U19 World Cup 2022: ಕ್ವಾರ್ಟರ್ ಫೈನಲ್​ನಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ; ಮುಖಾಮುಖಿ ವರದಿಯಲ್ಲಿ ನಮ್ಮವರದ್ದೇ ಮೇಲುಗೈ

U19 World Cup 2022: ಭಾರತ ತಂಡ ಈ ಪಂದ್ಯ ಗೆದ್ದರೇ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತ್ತಾಗುತ್ತದೆ. ಮೊದಲು, ಸೆಮಿಫೈನಲ್‌ಗೆ ಟಿಕೆಟ್ ಮತ್ತು ಎರಡನೆಯದಾಗಿ, ಕೊನೆಯ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳುವುದು.

U19 World Cup 2022: ಕ್ವಾರ್ಟರ್ ಫೈನಲ್​ನಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ; ಮುಖಾಮುಖಿ ವರದಿಯಲ್ಲಿ ನಮ್ಮವರದ್ದೇ ಮೇಲುಗೈ
ಭಾರತ ಯುವಪಡೆ
Follow us
TV9 Web
| Updated By: ಪೃಥ್ವಿಶಂಕರ

Updated on: Jan 28, 2022 | 7:34 PM

19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ನಡೆಯುತ್ತಿರುವ ಕ್ವಾರ್ಟರ್-ಫೈನಲ್ ಯುದ್ಧವು ಭಾರತ vs ಬಾಂಗ್ಲಾದೇಶ ನಡುವಿನ ಪಂದ್ಯದೊಂದಿಗೆ ಕೊನೆಗೊಳ್ಳುತ್ತದೆ (India U19 vs Bangladesh U19) . ಈ ಪಂದ್ಯದೊಂದಿಗೆ ಟೂರ್ನಿಯ ನಾಲ್ಕನೇ ಸೆಮಿಫೈನಲ್‌ಗೆ ಮುದ್ರೆ ಬೀಳಲಿದೆ. ಈ ಪಂದ್ಯವೂ ಕಳೆದ ಬಾರಿಯ ಹಾಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ಭಾರತದ ನಡುವೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡ ಈ ಪಂದ್ಯ ಗೆದ್ದರೇ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತ್ತಾಗುತ್ತದೆ. ಮೊದಲು, ಸೆಮಿಫೈನಲ್‌ಗೆ ಟಿಕೆಟ್ ಮತ್ತು ಎರಡನೆಯದಾಗಿ, ಕೊನೆಯ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳುವುದು. ಭಾರತ ಕೇವಲ ಒಂದು ಗೆಲುವಿನಿಂದ ಈ ಎರಡೂ ಆಸೆಗಳನ್ನು ಪೂರೈಸಿಕೊಳ್ಳಬಹುದು.

ಕ್ವಾರ್ಟರ್‌ಫೈನಲ್‌ವರೆಗಿನ ಪ್ರಯಾಣದಲ್ಲಿ ಭಾರತದ ಪ್ರದರ್ಶನ ಬಾಂಗ್ಲಾದೇಶಕ್ಕಿಂತ ಉತ್ತಮವಾಗಿದೆ. ಬಾಂಗ್ಲಾದೇಶ ಗುಂಪು ಹಂತದಲ್ಲಿ ಆಡಿದ 3 ಪಂದ್ಯಗಳಲ್ಲಿ 2 ಗೆದ್ದು 1 ರಲ್ಲಿ ಸೋತಿದೆ. ಅದೇ ಹೊತ್ತಿಗೆ ಭಾರತ ತಂಡ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಕ್ವಾರ್ಟರ್ ಫೈನಲ್ ತಲುಪಿದೆ. ಭಾರತ ತನ್ನ ಗುಂಪಿನಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೆ ಬಾಂಗ್ಲಾದೇಶ ತನ್ನ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.

