ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೋಲ್​ಮಾಲ್: ಕರ್ನಾಟಕ ಯೂತ್ ಕಾಂಗ್ರೆಸ್ ನಾಯಕರಿಂದಲೇ ಹೈಕಮಾಂಡ್​ಗೆ ದೂರು

ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೋಲ್​ಮಾಲ್: ಕರ್ನಾಟಕ ಯೂತ್ ಕಾಂಗ್ರೆಸ್ ನಾಯಕರಿಂದಲೇ ಹೈಕಮಾಂಡ್​ಗೆ ದೂರು
ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್

ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅವರನ್ನ ಕೆಳಗಿಳಿಸಿ. ಇಲ್ಲದಿದ್ರೆ ರಾಜ್ಯದಲ್ಲಿ ಯೂತ್ ಕಾಂಗ್ರೆಸ್ ಮುಳುಗಲಿದೆ ಎಂದು ಹೈಕಮಾಂಡ್​​ಗೆ ಯೂತ್ ಕಾಂಗ್ರೆಸ್ ನಾಯಕರು ದೂರು ಕೊಟ್ಟಿದ್ದಾರೆ.

TV9kannada Web Team

| Edited By: ganapathi bhat

Jan 30, 2022 | 7:10 PM

ಬೆಂಗಳೂರು: ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್​ಗೆ ದೂರು ನೀಡಲಾಗಿದೆ. ಕರ್ನಾಟಕ ರಾಜ್ಯ ಯೂತ್ ಕಾಂಗ್ರೆಸ್ ನಾಯಕರಿಂದ ದೂರು ಸಲ್ಲಿಕೆ ಮಾಡಲಾಗಿದೆ. ಪದಾಧಿಕಾರಿಗಳ ನೇಮಕದಲ್ಲಿ ಗೋಲ್​​ಮಾಲ್ ನಡೆದಿದೆ. ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೋಲ್​ಮಾಲ್ ಆಗಿದೆ. ರಕ್ಷಾರಾಮಯ್ಯ, ನಲಪಾಡ್ ಬಳಿ ಹಣ ಪಡೆಯಲಾಗಿದೆ. ಹಣ ಪಡೆದು ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿರುದ್ಧ ದೂರು ಸಲ್ಲಿಕೆ ಮಾಡಲಾಗಿದೆ.

ಈಗ ಪದಾಧಿಕಾರಿಗಳ ನೇಮಕದಲ್ಲೂ ಗೋಲ್​ಮಾಲ್ ನಡೆದಿದೆ. ಚುನಾವಣೆಯಲ್ಲಿ ಟಿಕೆಟ್ ಕೊಡಿಸೋದಾಗಿ ಹಣ ವಸೂಲಿ ಮಾಡಲಾಗಿದೆ. ಬಿ.ವಿ. ಶ್ರೀನಿವಾಸ್​ ಕೋಟಿಗಟ್ಟಲೇ ಆಸ್ತಿ ಸಂಪಾದಿಸಿದ್ದಾರೆ ಎಂದು ಶ್ರೀನಿವಾಸ್ ವಿರುದ್ಧ ಹೈಕಮಾಂಡ್​ಗೆ ಇ-ಮೇಲ್ ರವಾನೆ ಮಾಡಲಾಗಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ರಾಜ್ಯ ಯೂತ್ ಕಾಂಗ್ರೆಸ್ ನಾಯಕರು ಇ-ಮೇಲ್ ಮೂಲಕ ದೂರು ಕೊಟ್ಟಿದ್ದಾರೆ.

ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅವರನ್ನ ಕೆಳಗಿಳಿಸಿ. ಇಲ್ಲದಿದ್ರೆ ರಾಜ್ಯದಲ್ಲಿ ಯೂತ್ ಕಾಂಗ್ರೆಸ್ ಮುಳುಗಲಿದೆ ಎಂದು ಹೈಕಮಾಂಡ್​​ಗೆ ಯೂತ್ ಕಾಂಗ್ರೆಸ್ ನಾಯಕರು ದೂರು ಕೊಟ್ಟಿದ್ದಾರೆ.

