AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪು ‘ಜೇಮ್ಸ್​’ಗೆ ದಾರಿ ಬಿಟ್ಟುಕೊಟ್ಟ ರಾಜಮೌಳಿ; ಹೊಸ ರಿಲೀಸ್​ ದಿನಾಂಕ ಘೋಷಣೆ ಮಾಡಿದ ‘ಆರ್​ಆರ್​ಆರ್’ ತಂಡ

RRR Release Date: ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್​ ಮುಗಿದಿದೆ. ಈ ವರ್ಷ ಪುನೀತ್​ ಜನ್ಮದಿನದ ಪ್ರಯುಕ್ತ ಮಾ.17ರಂದು ‘ಜೇಮ್ಸ್​’ ರಿಲೀಸ್​ ಆಗಬೇಕು ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಅಪ್ಪು ‘ಜೇಮ್ಸ್​’ಗೆ ದಾರಿ ಬಿಟ್ಟುಕೊಟ್ಟ ರಾಜಮೌಳಿ; ಹೊಸ ರಿಲೀಸ್​ ದಿನಾಂಕ ಘೋಷಣೆ ಮಾಡಿದ ‘ಆರ್​ಆರ್​ಆರ್’ ತಂಡ
ಆರ್​ಆರ್​ಆರ್​-ಜೇಮ್ಸ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 31, 2022 | 6:57 PM

ಬಹುನಿರೀಕ್ಷಿತ ‘ಆರ್​ಆರ್​ಆರ್​’ (RRR Movie) ಸಿನಿಮಾದ ರಿಲೀಸ್​ ಡೇಟ್​ ಕುರಿತಂತೆ ಹಲವು ಗೊಂದಲಗಳು ಮನೆ ಮಾಡಿತ್ತು. ಎಲ್ಲವೂ ಪ್ಲ್ಯಾನ್​ ಪ್ರಕಾರವೇ ನಡೆದಿದ್ದರೆ ಈ ವರ್ಷದ ಆರಂಭದಲ್ಲಿಯೇ ರಾಜಮೌಳಿ ನಿರ್ದೇಶನದ ಈ ಸಿನಿಮಾ ತೆರೆಗೆ ಬರಬೇಕಿತ್ತು. ಜ.7ರಂದು ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿತ್ತು. ಆದರೆ ಕೊರೊನಾ ಹಾವಳಿ ಹೆಚ್ಚಿದ್ದರಿಂದ ರಿಲೀಸ್​ ಡೇಟ್​ ಮುಂದೂಡಲ್ಪಟ್ಟಿತು. ಮಾರ್ಚ್​​ 18ರಂದು ಸಿನಿಮಾ ರಿಲೀಸ್ ಮಾಡುವ ಆಯ್ಕೆಯನ್ನು ಚಿತ್ರತಂಡ ಇಟ್ಟುಕೊಂಡಿತ್ತು. ಪುನೀತ್​ ರಾಜ್​ಕುಮಾರ್​ ನಟನೆಯ ‘ಜೇಮ್ಸ್​’ ಸಿನಿಮಾ (James Kannada Movie) ಮಾ.17ರಂದು ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಅದರ ಮರುದಿನವೇ ‘ಆರ್​ಆರ್​ಆರ್​’ ಬಿಡುಗಡೆ ಪ್ಲ್ಯಾನ್​ ನಡೆದಿತ್ತು. ಈ ಕ್ಲ್ಯಾಶ್​ ತಪ್ಪಿಸಲು ರಾಜಮೌಳಿ ಮುಂದಾಗಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದ ಹೊಸ ರಿಲೀಸ್​ ದಿನಾಂಕ ಘೋಷಣೆ ಆಗಿದೆ.

