BBL 2021-22: ಸಿಡ್ನಿ ಸಿಕ್ಸರ್ಸ್ ಮಣಿಸಿ ನಾಲ್ಕನೇ ಬಾರಿಗೆ ಬಿಬಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಪರ್ತ್ ಸ್ಕಾರ್ಚರ್ಸ್

BBL 2021-22: ಮೆಲ್ಬೋರ್ನ್‌ನ ಡಾಕ್‌ಲ್ಯಾಂಡ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ, ಪರ್ತ್ ಏಕಪಕ್ಷೀಯ ರೀತಿಯಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು 79 ರನ್‌ಗಳಿಂದ ಸೋಲಿಸಿತು.

BBL 2021-22: ಸಿಡ್ನಿ ಸಿಕ್ಸರ್ಸ್ ಮಣಿಸಿ ನಾಲ್ಕನೇ ಬಾರಿಗೆ ಬಿಬಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಪರ್ತ್ ಸ್ಕಾರ್ಚರ್ಸ್
ಸಿಡ್ನಿ ಸಿಕ್ಸರ್ಸ್,ಪರ್ತ್ ಸ್ಕಾರ್ಚರ್ಸ್ ತಂಡದ ನಾಯಕರು
Follow us
TV9 Web
| Updated By: ಪೃಥ್ವಿಶಂಕರ

Updated on:Jan 28, 2022 | 5:46 PM

ಪರ್ತ್ ಸ್ಕಾರ್ಚರ್ಸ್ ಬಿಗ್ ಬ್ಯಾಷ್ ಲೀಗ್ 2021-22 ರ (BBL 2021-22 Final) ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೆಲ್ಬೋರ್ನ್‌ನ ಡಾಕ್‌ಲ್ಯಾಂಡ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ, ಪರ್ತ್ ಏಕಪಕ್ಷೀಯ ರೀತಿಯಲ್ಲಿ ಸಿಡ್ನಿ ಸಿಕ್ಸರ್ಸ್ (Perth Scorchers vs Sydney Sixers, Final) ತಂಡವನ್ನು 79 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪರ್ತ್ ಸ್ಕಾರ್ಚರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 171 ರನ್ ಗಳಿಸಿತು. ಉತ್ತರವಾಗಿ ಸಿಡ್ನಿ ಸಿಕ್ಸರ್ಸ್ ಬ್ಯಾಟಿಂಗ್ ವಿಭಾಗ ಮೂಟೆಯಂತೆ ಕುಸಿಯಿತು. ಸಿಡ್ನಿ ಸಿಕ್ಸರ್ಸ್ 16.2 ಓವರ್‌ಗಳಲ್ಲಿ ಕೇವಲ 92 ರನ್‌ಗಳಿಗೆ ಆಲೌಟ್ ಆಯಿತು. 41 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿದ ಲಾರಿ ಇವಾನ್ಸ್ ಪರ್ತ್ ಸ್ಕಾರ್ಚರ್ಸ್ ಗೆಲುವಿನ ಹೀರೋ ಆದರು. ನಾಯಕ ಆಶ್ಟನ್ ಟರ್ನರ್ ಕೂಡ 35 ಎಸೆತಗಳಲ್ಲಿ 54 ರನ್ಗಳ ಇನ್ನಿಂಗ್ಸ್ ಆಡಿದರು. ಬೌಲಿಂಗ್​ನಲ್ಲಿ ಆಂಡ್ರ್ಯೂ ಟೈ ಕೇವಲ 3 ವಿಕೆಟ್ ಪಡೆದರು. ಸಿಡ್ನಿ ಸಿಕ್ಸರ್ಸ್ ಪರ ಡೇನಿಯಲ್ ಹ್ಯೂಸ್ ಅತ್ಯಧಿಕ 42 ರನ್ ಗಳಿಸಿದರು, ಇತರ ಬ್ಯಾಟ್ಸ್‌ಮನ್‌ಗಳು ವಿಫಲರಾದರು.

