ಯಡಿಯೂರಪ್ಪ ಮೊಮ್ಮಗಳು ಡಾ ಸೌಂದರ್ಯ ಹೆರಿಗೆ ನಂತರದ ಖಿನ್ನತೆಯಿಂದ ಬಳಲುತ್ತಿದ್ದರು: ಗೃಹ ಸಚಿವ ಅರಗ ಜ್ಞಾನೇಂದ್ರ

ಯಡಿಯೂರಪ್ಪ ಮೊಮ್ಮಗಳು ಡಾ ಸೌಂದರ್ಯ ಹೆರಿಗೆ ನಂತರದ ಖಿನ್ನತೆಯಿಂದ ಬಳಲುತ್ತಿದ್ದರು: ಗೃಹ ಸಚಿವ ಅರಗ ಜ್ಞಾನೇಂದ್ರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 28, 2022 | 6:39 PM

ಪೊಲೀಸ್ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸೌಂದರ್ಯ ಅವರು ಪತಿ ಹಾಗೂ ತಮ್ಮ 6-ತಿಂಗಳು ಮಗುವಿನೊಂದಿಗೆ ವಾಸವಾಗಿದ್ದರು. ಅವರ ಸಾವಿನ ಬಗ್ಗೆ ಬೆಂಗಳೂರಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಬಿ ಎಸ್ ವೈ ಮೊಮ್ಮಗಳು ಹೆರಿಗೆ-ನಂತರದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಅವರ ಹಿರಿ ಮಗಳು ಪದ್ಮಾವತಿ ಅವರ ಪುತ್ರಿ ಡಾ ಸೌಂದರ್ಯ ಆತ್ಮಹತ್ಯೆಯ ಮೂಲಕ ಸಾವು ಬರಮಾಡಿಕೊಳ್ಳಲು ಅವರು ಹೆರಿಗೆ-ನಂತರದ ಖಿನ್ನತೆಯಿಂದ (Postpartum Depression) ಬಳುಲತ್ತಿದ್ದುದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಶುಕ್ರವಾರ ಬೆಳಗ್ಗೆ ಸೌಂದರ್ಯ ಅವರ ದೇಹ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿಗೆ (Mount Carmel College) ಹತ್ತಿರದ ಅಪಾರ್ಟ್ಮೆಂಟ್ ನ ಫ್ಲ್ಯಾಟೊಂದರಲ್ಲಿ ಫ್ಯಾನಿಗೆ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 30ರ ಪ್ರಾಯದವರಾಗಿದ್ದ ಸೌಂದರ್ಯ ಬೆಂಗಳೂರಿನ ಹೆಸರಾಂತ ಆಸ್ಪತ್ರೆಗಳಲ್ಲಿ ಒಂದಾಗಿರುವ ಎಮ್ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತಿ ಡಾ ನೀರಜ್ ಸಹ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಿಜಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಪೊಲೀಸ್ ಮೂಲಗಳಿಂದ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸೌಂದರ್ಯ ಅವರು ಪತಿ ಹಾಗೂ ತಮ್ಮ 6-ತಿಂಗಳು ಮಗುವಿನೊಂದಿಗೆ ವಾಸವಾಗಿದ್ದರು. ಅವರ ಸಾವಿನ ಬಗ್ಗೆ ಬೆಂಗಳೂರಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಬಿ ಎಸ್ ವೈ ಮೊಮ್ಮಗಳು ಹೆರಿಗೆ-ನಂತರದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಿದರು.

‘ಅವರ ಸಾವಿನ ಬಗ್ಗೆ ಅನುಮಾನ ಪಡುವಂಥದ್ದು ಏನೂ ಅಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದ ಸಂಗತಿ ನಮಗೆಲ್ಲ ಗೊತ್ತಿತ್ತು. ಸೌಂದರ್ಯ ಅವರನ್ನು ಗೆಲುವಾಗಿಸಲು ಯಡಿಯೂರಪ್ಪನವರು ಹಲವಾರು ಸಲ ಮನೆಗೆ ಕರೆದುಕೊಂಡು ಬಂದಿದ್ದರು. ಅವರಲ್ಲಿನ ಖಿನ್ನತೆಯನ್ನು ಓಡಿಸಲು ಬಿ ಎಸ್ ವೈ ಅವರ ಜೊತೆ ಕುಟುಂಬದ ಬೇರೆ ಸದಸ್ಯರು ಸಹ ಪ್ರಯತ್ನಿಸುತ್ತಿದ್ದರು,’ ಎಂದು ಇಂಗ್ಲಿಷ್ ಮಾಧ್ಯಮವೊಂದರ ಜೊತೆ ಮಾತಾಡುವಾಗ ಗೃಹ ಸಚಿವರು ಹೇಳಿದ್ದಾರೆ.

ಜ್ಞಾನೇಂದ್ರ ಅವರು ಯಡಿಯೂರಪ್ಪನವರ ಕುಟುಂಬದೊಂದಿಗೆ ಬಹಳ ಹತ್ತಿರದ ಸಂಬಂಧ ಇಟ್ಟುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಸಿಬ್ಬಂದಿ ಡಾ ನೀರಜ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಯಡಿಯೂರಪ್ಪನವರ ಮೂರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳಲ್ಲಿ ಅಗಲಿದ ಸೌಂದರ್ಯ ಅವರ ತಾಯಿ ಪದ್ಮಾವತಿ ಎಲ್ಲರಿಗಿಂತ ಹಿರಿಯರು.

ಇದನ್ನೂ ಓದಿ:    ನಾನು ಬೆಳೆಯಲು ಸಂಘ ಪರಿವಾರ, ಬಿಎಸ್ ಯಡಿಯೂರಪ್ಪ ಕಾರಣ; ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