‘ಜೇಮ್ಸ್’ ಚಿತ್ರಕ್ಕೆ ಹೇಗೆ ಡಬ್ಬಿಂಗ್ ಮಾಡಿದ್ನೋ ಗೊತ್ತಿಲ್ಲ, ದೇವರೇ ನನಗೆ ಶಕ್ತಿ ಕೊಟ್ಟಿರಬೇಕು: ಶಿವಣ್ಣ
ಕಳೆದ ವರ್ಷ ನಡೆದ ‘ಸಲಗ’ ಪ್ರೀ ರಿಲೀಸ್ ಇವೆಂಟ್ಗೆ ಪುನೀತ್ ರಾಜ್ಕುಮಾರ್ ಬಂದಿದ್ದರು. ಆದರೆ ಸಕ್ಸಸ್ ಮೀಟ್ ಆಗುವ ಹೊತ್ತಿಗೆ ಅವರಿಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ಕೊನೇ ಸಿನಿಮಾ ‘ಜೇಮ್ಸ್’ (James Movie) ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಚಿತ್ರದ ಶೂಟಿಂಗ್ ಮುಗಿಸಿಕೊಟ್ಟಿದ್ದ ಅಪ್ಪು ಹೃದಯಾಘಾತದಿಂದ ನಿಧನರಾಗಿದ್ದು ಇಡೀ ಚಿತ್ರರಂಗಕ್ಕೆ ನೋವು ತಂದ ಸಂಗತಿ. ಈಗ ಆ ಸಿನಿಮಾಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ‘ಜೇಮ್ಸ್’ ಚಿತ್ರದಲ್ಲಿ ಶಿವರಾಜ್ಕುಮಾರ್ (Shivarajkumar) ಮತ್ತು ರಾಘವೇಂದ್ರ ರಾಜ್ಕುಮಾರ್ ಕೂಡ ನಟಿಸಿದ್ದಾರೆ. ಇತ್ತೀಚೆಗಷ್ಟೇ ಡಬ್ಬಿಂಗ್ ಮುಗಿಸಿರುವ ಶಿವಣ್ಣ ಆ ಅನುಭವನ್ನು ಹೇಳಿಕೊಂಡಿದ್ದಾರೆ. ‘ನಾನು ಹೇಗೆ ಡಬ್ಬಿಂಗ್ ಮಾಡಿದ್ನೋ ಗೊತ್ತಿಲ್ಲ, ದೇವರೇ ನನಗೆ ಶಕ್ತಿ ಕೊಟ್ಟಿರಬೇಕು. ಅವನನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಶಿವಣ್ಣ ಹೇಳಿದ್ದಾರೆ. ‘ಸಲಗ’ ಚಿತ್ರದ ಸಕ್ಸಸ್ ಮೀಟ್ ಸಮಾರಂಭದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ಕಳೆದ ವರ್ಷ ನಡೆದ ‘ಸಲಗ’ ಪ್ರೀ ರಿಲೀಸ್ ಇವೆಂಟ್ಗೆ ಅಪ್ಪು ಬಂದಿದ್ದರು. ಆದರೆ ಸಕ್ಸಸ್ ಮೀಟ್ ಆಗುವ ಹೊತ್ತಿಗೆ ಅವರಿಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ. ‘ನಮ್ಮ ಹೃದಯದಲ್ಲಿ ಅವನು ಇದ್ದಾನೆ. ಹಾಗಾಗಿ ಈ ಸಂಭ್ರಮದಲ್ಲಿ ಕೂಡ ಅವನು ಇದ್ದಾನೆ ಅಂದುಕೊಳ್ಳೋಣ’ ಎಂದು ಶಿವಣ್ಣ ಹೇಳಿದ್ದಾರೆ.
ಇದನ್ನೂ ಓದಿ:
ಶಿವಣ್ಣನ ಕಾಲಿಗೆ ನಮಸ್ಕರಿಸಿದ ದುನಿಯಾ ವಿಜಯ್, ಕೀರ್ತಿ; ‘ಸಲಗ’ ಸಕ್ಸಸ್ ವೇದಿಕೆಯಲ್ಲಿ ‘ಹ್ಯಾಟ್ರಿಕ್ ಹೀರೋ’
‘ಜೇಮ್ಸ್’ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ; ಗುಡ್ ನ್ಯೂಸ್ ಕೇಳಿ ಖುಷಿಯಾದ ಪುನೀತ್ ಫ್ಯಾನ್ಸ್