Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೇಮ್ಸ್​’ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ; ಗುಡ್​ ನ್ಯೂಸ್​ ಕೇಳಿ ಖುಷಿಯಾದ ಪುನೀತ್​ ಫ್ಯಾನ್ಸ್​

James Movie Teaser: ಫೆ.11ರಂದು ಬೆಳಗ್ಗೆ 11.11ಕ್ಕೆ ‘ಜೇಮ್ಸ್​’ ಸಿನಿಮಾದ ಟೀಸರ್​ ಬಿಡುಗಡೆ ಆಗಲಿದೆ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

‘ಜೇಮ್ಸ್​’ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ; ಗುಡ್​ ನ್ಯೂಸ್​ ಕೇಳಿ ಖುಷಿಯಾದ ಪುನೀತ್​ ಫ್ಯಾನ್ಸ್​
ಪುನೀತ್​ ರಾಜ್​ಕುಮಾರ್​ ಜೇಮ್ಸ್​ ಸಿನಿಮಾ
Follow us
TV9 Web
| Updated By: ಮದನ್​ ಕುಮಾರ್​

Updated on:Feb 05, 2022 | 12:29 PM

ನಟ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅಭಿನಯದ ‘ಜೇಮ್ಸ್​’ ಸಿನಿಮಾ ಸಖತ್​ ನಿರೀಕ್ಷೆ ಮೂಡಿಸಿದೆ. ಚೇತನ್​ ಕುಮಾರ್​ ನಿರ್ದೇಶನದ ಈ ಚಿತ್ರದ ಪೋಸ್ಟರ್​ಗಳನ್ನು ಕಂಡು ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ಈಗ ‘ಜೇಮ್ಸ್​’ ಟೀಸರ್​ (James Movie Teaser) ನೋಡುವ ಸಮಯ ಹತ್ತಿರ ಬಂದಿದೆ. ಟೀಸರ್​ ಬಿಡುಗಡೆಗಾಗಿ ಚಿತ್ರತಂಡ ದಿನಾಂಕ ನಿಗದಿ ಮಾಡಿದೆ. ಫೆ.11ರಂದು ಬೆಳಗ್ಗೆ 11.11ಕ್ಕೆ ಟೀಸರ್​ ರಿಲೀಸ್​ ಆಗಲಿದೆ. ಈ ಕುರಿತು ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಅವರು ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾದ ಪೋಸ್ಟರ್​ನಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಸೈನಿಕನ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದರು. ಆ ಪೋಸ್ಟರ್​ ಸಖತ್​ ವೈರಲ್​ ಆಗಿತ್ತು. ಅದರ ಬೆನ್ನಲ್ಲೇ ಈಗ ಟೀಸರ್​ ಬರುತ್ತಿರುವುದು ಖುಷಿಯ ವಿಚಾರ. ಈ ಚಿತ್ರಕ್ಕೆ ಶೂಟಿಂಗ್​ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಆದಷ್ಟು ಬೇಗ ಸಿನಿಮಾವನ್ನು ತೆರೆಕಾಣಿಸುವ ಗುರಿ ಇಟ್ಟುಕೊಂಡು ಚಿತ್ರತಂಡ ಕೆಲಸ ಮಾಡುತ್ತಿದೆ. ಬಿಡುಗಡೆ ಆಗಲಿರುವ ಟೀಸರ್​ನಲ್ಲಿ ‘ಜೇಮ್ಸ್​’ ರಿಲೀಸ್​ ದಿನಾಂಕ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಇದೆ.

