ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದ ವ್ಯಕ್ತಿ ನಿಮ್ಹಾನ್ಸ್ ಆವರಣದಲ್ಲಿ 5 ತಾಸು ಅಂಬ್ಯುಲೆನ್ಸ್​​ನಲ್ಲೇ ಕಳೆಯಬೇಕಾಯಿತು!

ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದ ವ್ಯಕ್ತಿ ನಿಮ್ಹಾನ್ಸ್ ಆವರಣದಲ್ಲಿ 5 ತಾಸು ಅಂಬ್ಯುಲೆನ್ಸ್​​ನಲ್ಲೇ ಕಳೆಯಬೇಕಾಯಿತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 02, 2022 | 6:06 PM

ಗುರುಬದನ್ ರನ್ನು ನಿಮ್ಹಾನ್ಸ್ ಗೆ ಮಂಗಳವಾರ ರಾತ್ರಿ 8 ಗಂಟೆಗೆ ಕರೆತರಲಾಗಿದೆ. ತುರ್ತು ಚಿಕಿತ್ಸೆಯ ಅವಶ್ಯಕತೆಯಿದ್ದ ಅವರಿಗೆ ರಾತ್ರಿ 1 ಗಂಟೆಯವರೆಗೆ ಅಡ್ಮಿಟ್ ಮಾಡಿಕೊಂಡಿಲ್ಲ! ಇದು ನಿಸ್ಸಂದೇಹವಾಗಿ ನಿರ್ಲಕ್ಷ್ಯತನ ಪರಮಾವಧಿ.

ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ (NIMHANS) ದಶಕಗಳಿಂದ ಜನರ ಸೇವೆಯಲ್ಲಿ ತೊಡಗಿದೆ, ಅದರಲ್ಲೇನೂ ಸಂದೇಹವಿಲ್ಲ. ಆದರೆ ಕೆಲಸ ಸಲ ಆಸ್ಪತ್ರೆಯ ಬಗ್ಗೆ ಕೆಲ ಕೆಟ್ಟ ವಿಚಾರಗಳನ್ನು ಸಹ ಕೇಳಬೇಕಾಗುತ್ತದೆ. ಈ ವಿಡಿಯೋ ನೋಡಿ. ನಿಮ್ಹಾನ್ಸ್ ಆಸ್ಪತ್ರೆ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ (Casualty and Emergency Division) ಮುಂಭಾಗಲ್ಲಿ ಕೆಲ ಅಂಬ್ಯುಲೆನ್ಸ್​ಗಳು (Ambulance) ನಿಂತಿವೆ. ಅವು ಖಾಲಿ ಅಂಬ್ಯಲೆನ್ಸ್ ಗಳಲ್ಲ. ಅವುಗಳ ಪೈಕಿ ಕೆಲವು ವಾಹನಗಳಲ್ಲಿ ತುರ್ತು ಚಿಕಿತ್ಸೆ ಅಗತ್ಯವಿರುವ ಗಾಯಾಳುಗಳಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಗಳು ಖಾಲಿಯಿಲ್ಲದ ಕಾರಣ ಅವರನ್ನು ಒಳಗೆ ಕರದೊಯ್ದು ಚಿಕಿತ್ಸೆ ನೀಡಲಾಗುತ್ತಿಲ್ಲ ಅಂತ ಗಾಯಗೊಂಡವರ ಜೊತೆ ಬಂದಿರುವ ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ. ಬೆಡ್ ಖಾಲಿ ಇಲ್ಲದರಿಬಹುದು. ಆದರೆ ಅವರನ್ನು ಅಂಬ್ಯುಲೆನ್ಸ್ ಗಳಲ್ಲೇ ನರಳಲು ಬಿಡುವುದು ಸರಿಯೇ? ಮೂರ್ನಾಲ್ಕು ಅಂಬ್ಯುಲೆನ್ಸ್ ಗಳಲ್ಲಿ ಗಾಯಾಳುಗಳಿದ್ದಾರೆ. ಒಬ್ಬರಿಗಂತೂ ಬಹಳ ವಯಸ್ಸಾಗಿದೆ.

