ಹಾವು ಮತ್ತು ನಾಯಿ ನಡುವೆ ನಡೆದ ಭೀಕರ ಕಾದಾಟದಲ್ಲಿ ನಾಯಿ ಗೆಲ್ಲಲಿಲ್ಲ, ಹಾವು ಸೋಲಲಿಲ್ಲ!!
ಶುಕ್ರವಾರಸಂತೆಯಲ್ಲಿ ಶುಕ್ರವಾವರದಂದು ನಾಯಿ ಮತ್ತು ಹಾವಿನ ನಡುವೆ ವನ್ ಆನ್ ವನ್ ಕಾದಾಟ. ಇದು ಒಂದೆರಡು ನಿಮಿಷಗಳಲ್ಲಿ ಮುಗಿದ ಕಾದಾಟಲ್ಲ. ಈ ವಿಡಿಯೋವನ್ನು ಚಿತ್ರೀಕರಿಸಿದವರು ಹೇಳಿರುವ ಹಾಗೆ ಅದು 25 ನಿಮಿಷಗಳ ಕಾಲ ನಡೆದಿದೆ.
ಕೊನೇ ಉಸಿರಿನವರೆಗೆ ಹೋರಾಟ (battle to the death) ಅಂದರೆ ಇದೇ ಇರಬೇಕು ಮಾರಾಯ್ರೇ. ಇಂಥ ಕಾದಾಟ ಅಪರೂಪಕ್ಕೊಮ್ಮೆ ನೋಡಲು ಸಿಗುತ್ತದೆ. ನಾಗರಹಾವು (Cobra) ಮತ್ತು ಒಂದು ಸಾಕು ನಾಯಿಯ (pet dog) ನಡುವಿನ ಭೀಕರ ಕಾಳಗವಿದು. ಅಂದಹಾಗೆ ಈ ಕಾದಾಟಕ್ಕೆ ಸಾಕ್ಷಿಯಾಗಿದ್ದು ಹಾಸನ (Hassan) ಜಿಲ್ಲೆ ಸಕಲೇಶಪುರ (Sakleshpur) ತಾಲ್ಲೂಕಿನ ಶುಕ್ರವಾರ ಸಂತೆ ಗ್ರಾಮದಲ್ಲಿರುವ ಮಂಜುನಾಥ ಎನ್ನುವವರಿಗೆ ಸೇರಿದ ಜಮೀನು. ನಾಗರಹಾವಿನ ಜೊತೆ ಕಚ್ಚಾಡುತ್ತಿರುವ ನಾಯಿ ಮಂಜುನಾಥ ಅವರದ್ದು. ಶುಕ್ರವಾರದಂದು ಅವರು ತಮ್ಮ ನಾಯಿಯೊಂದಿಗೆ ಹೊಲಕ್ಕೆ ಹೋಗಿದ್ದಾರೆ. ಅವರು ಜಮೀನಿನಲ್ಲಿ ಕೆಲಸ ಶುರುವಿಟ್ಟುಕೊಂಡರೆ ಸುಮ್ಮನೆ ಸುತ್ತಾಡಲಾರಂಭಿಸಿದ ನಾಯಿಗೆ ಹಾವು ಕಾಣಿಸಿದೆ. ಹಾವು ಮುಂಗುಸಿ ನಡುವೆ ಇರುವ ವೈಷಮ್ಯ ಹಾವು ಮತ್ತು ನಾಯಿ ನಡುವೆಯೂ ಇರುವಂತಿದೆ. ಇವೆರಡರ ನಡುವೆ ಜಗಳ ಈಗೀಗ ಸಾಮಾನ್ಯವಾಗಿ ಬಿಟ್ಟಿದೆ ಮಾರಾಯ್ರೇ. ಮೊನೆಯಷ್ಟೇ ನಾವು ನಾಗರ ಹಾವೊಂದರ ಮೇಲೆ ಮೂರು ಬೀದಿನಾಯಿಗಳು ಎರಗಿದ್ದ ವಿಡಿಯೋವೊಂದನ್ನು ತೋರಿಸಿದ್ದೆವು. ಅಲ್ಲಿ ಹಾವು ಒಂಟಿಯಾಗಿತ್ತು, ಹಾಗಾಗಿ ಅದು ನಾಯಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ.
ಶುಕ್ರವಾರಸಂತೆಯಲ್ಲಿ ಶುಕ್ರವಾವರದಂದು ನಾಯಿ ಮತ್ತು ಹಾವಿನ ನಡುವೆ ವನ್ ಆನ್ ವನ್ ಕಾದಾಟ. ಇದು ಒಂದೆರಡು ನಿಮಿಷಗಳಲ್ಲಿ ಮುಗಿದ ಕಾದಾಟಲ್ಲ. ಈ ವಿಡಿಯೋವನ್ನು ಚಿತ್ರೀಕರಿಸಿದವರು ಹೇಳಿರುವ ಹಾಗೆ ಅದು 25 ನಿಮಿಷಗಳ ಕಾಲ ನಡೆದಿದೆ.
ಯಾರೂ ಸೋಲೊಪ್ಪಿಕೊಳ್ಳಲು ತಯಾರಿಲ್ಲ. ನಾಯಿ ಬೌ ಬೌ ಅಂತ ದಾಳಿ ನಡೆಸಿದರೆ ಹಾವ್ ಬುಸ್ಸ್… ಅಂತ ಅದನ್ನು ಹಿಮ್ಮೆಟ್ಟಿಸುತ್ತದೆ.
ಈ ಹೋರಾಟದಲ್ಲಿ ಸೋತಿದ್ದು ಯಾರು, ಗೆದ್ದಿದ್ದು ಯಾರು ಅಂತ ಊಹಿಸಬಲ್ಲಿರಾ? ಎರಡೂ ಹೌದು ಮತ್ತು ಎರಡೂ ಅಲ್ಲ. ಯಾಕೆ ಗೊತ್ತಾ? ಹೋರಾಟ ಕೊನೆಗೊಂಡಾಗ ಹಾವು ಮತ್ತು ನಾಯಿ ಕಂಡಿದ್ದು ಹೀಗೆ. ಒಂದೆಡೆ ನಾಯಿ ಸತ್ತುಬಿದಿದ್ದರೆ ಮತ್ತೊಂದೆಡೆ ಹಾವು.
ಇದನ್ನೂ ಓದಿ: ಬಡಪಾಯಿ ಹಾವಿನ ಮೇಲೆ ಮೂರು ನಾಯಿಗಳ ಆಕ್ರಮಣ, ಆದರೂ ಹೋರಾಡಿತು ನಾಗರಹಾವು!