‘ಅಪ್ಪು ನಮಗೆ ಬಿಟ್ಟು ಹೋದ ಆಸ್ತಿ ಇದು’; ಪುನೀತ್​ ಬಗ್ಗೆ ಸಹೋದರ ರಾಘಣ್ಣ ಭಾವುಕ ಮಾತು

‘ನಾನು ಒಂದು ದಿನದ ಪಾತ್ರ ಮಾಡಿದ್ದೇನೆ. ಅರ್ಧ ದಿನದಲ್ಲಿ ಡಬ್ಬಿಂಗ್ ಮುಗಿಯತ್ತೆ. ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ’ ಎಂದು ‘ಜೇಮ್ಸ್​’ ಸಿನಿಮಾ ಬಗ್ಗೆ ರಾಘವೇಂದ್ರ ರಾಜ್​ಕುಮಾರ್ ಮಾಹಿತಿ ನೀಡಿದ್ದಾರೆ.

TV9kannada Web Team

| Edited By: Madan Kumar

Feb 02, 2022 | 3:30 PM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನರಾಗಿ ಮೂರು ತಿಂಗಳು ಕಳೆದಿದ್ದರೂ ಕೂಡ ಅವರ ಸಮಾಧಿ ದರ್ಶನಕ್ಕೆ ಜನರು ಬರುತ್ತಲೇ ಇದ್ದಾರೆ. ಈಗ ಮೈಸೂರಿನ ಶಕ್ತಿಧಾಮದ ಮಕ್ಕಳು ಬಂದು ಅಪ್ಪು ಸಮಾಧಿಗೆ ನಮಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್​ಕುಮಾರ್​, ಶಿವರಾಜ್​ಕುಮಾರ್​ ಮತ್ತು ಅವರ ಪತ್ನಿ ಗೀತಾ ಕೂಡ ಹಾಜರಿದ್ದರು. ಪುನೀತ್​ ನಟಿಸಿರುವ ‘ಜೇಮ್ಸ್​’ ಸಿನಿಮಾದ ಶೂಟಿಂಗ್​ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ಮತ್ತು ಶಿವರಾಜ್​ಕುಮಾರ್​ ಕೂಡ ಅಭಿನಯಿಸಿದ್ದಾರೆ. ಆ ಕಾರಣದಿಂದಾಗಿ ‘ಜೇಮ್ಸ್​’ (James Kannada Movie) ಬಗ್ಗೆ ಇರುವ ನಿರೀಕ್ಷೆ ನೂರು ಪಟ್ಟು ಹೆಚ್ಚಾಗಿದೆ. ಆ ಕುರಿತು ರಾಘಣ್ಣ ಮಾತನಾಡಿದ್ದಾರೆ. ‘ನಾನು ಒಂದು ದಿನದ ಪಾತ್ರ ಮಾಡಿದ್ದೇನೆ. ಅರ್ಧ ದಿನದಲ್ಲಿ ಡಬ್ಬಿಂಗ್ ಮುಗಿಯತ್ತೆ. ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ ಅಂತ ನಿರ್ದೇಶಕ ಚೇತನ್​ ಕುಮಾರ್​ ಹೇಳುತ್ತಿದ್ದಾರೆ. ಕೊನೇ ಸಿನಿಮಾ ಎಂಬ ಕಾರಣಕ್ಕೋ ಏನೂ ಅಷ್ಟು ​ಚೆನ್ನಾಗಿ ಮಾಡಿಹೋಗಿದ್ದಾರೆ ಅಂತ ನಿರ್ದೇಶಕರು ಹೇಳುತ್ತಿದ್ದಾರೆ. ಅಪ್ಪು ನಮಗಾಗಿ ಬಿಟ್ಟು ಹೋಗಿರುವ ಆಸ್ತಿಯೇ ಜೇಮ್ಸ್​ ಸಿನಿಮಾ. ಈ ಸಿನಿಮಾ ಮತ್ತು ಕೆಲಸದ ಮೂಲಕ ನಿಮ್ಮೊಡನೆ ಬದುಕಿರುತ್ತೇನೆ ಅಂತ ತೋರಿಸಿಕೊಟ್ಟು ಹೋಗಿದ್ದಾರೆ’ ಎಂದು ರಾಘಣ್ಣ ಹೇಳಿದ್ದಾರೆ.

ಇದನ್ನೂ ಓದಿ:

ಅಪ್ಪು ‘ಜೇಮ್ಸ್​’ಗೆ ದಾರಿ ಬಿಟ್ಟುಕೊಟ್ಟ ರಾಜಮೌಳಿ; ಹೊಸ ರಿಲೀಸ್​ ದಿನಾಂಕ ಘೋಷಣೆ ಮಾಡಿದ ‘ಆರ್​ಆರ್​ಆರ್’ ತಂಡ

‘ಇದು ಪ್ರಮೋಷನ್​ ಗಿಮಿಕ್​ ಅಲ್ಲ’; ‘ಜೇಮ್ಸ್​’ ಚಿತ್ರದಲ್ಲಿ ನಟಿಸಿದ ಬಗ್ಗೆ ರಾಘಣ್ಣ ಮಾತು

Follow us on

Click on your DTH Provider to Add TV9 Kannada