ಪರ್ತ್ ಸ್ಕಾರ್ಚರ್ಸ್ ನಾಲ್ಕನೇ ಬಾರಿಗೆ ಬಿಗ್ ಬ್ಯಾಷ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅದೇ ಸಮಯದಲ್ಲಿ, ಸಿಡ್ನಿ ಸಿಕ್ಸರ್ಸ್ ಮೂರು ಬಾರಿ ಈ ಪ್ರಶಸ್ತಿಯನ್ನು ವಶಪಡಿಸಿಕೊಂಡಿದೆ. ಆದಾಗ್ಯೂ, ಈಗ ಪರ್ತ್ ಸ್ಕಾರ್ಚರ್ಸ್ ಸಿಡ್ನಿಯನ್ನು ಸೋಲಿಸಿ ಲೀಗ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾಯಿತು. ಪರ್ತ್ ಸ್ಕಾರ್ಚರ್ಸ್ 2013-14, 2014-15, 2016-17 ವರ್ಷಗಳಲ್ಲಿ ಬಿಗ್ ಬ್ಯಾಷ್ ಲೀಗ್ ಅನ್ನು ಗೆದ್ದುಕೊಂಡಿದೆ. ಇದೀಗ, 2021-22 ಋತುವಿನಲ್ಲಿ, ಅವರು ಮತ್ತೊಮ್ಮೆ ಚಾಂಪಿಯನ್ ಆಗುವ ಹೆಗ್ಗಳಿಕೆಯನ್ನು ಸಾಧಿಸಿದ್ದಾರೆ. ಕಳೆದ ಎರಡು ಋತುಗಳಲ್ಲಿ, ಪರ್ತ್ ತಂಡವು ಲೀಗ್ ಹಂತದಲ್ಲಿಯೇ ಕಳಪೆ ಪ್ರದರ್ಶನ ನೀಡಿ ಪಂದ್ಯಾವಳಿಯಿಂದ ಔಟ್ ಆಗಿತ್ತು. ಕಳೆದ ಋತುವಿನಲ್ಲಿ, ಪರ್ತ್ ತಂಡವು 6 ನೇ ಸ್ಥಾನದಲ್ಲಿತ್ತು ಮತ್ತು ಅದಕ್ಕೂ ಮೊದಲು 8 ನೇ ಸ್ಥಾನದಲ್ಲಿತ್ತು.

ಆಟ ಹೀಗಿತ್ತು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿದಿತ್ತು. ತಂಡವು ಅತ್ಯಂತ ಕಳಪೆ ಆರಂಭವನ್ನು ಹೊಂದಿತ್ತು. ಓಪನರ್ ಕರ್ಟಿಸ್ ಪ್ಯಾಟರ್ಸನ್ ಎರಡನೇ ಓವರ್‌ನಲ್ಲಿ ಔಟಾದರು. ಇದಾದ ನಂತರ ಜೋಶ್ ಇಂಗ್ಲಿಸ್ ಕೂಡ ಐದನೇ ಓವರ್‌ನಲ್ಲಿ 13 ರನ್‌ಗಳಿಗೆ ತೃಪ್ತಿಪಟ್ಟರು. ಪರ್ತ್‌ನ ಅತಿದೊಡ್ಡ ಪಂದ್ಯ ವಿಜೇತರಾದ ಮಿಚೆಲ್ ಮಾರ್ಷ್ ಮತ್ತು ಕಾಲಿನ್ ಮುನ್ರೊ ಆರನೇ ಓವರ್‌ನಲ್ಲಿ ಔಟಾದರು. ಮೊದಲ 6 ಓವರ್‌ಗಳಲ್ಲಿ ಪರ್ತ್ ಕೇವಲ 25 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಇದರ ನಂತರ ಸಿಡ್ನಿ ಸಿಕ್ಸರ್ಸ್ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ ನಾಯಕ ಆಷ್ಟನ್ ಟರ್ನರ್ ಮತ್ತು ವಿಶೇಷವಾಗಿ ಲಾರಿ ಇವಾನ್ಸ್ ಬಿರುಸಿನ ಬ್ಯಾಟಿಂಗ್ ಮಾಡಿ ಸಿಕ್ಸರ್‌ಗಳಿಗೆ ಪ್ರತಿದಾಳಿ ನಡೆಸಿದರು. ಇವಾನ್ಸ್ ಮತ್ತು ನಾಯಕ ಟರ್ನರ್ ಪಂದ್ಯಕ್ಕೆ ತಿರುವು ನೀಡಿದರು ಮತ್ತು ಐದನೇ ವಿಕೆಟ್‌ಗೆ 59 ಎಸೆತಗಳಲ್ಲಿ 104 ರನ್ ಸೇರಿಸಿದರು. ಇವಾನ್ಸ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು ಮತ್ತು ಟರ್ನರ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ನಂತರ ಟರ್ನರ್ ಔಟಾದರು ಆದರೆ ಇವಾನ್ಸ್ ಟಿಕ್ ಕೊನೆಯವರೆಗೂ ಕ್ರೀಸ್‌ನಲ್ಲಿದ್ದು 171 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿದರು.