ಹಾಲಿ ಚಾಂಪಿಯನ್ ಬಾಂಗ್ಲಾದೇಶದ ಮೇಲೆ ಭಾರತದ ಮೇಲುಗೈ ಬಾಂಗ್ಲಾದೇಶ ನಿಸ್ಸಂದೇಹವಾಗಿ ಟೂರ್ನಿಯ ಹಾಲಿ ಚಾಂಪಿಯನ್ ಆಗಿದೆ. ಆದರೆ ಈಗಿನ ಕ್ವಾರ್ಟರ್ ಫೈನಲ್ ಕದನದಲ್ಲಿ ಭಾರತದ ಮೇಲುಗೈ ಭಾರವಾಗಿದೆ. ಇದು ಕೊನೆಯ 5 ಪಂದ್ಯಗಳ ಬಗ್ಗೆ ಅಥವಾ ಒಟ್ಟಾರೆ ಅಂಕಿಅಂಶಗಳ ಬಗ್ಗೆ ಮಾತನಾಡುವುದಾದರೆ. ಭಾರತ ಮತ್ತು ಬಾಂಗ್ಲಾದೇಶ ನಡುವೆ ಕಳೆದ 5 ಮುಖಾಮುಖಿಗಳಲ್ಲಿ ಭಾರತ 3 ಬಾರಿ ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿದೆ. ಒಂದು ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದಿದೆ. ಇದು 2020 ರಲ್ಲಿ ನಡೆದ ಅಂಡರ್ ವರ್ಲ್ಡ್ ಕಪ್ ಫೈನಲ್ ನಂತರ ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿಯಾಗಿದೆ. 2021 ರ ಡಿಸೆಂಬರ್‌ನಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಆಡಿದ ಕೊನೆಯ ಪಂದ್ಯವನ್ನು ಭಾರತ 103 ರನ್‌ಗಳ ದೊಡ್ಡ ಅಂತರದಿಂದ ಗೆದ್ದುಕೊಂಡಿತು.

ಭಾರತ 24 ಪಂದ್ಯಗಳಲ್ಲಿ 19 ಬಾರಿ ಗೆದ್ದಿದೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಒಟ್ಟಾರೆ ಏಕದಿನ ಪಂದ್ಯದ ಕುರಿತು ಮಾತನಾಡುವುದಾದರೆ, ಇಲ್ಲಿಯವರೆಗೆ ಎರಡೂ ತಂಡಗಳು 24 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಭಾರತ 19 ಬಾರಿ ಗೆದ್ದಿದ್ದರೆ, ಬಾಂಗ್ಲಾದೇಶ 4 ಬಾರಿ ಗೆದ್ದಿದೆ. ಅಲ್ಲಿ ಒಂದು ಪಂದ್ಯ ಡ್ರಾಗೊಂಡಿದೆ. ವಿಶ್ವಕಪ್​ನ ಕ್ವಾರ್ಟರ್ ಫೈನಲ್ ಪಂದ್ಯ ತಟಸ್ಥ ಸ್ಥಳದಲ್ಲಿ ಉಭಯ ತಂಡಗಳ ನಡುವೆ ನಡೆಯುತ್ತಿದ್ದು, ಉಭಯ ತಂಡಗಳ ತಟಸ್ಥ ಮೈದಾನದ ದಾಖಲೆಯನ್ನು ನೋಡಿದರೆ ಇಲ್ಲಿ ಆಡಿದ 18 ಪಂದ್ಯಗಳಲ್ಲಿ ಭಾರತ 13ರಲ್ಲಿ ಜಯ ಸಾಧಿಸಿದೆ. ಅಂದರೆ, ಬಾಂಗ್ಲಾದೇಶ ಕೇವಲ 4 ಏಕದಿನ ಪಂದ್ಯಗಳನ್ನು ಗೆಲ್ಲಲು ಶಕ್ತವಾಗಿದೆ.

ಬಾಂಗ್ಲಾದೇಶದ ಬಗ್ಗೆ ಭಾರತದ ಅಂಕಿಅಂಶಗಳು ಅದ್ಭುತವಾಗಿವೆ. ಅಲ್ಲದೆ, ತಂಡದ ಆಟಗಾರರ ಪ್ರಸ್ತುತ ಫಾರ್ಮ್ ಕೂಡ ಅತ್ಯುತ್ತಮವಾಗಿದೆ. ಕೊರೊನಾ ಆರಂಭವಾದ ನಂತರವೂ ತಂಡವು ತನ್ನ ಪ್ರದರ್ಶನವನ್ನು ಕುಸಿಯಲು ಬಿಡದಿರಲು ಇದು ಕಾರಣವಾಗಿದೆ. ಈಗ ಕ್ವಾರ್ಟರ್ ಫೈನಲ್‌ನಲ್ಲೂ ಅದೇ ಪ್ರಬಲ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:India vs Uganda U19: ಧವನ್ ದಾಖಲೆ ಪುಡಿ ಮಾಡಿದ ಅಂಡರ್-19 ಆಟಗಾರ: ಕ್ವಾರ್ಟರ್ ಫೈನಲ್​ಗೆ ಭಾರತ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