ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತೇವೆ: ಬಿಜೆಪಿ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
ರಾಜ್ಯಾಧ್ಯಕ್ಷ ಕಟೀಲು, ಮೂವರು ಸಂಸದರು, ಶಾಸಕರು, ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸ್ತೇನೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಕಟ್ಟಲು ಅನೇಕರು ಶ್ರಮಿಸಿದ್ದಾರೆ. ಅನಂತ್ ಕುಮಾರ್, ವಿಜಯ್ ಕುಮಾರ್ ಶ್ರಮವಿದೆ ಎಂದು ಬೊಮ್ಮಾಯಿ ಸ್ಮರಿಸಿಕೊಂಡಿದ್ದಾರೆ.
ಬೆಂಗಳೂರು: ನೀವು ಇಂದು ತೋರಿಸಿರುವ ಕಾಳಜಿಗೆ ನನ್ನ ಹೃದಯ ತುಂಬಿದೆ. ಇಂಥ ದೊಡ್ಡ ಪರಿವಾರ ಸೇರಿದ್ದು ನನ್ನ ಪುಣ್ಯವೆಂದು ಭಾವಿಸ್ತೇನೆ. ಪ್ರಜಾಪ್ರಭುತ್ವದ ಯಶಸ್ವಿಗೆ ಇಂತಹ ಭಾವನೆಯೇ ಕಾರಣ. ಈ ಸಂಬಂಧ ಇರದೇ ಯಾವ ಸಾಧನೆ ಮಾಡಲೂ ಆಗಲ್ಲ. ಬೇರೆ ಪಕ್ಷದಲ್ಲಿ ಬರೀ ವ್ಯವಹಾರಿಕ ಮಾತ್ರ ಇರುತ್ತದೆ. ಸೇವಾ ಮನೋಭಾವನೆ ಇರುವವರೆಲ್ಲ ಬಿಜೆಪಿ ಕಟ್ಟಿದ್ದಾರೆ ಎಂದು ಬಿಜೆಪಿ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ರಾಜ್ಯದ ಸಿಎಂ ಆಗಿ ನನ್ನ ಮೇಲೆ ಗುರುತರ ಜವಾಬ್ದಾರಿ ಇದೆ. ನಮ್ಮ ಸಂಸ್ಕೃತಿ ಉಳಿಸಿಕೊಂಡು, ನಾಡು, ದೇಶ ಕಟ್ಟಬೇಕಿದೆ ಎಂದು ಅಭಿನಂದನಾ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು ಸಮಗ್ರ ಅಭಿವೃದ್ಧಿಗೆ 6 ಸಾವಿರ ಕೋಟಿ ಅಲ್ಲದೇ, 13 ಸಾವಿರ ಕೋಟಿ ಕೊಡಲಾಗಿದ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಅಮೃತ ಯೋಜನೆಯಡಿ 75 ಸ್ಲಂ ಅಭಿವೃದ್ಧಿ ಮಾಡಲಾಗ್ತಿದೆ. ಬೆಂಗಳೂರನ್ನ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತೇವೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ.
ನಮ್ಮ ನಾಯಕರಾದ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ, ಬಿ.ಎಲ್. ಸಂತೋಷ್ ಅವರಿಗೆ ವಂದನೆ ಅರ್ಪಿಸುತ್ತೇನೆ. ರಾಜ್ಯಾಧ್ಯಕ್ಷ ಕಟೀಲು, ಮೂವರು ಸಂಸದರು, ಶಾಸಕರು, ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸ್ತೇನೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಕಟ್ಟಲು ಅನೇಕರು ಶ್ರಮಿಸಿದ್ದಾರೆ. ಅನಂತ್ ಕುಮಾರ್, ವಿಜಯ್ ಕುಮಾರ್ ಶ್ರಮವಿದೆ ಎಂದು ಬೊಮ್ಮಾಯಿ ಸ್ಮರಿಸಿಕೊಂಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಹುಟ್ಟುಹಬ್ಬ ಹಿನ್ನೆಲೆ 11 ಹಸುಗಳನ್ನು ಸಿಎಂ ಬೊಮ್ಮಾಯಿ ದತ್ತು ಪಡೆದಿದ್ದಾರೆ. ರಾಷ್ಟ್ರೋತ್ಥಾನ ಗೋಶಾಲೆಯ 11 ಹಸು ದತ್ತು ಪಡೆದಿದ್ದಾರೆ. ಬೆಳಗ್ಗೆ ಪತ್ನಿ ಚೆನ್ನಮ್ಮ ಜತೆ ಪೂಜೆ ನೆರವೇರಿಸಿದ ಬೊಮ್ಮಾಯಿ ಹಸುಗಳನ್ನು ದತ್ತು ಪಡೆದಿದ್ದಾರೆ.