ಅಣ್ಣಾವ್ರ ಮಕ್ಕಳಾದ ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಒಟ್ಟಿಗೆ ಅಭಿನಯಿಸಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಆ ಆಸೆ ಈಡೇರುವುದಕ್ಕೂ ಮುನ್ನವೇ ಪುನೀತ್​ ರಾಜ್​ಕುಮಾರ್ ಅವರು ಹೃದಯಾಘಾತದಿಂದ ಕಳೆದ ವರ್ಷ ಅ.29ರಂದು​ ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಡಾ. ರಾಜ್​ಕುಮಾರ್​ ಕುಟುಂಬದ ಕುಡಿಗಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವ ಅಭಿಮಾನಿಗಳ ಕನಸನ್ನು ‘ಜೇಮ್ಸ್​’ ಚಿತ್ರತಂಡ ನನಸು ಮಾಡುತ್ತಿದೆ. ಕೆಲವೇ ದಿನಗಳ ಹಿಂದೆ ಶಿವರಾಜ್​ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್ ಅವರು ಈ ಚಿತ್ರದಲ್ಲಿ ನಟಿಸಿದ್ದು, ತಮ್ಮ ಪಾಲಿನ ಡಬ್ಬಿಂಗ್​ ಕೂಡ ಮುಗಿಸಿದ್ದಾರೆ.

ಮಾ.17ರಂದು ಪುನೀತ್​ ರಾಜ್​ಕುಮಾರ್​ ಜನ್ಮದಿನ. ಅದೇ ದಿನದಂದು ‘ಜೇಮ್ಸ್​’ ರಿಲೀಸ್​ ಆಗಬೇಕು ಎಂಬುದು ಅಭಿಮಾನಿಗಳ ಬಯಕೆ. ಅದನ್ನು ಈಡೇರಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ‘ಜೇಮ್ಸ್​’ ರಿಲೀಸ್​ ಡೇಟ್​ ಬಗ್ಗೆ ಅಧಿಕೃತವಾಗಿ ಈವರೆಗೆ ಘೋಷಣೆ ಆಗಿಲ್ಲ. ಈ ಚಿತ್ರದ ಟೀಸರ್​ನಲ್ಲಿ ಈ ಬಿಡುಗಡೆ ದಿನಾಂಕ ಅನೌನ್ಸ್​ ಆಗಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇತ್ತೀಚೆಗೆ ರಾಘವೇಂದ್ರ ರಾಜ್​ಕುಮಾರ್​ ಅವರು ಈ ಸಿನಿಮಾ ಕುರಿತು ಮಾತನಾಡಿದ್ದರು. ‘ನಾನು ಒಂದು ದಿನದ ಪಾತ್ರ ಮಾಡಿದ್ದೇನೆ. ಅರ್ಧ ದಿನದಲ್ಲಿ ಡಬ್ಬಿಂಗ್ ಮುಗಿಯತ್ತೆ. ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ ಅಂತ ನಿರ್ದೇಶಕ ಚೇತನ್​ ಕುಮಾರ್​ ಹೇಳುತ್ತಿದ್ದಾರೆ. ಕೊನೇ ಸಿನಿಮಾ ಎಂಬ ಕಾರಣಕ್ಕೋ ಏನೂ ಅಷ್ಟು ​ಚೆನ್ನಾಗಿ ಮಾಡಿಹೋಗಿದ್ದಾರೆ ಅಂತ ನಿರ್ದೇಶಕರು ಹೇಳುತ್ತಿದ್ದಾರೆ. ಅಪ್ಪು ನಮಗಾಗಿ ಬಿಟ್ಟು ಹೋಗಿರುವ ಆಸ್ತಿಯೇ ಜೇಮ್ಸ್​ ಸಿನಿಮಾ. ಈ ಸಿನಿಮಾ ಮತ್ತು ಕೆಲಸದ ಮೂಲಕ ನಿಮ್ಮೊಡನೆ ಬದುಕಿರುತ್ತೇನೆ ಅಂತ ತೋರಿಸಿಕೊಟ್ಟು ಹೋಗಿದ್ದಾರೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:

ಈ ಶಾಲೆಯಲ್ಲಿ ಪುನೀತ್​ ಫೋಟೋಗೆ ದಿನವೂ ಪೂಜೆ! ಪ್ರತಿ ವರ್ಷ 15 ಮಕ್ಕಳ ದತ್ತು ಸ್ವೀಕಾರ

ಪುನೀತ್​​ ಮನೆಯಲ್ಲಿ ಅಪ್ಪು ಫೋಟೋ ಮುಂದೆ ಅಲ್ಲು ಅರ್ಜುನ್​ ಭಾವುಕ ಕ್ಷಣ; ವಿಡಿಯೋ ನೋಡಿ

Published On - 12:11 pm, Sat, 5 February 22

ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