ಬೆಂಗಳೂರಲ್ಲಿ ಜೊಮ್ಯಾಟೋ ಡೆಲಿವರಿ ಹುಡುಗರು ಮತ್ತು ಕೇರಳ ಮೂಲದ ಹೋಟೆಲ್ ಸಿಬ್ಬಂದಿ ನಡುವೆ ರಂಪಾಟ

ಹೋಟಲ್ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಕೇರಳದ ಮೂಲದವರು ಡೆಲಿವರಿ ಬಾಯ್ ಗಳೊಂದಿಗೆ ಸಭ್ಯತೆಯಿಂದ ವರ್ತಿಸುವುದನ್ನು ಕಲಿಯಬೇಕು. ಅವರು ಹೋಟೆಲ್ ಆಳುಗಳಲ್ಲ ಬೇರೆ ಕಂಪನಿಗಳಿಗೆ ಕೆಲಸ ಮಾಡುತ್ತಾ ಅವರಿಗೂ ಬಿಸಿನೆಸ್ ಕೊಡಿಸುತ್ತಿರುವ ಶ್ರಮಜೀವಿಗಳು.

TV9kannada Web Team

| Edited By: Arun Belly

Jan 28, 2022 | 9:02 PM

ಸಿದ್ಧ ಆಹಾರ ಡೆಲಿವರಿ ಬಾಯ್ಗಳಾಗಿ ಬೇರೆ ಬೇರೆ ಸಂಸ್ಥೆಗಳಿಗೆ ಕೆಲಸ ಮಾಡುವ ಹುಡುಗರದ್ದು ಥ್ಯಾಂಕ್ ಲೆಸ್ ಜಾಬ್ (thankless job) ಮಾರಾಯ್ರೇ. ಡೆಲಿವರಿ ತಲುಪುವುದು ಸ್ವಲ್ಪವೇ ತಡವಾದರೂ ಗ್ರಾಹಕ ಮನಬಂದಂತೆ ಗದರುತ್ತಾನೆ. ಊಟ ಬೇಗ ಪ್ಯಾಕ್ ಮಾಡಿಕೊಡಿ ಅಂದರೆ, ಹೋಟೆಲ್ ಮಾಲೀಕ ಮತ್ತು ಅಲ್ಲಿ ಕೆಲಸಮಾಡುವವರು ಬಯ್ಯುತ್ತಾರೆ. ಇಬ್ಬರಲ್ಲಿ ಯಾರಾದರೂ ಅವರು ಕೆಲಸ ಮಾಡುವ ಜೊಮ್ಯಾಟೋ (Zomato), ಸ್ವಿಗ್ಗಿ (Swiggy), ಡುನ್ಜೋ (Dunzo) ಅಥವಾ ಇನ್ಯಾವುದೋ ಕಂಪನಿಗೆ ಫೋನ್ ಮಾಡಿ ದೂರು ಹೇಳಿದರೆ, ಕೆಲಸಕ್ಕೆ ಸಂಚಕಾರ. ಇಲ್ಲದಿದ್ದರೆ ಸಂಬಳದಲ್ಲಿ ಕಡಿತ. ಬೆಂಗಳೂರಿನ ಹುಚ್ಚು ಟ್ರಾಫಿಕ್ ನಲ್ಲಿ ಈ ಎಲ್ಲ ಒತ್ತಡಗಳೊಂದಿಗೆ ಡೆಲಿವರಿ ಹುಡುಗರು (delivery boys) ಕೆಲಸ ಮಾಡಬೇಕು. ಅಪಾರ ಪ್ರೆಶರ್ ನಲ್ಲಿ ಕೆಲಸ ಮಾಡುವ ಅವರು ಕೆಲ ಸಂದರ್ಭಗಳಲ್ಲಿ ತಾಳ್ಮೆ ಕಳೆದುಕೊಳ್ಳುವುದು ಉಂಟು ಮಾರಾಯ್ರೇ. ಇಂಥ ಒಂದು ಘಟನೆ ನಗರದ ಬಿಟಿಎಮ್ ಲೇಔಟ್ನ ಒಂದು ಹೋಟೆಲ್ ಸಿಬ್ಬಂದಿ ಮತ್ತು ಜೊಮ್ಯಾಟೋ ಸಂಸ್ಥೆಯ ಡೆಲಿವರಿ ಬಾಯ್ಸ್ ನಡುವೆ ಗುರುವಾರ ನಡೆದಿದೆ. ಮೈಕೋ ಲೇಔಟ್ ವ್ಯಾಪ್ತಿಯಲ್ಲಿ ಬರುವ ಸದರಿ ಹೋಟೆಲ್ ಮಲಯಾಳಿ ಒಬ್ಬನಿಗೆ ಸೇರಿದ್ದು ಮತ್ತು ಅಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನವರು ಮಲ್ಲುಗಳು.