ಸಿಕ್ಸರ್ ತಂಡದ ಮಧ್ಯಮ ಕ್ರಮಾಂಕದ ವಿಫಲ ಕೊರೊನಾದಿಂದಾಗಿ ಸಿಡ್ನಿ ಸಿಕ್ಸರ್ಸ್ ತನ್ನ ಅನೇಕ ಮ್ಯಾಚ್ ವಿನ್ನರ್‌ಗಳಿಲ್ಲದೆ ಶೀರ್ಷಿಕೆ ಪಂದ್ಯದಲ್ಲಿ ಆಡಿತ್ತು ಮತ್ತು ಅದರ ಭಾರವನ್ನು ಹೊರಬೇಕಾಯಿತು. ಕಳೆದ ಪಂದ್ಯದ ಹೀರೋ ಆಗಿದ್ದ ಹೇಡನ್ ಕೇವಲ 2 ರನ್ ಗಳಿಸಿ ಔಟಾದರು. ಇದರ ನಂತರ ಡೇನಿಯನ್ ಹ್ಯೂಸ್ ಕೆಲವು ಉತ್ತಮ ಹೊಡೆತಗಳನ್ನು ಆಡಿದರು. ಆದರೆ ಸಿಡ್ನಿಯ ಮಧ್ಯಮ ಕ್ರಮಾಂಕವು ಕಾರ್ಡ್‌ಗಳ ಪ್ಯಾಕ್‌ನಂತೆ ಕುಸಿಯಿತು. ನಾಯಕ ಹೆನ್ರಿಕ್ಸ್ 7, ಕ್ರಿಸ್ಟಿಯನ್ 3 ರನ್ ಗಳಿಸಿ ಔಟಾದರು. ಶಾನ್ ಅಬಾಟ್ ಕೇವಲ 1 ರನ್ ಗಳಿಸಲಷ್ಟೇ ಶಕ್ತರಾದರು. ಡೇನಿಯಲ್ ಹ್ಯೂಸ್ ಕೂಡ 42 ರನ್​ಗಳಿಗೆ ವಿಕೆಟ್ ಕಳೆದುಕೊಂಡರು. ಸಿಡ್ನಿ ತಂಡವು 16.2 ಓವರ್‌ಗಳಲ್ಲಿ ಕೇವಲ 92 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಪರ್ತ್ ನಾಲ್ಕನೇ ಬಾರಿಗೆ BBL ಪ್ರಶಸ್ತಿಯನ್ನು ಗೆದ್ದುಕೊಂಡಿತು.

Published On - 5:41 pm, Fri, 28 January 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