ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಮಾಡಿದ್ದ ಐವರ ಬಂಧನ; ಮತ್ತೊಂದೆಡೆ ವಿಷ ಸೇವಿಸಿ ಕುಟುಂಬದಿಂದ ಆತ್ಮಹತ್ಯೆಗೆ ಯತ್ನ, ಒಬ್ಬರ ಸಾವು

ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಮಾಡಿದ್ದ ಐವರ ಬಂಧನ; ಮತ್ತೊಂದೆಡೆ ವಿಷ ಸೇವಿಸಿ ಕುಟುಂಬದಿಂದ ಆತ್ಮಹತ್ಯೆಗೆ ಯತ್ನ, ಒಬ್ಬರ ಸಾವು
ಪ್ರಾತಿನಿಧಿಕ ಚಿತ್ರ

ಜನವರಿ 23ರಂದು ಮೊಹಮ್ಮದ್ ಶೋಯಬ್ ರಬಾನಿ ಮತ್ತು ದುರ್ಗೇಶ್ ಎಂಬುವವರು ನಕಲಿ ಐಡಿ ತೋರಿಸಿ ತಾವು ಐಟಿ ಅಧಿಕಾರಿಗಳು ಎಂದು ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿದ್ದರು. ಬಳಿಕ 45 ನಿಮಿಷ ಮನೆಯ ತಲಾಶ್ ಮಾಡಿ ಮನೆಯಲ್ಲಿದ್ದ 3.5 ಲಕ್ಷ ನಗದು, ಹಾಗೂ ಒಂದು ಪಿಸ್ತೂಲ್ ತೆಗೆದುಕೊಂಡು ಪರಾರಿಯಾಗಿದ್ದರು.

TV9kannada Web Team

| Edited By: Ayesha Banu

Jan 28, 2022 | 2:23 PM

ಬೆಂಗಳೂರು: ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಮಾಡಿದ್ದ ಖತರ್ನಾಕ್ ಗ್ಯಾಂಗ್ನ ಪೊಲೀಸರು ಸೆರೆ ಹಿಡಿದಿದ್ದಾರೆ. ಬೆಂಗಳೂರಿನ ಸಂಜಯನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಸ್ಥಳೀಯ ಪತ್ರಿಕೆ ಸಂಪಾದಕ ಮಂಜುನಾಥ್, ರಿಯಲ್ ಎಸ್ಟೆಟ್ ಬ್ರೋಕರ್ ಗಳಾದ ಪ್ರಶಾಂತ್, ಕುಮಾರ್, ದುರ್ಗೇಶ್, ಮಹಮದ್ ಶೋಯಬ್ ರಬ್ಬಾನಿ ಬಂಧಿತ ಆರೋಪಿಗಳು. ಜನವರಿ 23ರಂದು ನಕಲಿ ಐಡಿ ತೋರಿಸಿ ಇಬ್ಬರು ಆರೋಪಿಗಳು ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿದ್ದರು. ಮನೆ ಪ್ರವೇಶಿಸಿ ಶೋಧ ನಡೆಸಿದ್ದ ಆರೋಪಿ ಮೊಹಮ್ಮದ್ ಶೋಯಬ್ ರಬಾನಿ ಮತ್ತು ದುರ್ಗೇಶ್ 3.5 ಲಕ್ಷ ನಗದು, ಒಂದು ಪಿಸ್ತೂಲ್ ಜತೆ ಪರಾರಿಯಾಗಿದ್ದರು. ಈ ವೇಳೆ ಅನುಮಾನದಿಂದ ಪೊಲೀಸ್ ಠಾಣೆಗೆ ಉದ್ಯಮಿ ದೂರು ನೀಡಿದ್ದು ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಜನವರಿ 23ರಂದು ಮೊಹಮ್ಮದ್ ಶೋಯಬ್ ರಬಾನಿ ಮತ್ತು ದುರ್ಗೇಶ್ ಎಂಬುವವರು ನಕಲಿ ಐಡಿ ತೋರಿಸಿ ತಾವು ಐಟಿ ಅಧಿಕಾರಿಗಳು ಎಂದು ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿದ್ದರು. ಬಳಿಕ 45 ನಿಮಿಷ ಮನೆಯ ತಲಾಶ್ ಮಾಡಿ ಮನೆಯಲ್ಲಿದ್ದ 3.5 ಲಕ್ಷ ನಗದು, ಹಾಗೂ ಒಂದು ಪಿಸ್ತೂಲ್ ತೆಗೆದುಕೊಂಡು ಪರಾರಿಯಾಗಿದ್ದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮಿ ನೀಡಿದ ದೂರು ಸಂಬಂಧ ತನಿಖೆ ಕೈಗೊಂಡ ಸಂಜಯ್ ನಗರ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ರಿಯಲ್ ಎಸ್ಟೇಟ್ ಬ್ರೋಕರ್ಗಳ ಜೊತೆ ಸ್ಥಳೀಯ ಪತ್ರಿಕೆ ಉಪಸಂಪಾದಕ ಸೇರಿ ಈ ನಕಲಿ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ. ದೂರುದಾರರ ತಂದೆ, ರಿಯಲ್ ಎಸ್ಟೇಟ್ ಬ್ರೋಕರ್ಗಳ ಜೊತೆ ವ್ಯವಹಾರ ನಡೆಸಿದ್ದರು. ಈ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಆದಾಯ ತೆರಿಗೆ ಅಧಿಕಾರಿಗಳೆಂದು ನಕಲಿ ದಾಳಿ ಮಾಡಿದ್ದಾರೆ. ಸ್ಥಳೀಯ ಪತ್ರಿಕೆ ಸಂಪಾದಕ ಮಂಜುನಾಥ್, ರಿಯಲ್ ಎಸ್ಟೆಟ್ ಬ್ರೋಕರ್ ಗಳಾದ ಪ್ರಶಾಂತ್, ಕುಮಾರ್, ದುರ್ಗೇಶ್, ಮಹಮದ್ ಶೋಯಬ್ ರಬ್ಬಾನಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ ಇನ್ನು ಮತ್ತೊಂದೆಡೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಪತ್ನಿ ಗೀತಾ(37) ಮನೆಯಲ್ಲೇ ಮೃತಪಟ್ಟಿದ್ದಾರೆ. ಪತಿ ಭಾನುಪ್ರಕಾಶ್(40), ಪುತ್ರಿ ಲೇಖನಾ(14) ಸ್ಥಿತಿ ಗಂಭೀರವಾಗಿದೆ. ಆತ್ಮಹತ್ಯೆಗೆ ಯತ್ನಿಸಿದವರನ್ನು ಸಪ್ತಗಿರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಾಲಿಗೆ ರಾಸಾಯನಿಕ ಬೆರೆಸಿಕೊಂಡು ಸೇವಿಸಿ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆ.