ಗಾಯಾಳುಗಳ ಪೈಕಿ ಗುರಬದನ್ ಎನ್ನುವವರ ಬಗ್ಗೆ ಸ್ವಲ್ಪ ಮಾಹಿತಿ ನಮಗೆ ಲಭ್ಯವಾಗಿದೆ. ಅವರ ಜೊತೆ ಬಂದವರು ಒಳಗೆ ಕರೆದೊಯ್ದು ಅಡ್ಮಿಟ್ ಮಾಡಿಕೊಳ್ಳಿ ಅಂತ ಗೋಗರೆಯುತ್ತಿದ್ದಾರೆ. ಗುರುಬದನ್ಗೆ ತಲೆಗೆ ಪೆಟ್ಟಾಗಿದೆ. ಮೊದಲು ಅವರನ್ನು ಮಣಿಪಾಲ ಅಸ್ಪತ್ರೆಗೆ ಕರೆದೊಯ್ಯಲಾಗಿದ್ದು ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿರುವುದರಿಂದ ಪ್ರಾಥಮಿಕ ಚಿಕಿತ್ಸೆ ನೀಡಿ ಕೂಡಲೇ ನಿಮ್ಹಾನ್ಸ್ಗೆ ಕರದೊಯ್ಯಿರಿ ಅಂತ ಅಲ್ಲಿ ಹೇಳಲಾಗಿದೆ.

ಗುರುಬದನ್ ರನ್ನು ನಿಮ್ಹಾನ್ಸ್ ಗೆ ಮಂಗಳವಾರ ರಾತ್ರಿ 8 ಗಂಟೆಗೆ ಕರೆತರಲಾಗಿದೆ. ತುರ್ತು ಚಿಕಿತ್ಸೆಯ ಅವಶ್ಯಕತೆಯಿದ್ದ ಅವರಿಗೆ ರಾತ್ರಿ 1 ಗಂಟೆಯವರೆಗೆ ಅಡ್ಮಿಟ್ ಮಾಡಿಕೊಂಡಿಲ್ಲ! ಇದು ನಿಸ್ಸಂದೇಹವಾಗಿ ನಿರ್ಲಕ್ಷ್ಯತನ ಪರಮಾವಧಿ.

ಬೆಡ್ ಇಲ್ಲದಿದ್ದರೇನಂತೆ, ಒಳಗೆ ಕರೆದ್ಯೊಯ್ದು ಯಾವುದಾರೂ ಸ್ಥಳದಲ್ಲಿ ಚಿಕಿತ್ಸೆ ಆರಂಭಿಸಬಹುದಿತ್ತು. ಹಾಗೆ ಮಾಡುವುದರಲ್ಲಿ ಯಾವ ಸಮಸ್ಯೆ ಇದೆ ಅಂತ ಆಸ್ಪತ್ರೆಯ ವೈದ್ಯರು ಮತ್ತು ಇತರ ಸಿಬ್ಬಂದಿಯೇ ಹೇಳಬೇಕು.

ಕೊನೆಗೆ, ತಡರಾತ್ರಿ 1 ಗಂಟೆಯ ನಂತರ ವೈದ್ಯರು ಗುರುಬದನ್ ರನ್ನು ಅಟೆಂಡ್ ಮಾಡಲು ಹೊರಬರುತ್ತಾರೆ. ಆದರೆ, ಅಷ್ಟರೊಳಗಾಗಿ ಅವರಿಗೆ ಹೆಚ್ಚು ಕಮ್ಮಿಯಾಗಿದ್ದರೆ ಯಾರು ಹೊಣೆ ಹೊರುತ್ತಿದ್ದರು?

ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಈ ವಿಷಯವನ್ನು ಪರಿಶೀಲಿಸುತ್ತಾರೋ ಅಂತ ಕಾದು ನೋಡಬೇಕು.

ಇದನ್ನೂ ಓದಿ:  ಜನರ ಮಾನಸಿಕ ಸಮಸ್ಯೆಯ ಕುರಿತು ಸಮಾಲೋಚನೆ ನಡೆಸುವಲ್ಲಿ ಟೆಲಿ ಮೆಂಟಲ್​ ಹೆಲ್ತ್​ ಕೇಂದ್ರಗಳು ಪ್ರಮುಖ ಪಾತ್ರವಹಿಸುತ್ತವೆ; ನಿಮ್ಹಾನ್ಸ್​ ನಿರ್ದೇಶಕಿ