U19 World Cup 2022: ಇಂದು ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ: ಯಾವುದರಲ್ಲಿ ನೇರ ಪ್ರಸಾರ, ಎಷ್ಟು ಗಂಟೆಗೆ ಪಂದ್ಯ?

U19 World Cup 2022: ಇಂದು ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ: ಯಾವುದರಲ್ಲಿ ನೇರ ಪ್ರಸಾರ, ಎಷ್ಟು ಗಂಟೆಗೆ ಪಂದ್ಯ?
INDU19 vs BANU19 Under19 World Cup

India U19 vs Bangladesh U19, Quarter-Final 2: ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆಯಲಿರುವ ಭಾರತ- ಬಾಂಗ್ಲಾದೇಶ ಅಂಡರ್ 19 ತಂಡಗಳ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ಎಷ್ಟು ಗಂಟೆಗೆ ಆರಂಭ?, ಯಾವುದರಲ್ಲಿ ನೇರ ಪ್ರಸಾರ ಎಂಬ ಬಗೆಗಿನ ಮಾಹಿತಿ ಇಲ್ಲಿದೆ.

TV9kannada Web Team

| Edited By: Vinay Bhat

Jan 29, 2022 | 10:47 AM

ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿ (U19 World Cup 2022) ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ಅಂಡರ್-19 ತಂಡ ಸೆಮಿ ಫೈನಲ್​ಗೆ ಪ್ರವೇಶಿಸಿದೆ. ಇಂದು ಮತ್ತೊಂದು ಮಹತ್ವದ ಪಂದ್ಯ ನಡೆಯಲಿದೆ. ಕ್ವಾರ್ಟರ್ ಫೈನಲ್ 2 ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ (India U19 vs Bangladesh U19) ಅಂಡರ್ 19 ತಂಡಗಳು ಮುಖಾಮುಖಿ ಆಗುತ್ತಿದೆ. ನಾಲ್ಕು ಬಾರಿಯ ಚಾಂಪಿಯನ್ ಭಾರತ ತಂಡವು ಇದೀಗ ಮತ್ತೊಮ್ಮೆ ಪ್ರಶಸ್ತಿ ಗೆಲುವಿನತ್ತ ಚಿತ್ತ ನೆಟ್ಟಿದೆ. ಗುಂಪು ಹಂತದಲ್ಲಿ ಐರ್ಲೆಂಡ್ ಎದುರಿನ ಪಂದ್ಯದ ಸಂದರ್ಭಧಲ್ಲಿ ಭಾರತ ತಂಡದ ನಾಯಕ ಯಶ್ ಧುಲ್ (Yash Dhull) ಸೇರಿದಂತೆ ಆರು ಆಟಗಾರರು ಕೊರೊನಾ ಸೋಂಕಿಗೊಳಗಾಗಿದ್ದರು. ಅವರನ್ನು ಪ್ರತ್ಯೇಕವಾಸದಲ್ಲಿರಿಸಲಾಗಿತ್ತು. ಅವರ ಅನುಪಸ್ಥಿತಿಯಲ್ಲಿಯೂ ತಂಡವು ಲೀಗ್ ಪಂದ್ಯಗಳಲ್ಲಿ ಮಿಂಚಿ ನಾಕೌಟ್ ಹಂತಕ್ಕೆ ಪ್ರವೇಶಿಸಿತ್ತು. ಇದೀಗ ಕ್ವಾರ್ಟರ್ ಫೈನಲ್​ಗೆ ಸಜ್ಜಾಗುತ್ತಿರುವ ಭಾರತ ಗೆಲುವಿನ ವಿಶ್ವಾಸದಲ್ಲಿದೆ. ಹಾಗಾದ್ರೆ ಇಂದು ನಡೆಯಲಿರುವ ಭಾರತ- ಬಾಂಗ್ಲಾದೇಶ ಪಂದ್ಯ ಎಷ್ಟು ಗಂಟೆಗೆ ಆರಂಭ?, ಯಾವುದರಲ್ಲಿ ನೇರ ಪ್ರಸಾರ ಎಂಬ ಬಗೆಗಿನ ಮಾಹಿತಿ ಇಲ್ಲಿದೆ.

ಭಾರತ ಅಂಡರ್-19 ಹಾಗೂ ಬಾಂಗ್ಲಾದೇಶ ಅಂಡರ್-19 ನಡುವಣ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ಜನವರಿ 29 ರಂದು ನಡೆಯಲಿದೆ.

ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 6:30ಕ್ಕೆ ಆರಂಭವಾಗಲಿದೆ. ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ಈ ಪಂದ್ಯದ ನೇರಪ್ರಸಾರವನ್ನು ಸೋನಿ ಸ್ಫೋರ್ಟ್ಸ್​ ನೆಟ್ವರ್ಕ್​​ನಲ್ಲಿ ಲೈವ್ ವೀಕ್ಷಿಸಬಹುದು. ಡಿಸ್ನಿ+ ಹಾಟ್​ಸ್ಟಾರ್​​ನಲ್ಲೂ ಲೈವ್ ಸ್ಟ್ರೀಮ್ ಆಗಲಿದೆ.