ಓನರ್ ಕಂ ಡ್ರೈವರ್ ಆಗಿ ಕಾರು ಚಾಲನೆ ಮಾಡುತ್ತಿದ್ದ ಭಾನುಪ್ರಕಾಶ್, ತನ್ನ ಬೈಕಿನಲ್ಲಿ ದಿನನಿತ್ಯ ಹಾಲು, ಪೇಪರ್ ಕೂಡ ಹಾಕುತ್ತಿದ್ರು. ಸಂಬಂಧಿಗಳ ಬಳಿ 10ಕ್ಕೂ ಹೆಚ್ಚು ಕಡೆ ಸಾಲ ಮಾಡಿದ್ದ ಭಾನುಪ್ರಕಾಶ್ ಲಾಕ್ ಡೌನ್ ಮಧ್ಯೆ ಅರ್ಥಿಕ ಸಂಕಷ್ಟಕ್ಕೀಡಾಗಿದ್ದರು. ಬಾಗಲಗುಂಟೆಯಲ್ಲಿ ಚಿಕ್ಕದಾದ ಸ್ವಂತ ಮನೆ ಇತ್ತು. ಸದ್ಯ ಈ ಸಂಬಂಧ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಬೆಳಗಿನ ಜಾವ ಒಂದೇ ಮನೆಯ ಮೂರು ಜನ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ ಓರ್ವ ಮಹಿಳೆ ಸಾವನಪ್ಪಿದ್ದಾರೆ. ಉಳಿದ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಗಲಗುಂಟೆ ಪೊಲೀಸರಿಂದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ರು.

ಇದನ್ನೂ ಓದಿ: Big Breaking: ಸೋನು ಸೂದ್​ಗೆ ಸಂಕಷ್ಟ?; ನಟನಿಗೆ ಸೇರಿದ ಆರು ಜಾಗಗಳಲ್ಲಿ ಐಟಿ ಅಧಿಕಾರಿಗಳ ಸರ್ವೇ

Follow us on

Related Stories

Most Read Stories

Click on your DTH Provider to Add TV9 Kannada