ನಾನು, ರಕ್ಷಾರಾಮಯ್ಯ ಯಾರೂ ಕೂಡ ದುಡ್ಡು ಕೊಟ್ಟಿಲ್ಲ: ಮೊಹ್ಮದ್​ ನಲಪಾಡ್​​ ಪ್ರತಿಕ್ರಿಯೆ

ಬಿ.ವಿ. ಶ್ರೀನಿವಾಸ್ ವಿರುದ್ಧ ಕಾಂಗ್ರೆಸ್ ವರಿಷ್ಠರಿಗೆ ದೂರು ವಿಚಾರವಾಗಿ ಬೆಂಗಳೂರಿನಲ್ಲಿ ಮೊಹ್ಮದ್​ ನಲಪಾಡ್​​ ಪ್ರತಿಕ್ರಿಯೆ ನೀಡಿದ್ದಾರೆ. ನಾನು, ರಕ್ಷಾರಾಮಯ್ಯ ಯಾರೂ ಕೂಡ ದುಡ್ಡು ಕೊಟ್ಟಿಲ್ಲ. ಶ್ರೀನಿವಾಸ್​​ ಮೇಲೆ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಬಿ.ವಿ.ಶ್ರೀನಿವಾಸ್ ಮೇಲಿನ ಆರೋಪ ನೂರಕ್ಕೆ ನೂರು ಸುಳ್ಳು ಎಂದು ನಲಪಾಡ್ ಹೇಳಿದ್ದಾರೆ. ಅವರು ನಮ್ಮಿಂದ ಒಂದು ಗ್ಲಾಸ್ ಟೀ ಕೂಡ ಕುಡಿದವರಲ್ಲ. ನಮಗೆ ನಾಯಕರಾಗಿ ಸಹಾಯ ಮಾಡುತ್ತಿದ್ದಾರೆ. ರಾಜಕೀಯವಾಗಿ ಹೆಸರು ಕೆಡಿಸಲು ಮಾಡ್ತಿರುವ ಕೃತ್ಯ ಇದು. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ನಲಪಾಡ್​​ ಆಗ್ರಹಿಸಿದ್ದಾರೆ.

ಶ್ರೀನಿವಾಸ್ ಕೊರೊನಾ ಕಾಲದಲ್ಲಿ ಇಡಿ ದೇಶದ ಬೇರೆ-ಬೇರೆ ಭಾಗಕ್ಕೆ ಆಕ್ಸಿಜನ್ ತಲುಪಿಸಿದ್ದಾರೆ. ಈ ಮೂಲಕ ಆಕ್ಸಿಜನ್ ಮ್ಯಾನ್ ಅಂತಾ ಖ್ಯಾತಿ ಪಡೆದಿದ್ದಾರೆ. ಅವರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡಲಾಗ್ತಿದೆ. ಈ ಲೆಟರ್​ನಲ್ಲಿ ಸೈನ್ ಮಾಡಿದ ಯಾರೂ ಕೂಡ ಯೂತ್ ಕಾಂಗ್ರೆಸ್ ಸದಸ್ಯರಲ್ಲ. ನಾನು, ರಕ್ಷಾರಾಮಯ್ಯ ಯಾರೂ ಕೂಡ ಅವರಿಗೆ ದುಡ್ಡು ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೊಹಮ್ಮದ್ ನಲಪಾಡ್ ಬೆಂಬಲಿಗರಿಂದ ಕ್ಲಬ್​ನಲ್ಲಿ ಪಾರ್ಟಿ ವೇಳೆ ಹಲ್ಲೆ ಆರೋಪ; ಅಂತಹ ಘಟನೆ ನಡೆದಿಲ್ಲ ಎಂದ ನಲಪಾಡ್

ಇದನ್ನೂ ಓದಿ: ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಯುಟಿ ಖಾದರ್ ನೇಮಕ; ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆ

Follow us on

Related Stories

Most Read Stories

Click on your DTH Provider to Add TV9 Kannada