ಈ ಶಾಲೆಯಲ್ಲಿ ಪುನೀತ್​ ಫೋಟೋಗೆ ದಿನವೂ ಪೂಜೆ! ಪ್ರತಿ ವರ್ಷ 15 ಮಕ್ಕಳ ದತ್ತು ಸ್ವೀಕಾರ

ಈ ಶಾಲೆಯಲ್ಲಿ ಪುನೀತ್​ ಫೋಟೋಗೆ ದಿನವೂ ಪೂಜೆ! ಪ್ರತಿ ವರ್ಷ 15 ಮಕ್ಕಳ ದತ್ತು ಸ್ವೀಕಾರ

TV9 Web
| Updated By: ಮದನ್​ ಕುಮಾರ್​

Updated on: Feb 04, 2022 | 9:27 AM

ಪುನೀತ್​ ರಾಜ್​ಕುಮಾರ್​ ಸ್ಮರಣಾರ್ಥ ಉತ್ತಮ ಕೆಲಸಗಳನ್ನು ಜನರು ಮಾಡುತ್ತಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನ ಗಡ್ಡಿ ಸದ್ಧರ್ಮ ಶ್ರೀ ಗುರುಕುಲ ಶಾಲೆ ಕೂಡ ಅಪ್ಪುಗೆ ನಮನ ಸಲ್ಲಿಸುತ್ತಿದೆ.

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನರಾಗಿ ಮೂರು ತಿಂಗಳ ಕಳೆದಿದೆ. ಸಾಮಾಜಿಕ ಕೆಲಸಗಳ ಕಾರಣದಿಂದ ಅಪ್ಪು ಎಲ್ಲರಿಗೂ ಪ್ರೇರಣೆ ಆಗಿದ್ದಾರೆ. ಅನೇಕ ಕಡೆಗಳಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಕೊಪ್ಪಳದ (Koppal) ಗಂಗಾವತಿ ತಾಲೂಕಿನ ಗಡ್ಡಿ ಸದ್ಧರ್ಮ ಶ್ರೀ ಗುರುಕುಲ ಶಾಲಾ ಮಕ್ಕಳಿಂದ ಪ್ರತಿ ದಿನವೂ ಪುನೀತ್​ ರಾಜ್​ಕುಮಾರ್​ ಫೋಟೋಗೆ (Puneeth Rajkumar Photo) ಪುಷ್ಪ ನಮನ ಸಲ್ಲಿಸಲಾಗುತ್ತಿದೆ. ಅಪ್ಪು ಅವರ ಸಾಮಾಜಿಕ‌ ಕಳಕಳಿಯಿಂದ ಶ್ರೀಗಳು ಪ್ರೇರಣೆಗೊಂಡಿದ್ದಾರೆ. ಹಾಗಾಗಿ ಪ್ರತಿ ವರ್ಷ ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ 15 ಮಕ್ಕಳ ದತ್ತು ಸ್ವೀಕಾರಕ್ಕೆ ತೀರ್ಮಾನಿಸಲಾಗಿದೆ. ದತ್ತು ಮಕ್ಕಳಿಗೆ ಸದ್ಧರ್ಮ ಶಾಲೆ ಉಚಿತ ಶಿಕ್ಷಣ ನೀಡಲಿದೆ. ಆಟ-ಪಾಠಗಳ ಜೊತೆಗೆ ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಕ್ಷಕರಿಂದ ಮಾನವೀಯ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಪುನೀತ್​ ಅವರ ಪ್ರೇರಣೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ನೇತ್ರದಾನದ ಬಗ್ಗೆ ಮಕ್ಕಳು ಚಿಂತನೆ ನಡೆಸಿದ್ದಾರೆ. ಹೀಗೆ ಅನೇಕ ಕಡೆಗಳಲ್ಲಿ ಪುನೀತ್​ ಸ್ಮರಣಾರ್ಥ ಉತ್ತಮ ಕೆಲಸಗಳನ್ನು ಜನರು ಮಾಡುತ್ತಿದ್ದಾರೆ. ಪ್ರತಿ ದಿನ ಹೊಸ ಹೊಸ ಘಟನೆಗಳು ವರದಿ ಆಗುತ್ತಲೇ ಇವೆ.

ಇದನ್ನೂ ಓದಿ:

ಪುನೀತ್​​ ಮನೆಯಲ್ಲಿ ಅಪ್ಪು ಫೋಟೋ ಮುಂದೆ ಅಲ್ಲು ಅರ್ಜುನ್​ ಭಾವುಕ ಕ್ಷಣ; ವಿಡಿಯೋ ನೋಡಿ

‘ಅಪ್ಪು ನಮಗೆ ಬಿಟ್ಟು ಹೋದ ಆಸ್ತಿ ಇದು’; ಪುನೀತ್​ ಬಗ್ಗೆ ಸಹೋದರ ರಾಘಣ್ಣ ಭಾವುಕ ಮಾತು