ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಲು ಖ್ಯಾತ ಜ್ಯೋತಿಷಿಗಳೂ ಆಗಮಿಸಿದರು!

ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ 6 ತಿಂಗಳು ಅಧಿಕಾರದಲ್ಲಿದ್ದಿದ್ದು ಸಹ ಸಾಧನೆಯಾಗಿ ಬಿಟ್ಟಿದೆ. ಬದಲಾಗುತ್ತಿರುವ ರಾಜಕೀಯ ಸಮೀಕರಣಗಳಲ್ಲಿ ಇದು ಸಾಧನೆಯೇ ಹೌದು ಮಾರಾಯ್ರೇ. ಹಿಂದೆ ರಾಜ್ಯ ರಾಜಕಾರಣದಲ್ಲಿ ಏನೆಲ್ಲ ನಡೆಯಿತು ಅಂತ ಕನ್ನಡಿಗರಿಗೆ ಚೆನ್ನಾಗಿ ಗೊತ್ತಿದೆ. ಮುಂದೆ ನಡೆಯಲಿರುವ ವಿದ್ಯಮಾನಗಳ ಬಗ್ಗೆಯೂ ಅವರಿಗೆ ಸುಳಿವಿದೆ.

TV9kannada Web Team

| Edited By: Arun Belly

Jan 28, 2022 | 11:28 PM

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ತಮ್ಮ 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ದೇಶದೆಲ್ಲೆಡೆಯಿಂದ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿ, ಟ್ವೀಟ್​ಗಳು, ಸಂದೇಶಗಳು ಮತ್ತು ಕರೆಗಳು ಬಂದಿವೆ. ಸಿಎಮ್ ಹುಟ್ಟುಹಬ್ಬದ ಸಂಭ್ರಮಕ್ಕೆ ಪುಟವಿಟ್ಟಂತೆ ಶುಕ್ರವಾರದಂದೇ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಾವಧಿಯ 6 ತಿಂಗಳನ್ನು ಪೂರೈಸಿದೆ. ಸೋನೆ ಪೆ ಸುಹಾಗಾ ಅಂತ ಹಿಂದಿ ಭಾಷೆಯಲ್ಲಿ ಹೇಳಿದ ಹಾಗೆ. ಮುಖ್ಯಮಂತ್ರಿಗಳ ಮನೆವರೆಗೂ ಬಂದು ವಿಶ್ ಮಾಡಿದ ಗಣ್ಯರಲ್ಲಿ ಕೆಲವು ಹೆಸರಾಂತ ಜ್ಯೋತಿಷಿಗಳು ಸಹ ಸೇರಿದ್ದರು. ಬೆಳ್ಳಂಬೆಳಗ್ಗೆಯೇ ಅವರು ಮುಖ್ಯಮಂತ್ರಿಗಳ ನಿವಾಸದ ಬಳಿ ಕಾಣಿಸಿಕೊಂಡರು. ನಿವಾಸದ ಹೊರಗೆ ಕೆಲ ಅಧಿಕಾರಿಗಳು ಜ್ಯೋತಿಷಿಗಳನ್ನು ಬರಮಾಡಿಕೊಂಡರು. ಹಿಂದೆ, ಬಿಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳು ಆಗಿದ್ದಾಗ ಜ್ಯೋತಿಷಿಗಳನ್ನು ನಿಯಮಿತವಾಗಿ ಭೇಟಿಯಾಗುತ್ತಿದ್ದರು.

ಜ್ಯೋತಿಷಿಗಳು ಅಧಿಕಾರದಲ್ಲಿರುವ ನಾಯಕರು ಮತ್ತು ವಿರೋಧ ಪಕ್ಷಗಳ ಪ್ರಮುಖ ನಾಯಕರೊಂದಿಗೆ ಒಟನಾಟ ಇಟ್ಟುಕೊಳ್ಳುವುದು ಎಲ್ಲ ರಾಜ್ಯಗಳಲ್ಲಿ ಕಂಡು ಬರುತ್ತದೆ. ಇವರಿಬ್ಬರಲ್ಲಿ ಯಾರು ಯಾರಿಗೆ ಅನಿವಾರ್ಯ ಅನ್ನೋದು ಜನಸಮಾನ್ಯರಿಗೆ ಗೊತ್ತಾಗದು.

ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ 6 ತಿಂಗಳು ಅಧಿಕಾರದಲ್ಲಿದ್ದಿದ್ದು ಸಹ ಸಾಧನೆಯಾಗಿ ಬಿಟ್ಟಿದೆ. ಬದಲಾಗುತ್ತಿರುವ ರಾಜಕೀಯ ಸಮೀಕರಣಗಳಲ್ಲಿ ಇದು ಸಾಧನೆಯೇ ಹೌದು ಮಾರಾಯ್ರೇ. ಹಿಂದೆ ರಾಜ್ಯ ರಾಜಕಾರಣದಲ್ಲಿ ಏನೆಲ್ಲ ನಡೆಯಿತು ಅಂತ ಕನ್ನಡಿಗರಿಗೆ ಚೆನ್ನಾಗಿ ಗೊತ್ತಿದೆ. ಮುಂದೆ ನಡೆಯಲಿರುವ ವಿದ್ಯಮಾನಗಳ ಬಗ್ಗೆಯೂ ಅವರಿಗೆ ಸುಳಿವಿದೆ.

ಎಲ್ಲವನ್ನೂ ನೋಡುತ್ತಾ ಕೆಲವನ್ನು ಗಮನಿಸುತ್ತಾ ಹೋಗುವುದರಲ್ಲಿ ಒಂದು ಬಗೆಯ ಖುಷಿ ಅಂತೂ ಸಿಕ್ಕೇ ಸಿಗುತ್ತದೆ.

ಇದನ್ನೂ ಓದಿ:    ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತೇವೆ: ಬಿಜೆಪಿ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

Follow us on

Click on your DTH Provider to Add TV9 Kannada