ಭಾರತ ತಂಡವು ನಾಲ್ಕು ಬಾರಿ ಚಾಂಪಿಯನ್ ಆಗಿದ್ದು, ಮತ್ತೊಮ್ಮೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಪ್ರಮುಖರ ಅನುಪಸ್ಥಿತಿಯಲ್ಲೂ ಐರ್ಲೆಂಡ್​ ವಿರುದ್ಧ ಭಾರತಕ್ಕೆ 174 ರನ್​ಗಳ ಭರ್ಜರಿ ಗೆಲುವು ಸಾಧಿಸಿತ್ತು. ಇತ್ತ ಹಾಲಿ ಚಾಂಪಿಯನ್ ಬಾಂಗ್ಲಾದೇಶ ತಂಡವು ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಬಳಿಕ ಕೆನಡಾ ಮತ್ತು ಯುಎಇ ವಿರುದ್ಧ ಜಯ ಸಾಧಿಸಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿದೆ.

ತಂಡಗಳು ಇಂತಿವೆ:

ಭಾರತ: ಯಶ್ ಧುಲ್​​ (ನಾಯಕ), ಹರ್ನೂರ್ ಸಿಂಗ್, ಅಂಗಕ್ರಿಷ್ ರಘುವಂಶಿ, ಶೇಖ್ ರಶೀದ್, ನಿಶಾಂತ್ ಸಿಂಧು, ಸಿದ್ಧಾರ್ಥ್ ಯಾದವ್, ಅನೀಶ್ವರ್ ಗೌತಮ್, ಮಾನವ ಪರಕ್, ಕೌಶಲ್ ತಾಂಬೆ, ರಾಜವರ್ಧನ್ ಹಂಗರ್ಗೆಕರ್, ವಿಕ್ಕಿ ಓಸ್ವಾಲ್, ಗರ್ವ್ ಸಂಗ್ವಾನ್, ದಿನೇಶ್ ಬಾನಾ, ಆರಾಧ್ಯ ಯಾದವ್, ರಾಜ್ ಬಾವಾ, ವಾಸು ವತ್ಸ್, ರವಿ ಕುಮಾರ್

ಬಾಂಗ್ಲಾದೇಶ: ರಕಿಬುಲ್ ಹಸನ್ (ನಾಯಕ), ಅಬ್ದುಲ್ಲಾ ಅಲ್ ಮಮೂನ್, ಅರಿಫೂಲ್ ಇಸ್ಲಾಂ, ಮೊಹಮ್ಮದ್ ಫಾಹಿಮ್, ಮಹಫಿಜುಲ್ ಇಸ್ಲಾಂ, ರಿಪೊನ್ ಮಂಡಲ್, ನೈಮುರ್ ರೋಹ್ಮನ್, ತಂಜೀಮ್ ಸಹನ್ ಸಕೀಬ್, ಪಾಂತಿಕ್ ನವ್ರೋಸ್ ನಬೀಲ್, ಐಷ್ ಮೊಲ್ಹಾ, ಅಶಿಕುರು್ ಜಮಾನ್, ಇಫ್ತಿಕಾರ್ ಹುಸೇನ್ ಇಫ್ತಿ, ಎಸ್‌.ಎಂ. ಮೆಹ್ರೂಬ್, ಮುಷ್ಫಿಕ್ ಹಸನ್, ತಹಜೀಬುಲ್ ಇಸ್ಲಾಂ

ಹಂಗಾಮಿ ನಾಯಕನಿಗೆ ಕೊರೊನಾ:

ಭಾರತ ಅಂಡರ್-19 ತಂಡದ ನಾಯಕ ಯಶ್ ಧುಲ್ ಅವರಿಗೆ ಟೂರ್ನಿ ಆರಂಭದ ಹೊತ್ತಿಗೆ ಕೊರೊನಾ ಪಾಸಿಟಿವ್ ಕಂಡುಬಂದ ಕಾರಣ ಅವರ ಅನುಪಸ್ಥಿತಿಯಲ್ಲಿ ನಿಶಾಂತ್ ಸಿಂಧು ನಾಯಕರಾಗಿದ್ದರು. ಸದ್ಯ ಅವರಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಸಮಾಧಾನಕರ ಸಂಗತಿ ಎಂದರೆ, ಧುಲ್ ಕೊರೊನಾದಿಂದ ಗುಣಮುಖರಾಗಿದ್ದಾರೆ. ಆದರೆ, ಧುಲ್ ಬರುತ್ತಿದ್ದಂತೆ ಸಿಂಧು ಹೊರ ನಡೆಯುತ್ತಿರುವುದು ತಂಡದ ಹಿನ್ನೆಡೆಗೆ ಕಾರಣವಾಗಿದೆ.

India vs West Indies: ನಿಮ್ಮದೇ ವಾಹನದಲ್ಲಿ ಬನ್ನಿ: ಟೀಮ್ ಇಂಡಿಯಾ ಆಟಗಾರರಿಗೆ ದೊಡ್ಡ ಶಾಕ್ ನೀಡಿದ ಬಿಸಿಸಿಐ

Asia Cup 2022 Hockey: ಏಷ್ಯಾಕಪ್ ಹಾಕಿ: ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತೀಯ ವನಿತಾ ತಂಡ

Follow us on

Most Read Stories

Click on your DTH Provider to Add TV9 Kannada