ಪಾದಯಾತ್ರೆಯೇ ಕಾಂಗ್ರೆಸ್‌ನ ಅಂತ್ಯಯಾತ್ರೆ: ನಳಿನ್ ಕುಮಾರ್ ಕಟೀಲು ಟೀಕೆ
ಕರ್ನಾಟಕ ರಾಜ್ಯದಲ್ಲಿ 150 ಸ್ಥಾನ ಗೆದ್ದು ಬಿಜೆಪಿ ಮತ್ತೆ ಸರ್ಕಾರ ರಚಿಸಲಿದೆ. ಬಸವರಾಜ ಬೊಮ್ಮಾಯಿಯವರ ಎಲ್ಲ ಅಭಿವೃದ್ಧಿಗೆ ಬಿಜೆಪಿ ಸದಾ ಬೆಂಬಲ ಕೊಡುತ್ತದೆ. ಬಿಜೆಪಿಗೆ 200 ಸ್ಥಾನ ಬರುತ್ತೆ ಎಂದು ಪಾದಯಾತ್ರೆ ಮಾಡ್ತಿದ್ದಾರೆ. ಈ ಪಾದಯಾತ್ರೆಯೇ, ಕಾಂಗ್ರೆಸ್‌ನ ಅಂತ್ಯಯಾತ್ರೆ ಆಗಲಿದೆ ಎಂದು ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.
ಕೊವಿಡ್ ಸಂಕಷ್ಟವನ್ನು ಬಿಎಸ್ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸಿದ್ದರು. ಇದನ್ನು ಬೊಮ್ಮಾಯಿ ಮುಂದುವರಿಸಿಕೊಂಡು ಹೋಗಿದ್ದಾರೆ. ಮುಂದಿನ ಚುನಾವಣೆಯ ನೇತೃತ್ವವನ್ನೂ ಬೊಮ್ಮಾಯಿ ವಹಿಸಲಿ ಎಂದು ಸಿಎಂಗೆ ಅಭಿನಂದನಾ ಸಮಾರಂಭದಲ್ಲಿ ಸದಾನದಂಗೌಡ ಹೇಳಿಕೆ ನೀಡಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಉಮೇಶ್ ಕತ್ತಿ ನೇತೃತ್ವದ ಟೀಮ್ ಜತೆ ಸಿಎಂ ಬೊಮ್ಮಾಯಿ ಸಭೆ
ಈ ಸಮಾರಂಭಕ್ಕೂ ಮುನ್ನ ಉಮೇಶ್ ಕತ್ತಿ ನೇತೃತ್ವದ ಟೀಮ್ ಜತೆ ಸಿಎಂ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಭೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುದಾನ ಬಗ್ಗೆ ಚರ್ಚೆ ಮಾಡಲಾಗಿದೆ. ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಮಹಾಂತೇಶ್ ಕವಟಗಿಮಠ, ಮಹದೇವಪ್ಪ ಯಾದವಾಡ, ಅಭಯ್ ಪಾಟೀಲ್, ಅನಿಲ್ ಬೆನಕೆ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. ಜಾರಕಿಹೊಳಿ ಸೋದರರು ಮತ್ತು ಟೀಮ್ ಸಭೆಯಿಂದ ದೂರ ಉಳಿದಿದೆ. ಬೆಳಗಾವಿಯ ಬಿಜೆಪಿ ಶಾಸಕರ ನಡೆ ಭಾರಿ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಜಾರಕಿಹೊಳಿ ಬ್ರದರ್ಸ್ ದೂರವಿಟ್ಟು ಸಭೆ ನಡೆಸಿದ್ದ ಕತ್ತಿ, ಇಂದು ಜಾರಕಿಹೊಳಿ ಬ್ರದರ್ಸ್ ದೂರವಿಟ್ಟು ಬೊಮ್ಮಾಯಿ ಭೇಟಿ ಮಾಡಿದ್ದಾರೆ.
ಇದನ್ನೂ ಓದಿ: ಬೊಮ್ಮಾಯಿ ಸರಕಾರಕ್ಕೆ ಆರು ತಿಂಗಳು; ಮುಂದಿನ 15 ತಿಂಗಳ ಅಗ್ನಿಪರೀಕ್ಷೆಗೆ ತಯಾರಿ
ಇದನ್ನೂ ಓದಿ: Basavaraj Bommai Birthday: ಸಿಎಂ ಬಸವರಾಜ ಬೊಮ್ಮಾಯಿಗೆ 62ನೇ ಹುಟ್ಟುಹಬ್ಬದ ಸಂಭ್ರಮ; ಗೋಪೂಜೆ ಮೂಲಕ ಸರಳ ಆಚರಣೆ
Published On - 6:26 pm, Fri, 28 January 22