು ಕೋಡ್ವರ್ಡ್ ಬಳಸುತ್ತಿದ್ದನು ಎಂದು ಇಡಿ ತನಿಖೆ ವೇಳೆ ಬಯಲಾಗಿದೆ.

1 ಕೋಕನಟ್ಎಂದರೆ 1 ಲಕ್ಷ ರೂ. 50 ಕೋಕನಟ್​ ಎಂದರೆ 50 ಲಕ್ಷ ರೂ. ಮತ್ತು 100 ಕೋಕನಟ್​ ಎಂದರೆ 1 ಕೋಟಿ ಎಂದು ಕೋಡ್ವರ್ಡ್ ಬಳಸುತ್ತಿದ್ದನು ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಮುಟ್ಟುಗೋಲು ಹಾಕಿಕೊಂಡ 142 ನಿವೇಶನದ ಮಾಹಿತಿ ಬಹಿರಂಗಪಡಿಸಿ; ಮುಡಾ ಆಯುಕ್ತರಿಗೆ ಸ್ನೇಹಮಯಿ ಕೃಷ್ಣ ಪತ್ರ

300 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಬಳಿಕ, ಇಡಿ ಅಧಿಕಾರಿಗಳು 631 ನಿವೇಶನಗಳ ವಿವರ ಕೇಳಿ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ 631 ನಿವೇಶನಗಳ ಅಕ್ರಮದಲ್ಲಿ ಬಹುತೇಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಭಾಗಿಯಾಗಿದ್ದಾರೆ. ಇದರಲ್ಲಿ, ಮುಡಾ ಮಾಜಿ ಆಯುಕ್ತರಿಗೆ ಸೇರಿದ 198 ಬೇನಾಮಿ ನಿವೇಶನಗಳಿವೆ ಎಂದು ತಿಳಿದುಬಂದಿದೆ.

ಅದೇ ರೀತಿ ಮುಡಾದ ಅಧಿಕಾರಿ ಒಬ್ಬರಿಗೆ ಅಕ್ರಮವಾಗಿ 92 ನಿವೇಶನಗಳನ್ನು ಹಾಗೂ ಮೈಸೂರಿನ ಎಂಎಲ್​ಸಿ ಒಬ್ಬರಿಗೆ 128 ನಿವೇಶನಗಳನ್ನು ಅಕ್ರಮವಾಗಿ ಬದಲಿ ನಿವೇಶನ ಹಾಗೂ ಬಿಟ್ ಲ್ಯಾಡ್ ಮೂಲಕ ನೀಡಲಾಗಿದೆ. ನಿವೇಶನಗಳ ವ್ಯವಹಾರದಲ್ಲಿ ಕಪ್ಪು ಹಣ ವರ್ಗಾವಣೆ ಕೂಡ ನಡೆದಿರುವ ಮಾಹಿತಿ ಸಿಕ್ಕಿದೆ. ಇದರಿಂದ 631 ನಿವೇಶನಗಳ ವಿವವರವನ್ನು ತುರ್ತಾಗಿ ನೀಡಿ ಅಂತ ಮುಡಾ ಆಯುಕ್ತರಿಗೆ ಇಡಿ ಪತ್ರ ಬರೆದಿದೆ. ಇಡಿ ತನಿಖೆ ಇದೀಗಾ ಮತ್ತೆ ಚುರುಕಾಗಿದ್ದು, ಮುಡಾ ಭ್ರಷ್ಟರಿಗೆ ಮತ್ತೆ ನಡುಕ ಶುರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:44 am, Sun, 19 January 25

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್