ಡೆಲಿವರಿ ಬಾಯ್ ಆರ್ಡರ್ ತೆಗೆದುಕೊಳ್ಳುವ ವೇಳೆ ಜಗಳ ಶುರುವಾಗಿದೆ. ಹುಡುಗರು ಮಾತಾಡಿಕೊಳ್ಳುತ್ತಿರುವ ಪ್ರಕಾರ ಹೋಟೆಲ್ ಸಿಬ್ಬಂದಿಯೊಬ್ಬ ಡೆಲಿವರಿ ಬಾಯ್ ಮೇಲೆ ಕೈ ಮಾಡಿದ್ದಾನೆ. ಅಲ್ಲಿಯೇ ಇದ್ದ ಇತರ ಬಾಯ್​ಗಳು ರೊಚ್ಚಿಗೆದ್ದು ಗಲಾಟೆ ಆರಂಭಿಸಿದ್ದಾರೆ. ಹೋಟೆಲ್ ಆವರಣದಲ್ಲಿದ್ದ ಹೂಕುಂಡಗಳನ್ನು ರೋಡಿಗೆ ಬಿಸಾಡಿ ತಮ್ಮ ಕೋಪ ಪ್ರದರ್ಶಿಸಿದ್ದಾರೆ.

ಡೆಲಿವರಿ ಬಾಯ್ಸ್ ಎಲ್ಲ ಒಟ್ಟುಗೂಡಿ ಗಲಾಟೆ ಪ್ರಾರಂಭಿಸಿದ ಮೇಲೆ ಹೋಟೆಲ್​ನವರು ತೆಪ್ಪಗಾಗಿದ್ದಾರೆ. ದೂರು ಪ್ರತಿದೂರು ಸಲಿಕೆಯೇನೂ ಅಗಿಲ್ಲ. ಆದರೆ, ಹೋಟಲ್ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಕೇರಳದ ಮೂಲದವರು ಡೆಲಿವರಿ ಬಾಯ್ ಗಳೊಂದಿಗೆ ಸಭ್ಯತೆಯಿಂದ ವರ್ತಿಸುವುದನ್ನು ಕಲಿಯಬೇಕು. ಅವರು ಹೋಟೆಲ್ ಆಳುಗಳಲ್ಲ ಬೇರೆ ಕಂಪನಿಗಳಿಗೆ ಕೆಲಸ ಮಾಡುತ್ತಾ ಅವರಿಗೂ ಬಿಸಿನೆಸ್ ಕೊಡಿಸುತ್ತಿರುವ ಶ್ರಮಜೀವಿಗಳು.

ಇದನ್ನೂ ಓದಿ:    Zomato- Paytm: ಜೊಮ್ಯಾಟೋ ಹುಟ್ಟುಹಬ್ಬಕ್ಕೆ ವಿಶೇಷ ಟ್ವೀಟ್ ಮೂಲಕ ಶುಭಕೋರಿದ ಪೇಟಿಎಂ! ನೆಟ್ಟಿಗರಿಂದಲೂ ಸಂಭ್ರಮ

Follow us on

Click on your DTH Provider to Add TV9 Kannada