ಪುನೀತ್​ ನಟನೆಯ ಕೊನೇ ಸಿನಿಮಾ ಎಂಬ ಕಾರಣಕ್ಕೆ ‘ಜೇಮ್ಸ್​’ ಮೇಲೆ ಅಭಿಮಾನಿಗಳಿಗೆ ಎಲ್ಲಿಲ್ಲದ ನಿರೀಕ್ಷೆ ಇದೆ. ಚೇತನ್​ ಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್​ ಮುಗಿದಿದೆ. ಈ ವರ್ಷ ಪುನೀತ್​ ಜನ್ಮದಿನದ ಪ್ರಯುಕ್ತ ಮಾ.17ರಂದು ‘ಜೇಮ್ಸ್​’ ರಿಲೀಸ್​ ಆಗಬೇಕು ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮಾ.17ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇಟ್ಟುಕೊಂಡೇ ಚಿತ್ರತಂಡ ಹಗಲಿರುಳು ಶ್ರಮಿಸುತ್ತಿದೆ ಎನ್ನಲಾಗಿದೆ. ಹೀಗಾಗಿ, ರಾಜಮೌಳಿ ಈ ಕ್ಲ್ಯಾಶ್​ ತಪ್ಪಿಸುತ್ತಿದ್ದಾರೆ. ಮಾರ್ಚ್​ 25ರಂದು ‘ಆರ್​ಆರ್​ಆರ್​’  ರಿಲೀಸ್​ ಆಗುತ್ತಿದೆ.

‘ಆರ್​ಆರ್​ಆರ್​’ ಚಿತ್ರದ ಬಿಡುಗಡೆ ದಿನಾಂಕ ಗೊಂದಲಮಯ ಆಗಿತ್ತು. ಎರಡು ಸಂಭಾವ್ಯ ದಿನಾಂಕಗಳನ್ನು ಚಿತ್ರತಂಡ ಘೋಷಿಸಿತ್ತು. ಮಾರ್ಚ್​ 18 ಅಥವಾ ಏಪ್ರಿಲ್​ 28ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಮಾ.18ರ ದಿನಾಂಕ ರಾಜಮೌಳಿ ಅವರ ಮೊದಲ ಆದ್ಯತೆ ಆಗಿತ್ತು. ಈಗ ಮಾರ್ಚ್​​ 25ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಮಾ.18ರಂದು ‘ಆರ್​ಆರ್​ಆರ್​’ ತೆರೆಕಂಡರೆ ಪುನೀತ್ ನಟನೆಯ ‘ಜೇಮ್ಸ್​’ ಮಾತ್ರವಲ್ಲದೇ ಅಕ್ಷಯ್​ ಕುಮಾರ್​ ನಟನೆಯ ‘ಬಚ್ಚನ್​ ಪಾಂಡೆ’ ಚಿತ್ರದ ಜೊತೆಗೂ ಕ್ಲ್ಯಾಷ್​ ಏರ್ಪಡಲಿದೆ. ಯಾಕೆಂದರೆ, ಮಾ.18ರಂದು ಬಿಡುಗಡೆ ಆಗುವುದಾಗಿ ‘ಬಚ್ಚನ್​ ಪಾಂಡೆ’ ಸಿನಿಮಾ ಈಗಾಗಲೇ ಘೋಷಣೆ ಮಾಡಿದೆ. ಇದೆಲ್ಲ ಕಾರಣರಿಂದ ‘ಆರ್​ಆರ್​ಆರ್​’ ಒಂದು ವಾರ ತಡವಾಗುತ್ತಿದೆ.

ಕೊರೊನಾದ ಕಣ್ಣಾಮುಚ್ಚಾಲೆಯಿಂದಾಗಿ ಅನೇಕ ಹೈ ಬಜೆಟ್​ ಸಿನಿಮಾಗಳು ರಿಲೀಸ್​ ಡೇಟ್​ ವಿಚಾರದಲ್ಲಿ ಸಂಕಟವನ್ನು ಎದುರಿಸುತ್ತಿವೆ. ಕೊವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ನಾಳೆ ಪರಿಸ್ಥಿತಿ ಏನಾಗಬಹುದೋ ಎಂಬ ಅನಿಶ್ಚಿತತೆ ಎಲ್ಲರನ್ನೂ ಕಾಡುತ್ತಿದೆ. ‘ರಾಧೆ ಶ್ಯಾಮ್​’, ‘ಸರ್ಕಾರು ವಾರಿ ಪಾಟ’, ‘ಕೆಜಿಎಫ್​: ಚಾಪ್ಟರ್​ 2’, ‘ವಿಕ್ರಾಂತ್​ ರೋಣ’ ಮುಂತಾದ ಬಹುನಿರೀಕ್ಷಿತ​ ಸಿನಿಮಾಗಳು ಸಾಲುಗಟ್ಟಿ ನಿಂತಿವೆ. ಅವುಗಳ ಜೊತೆಗೂ ‘ಆರ್​ಆರ್​ಆರ್​’ ಚಿತ್ರ ಕ್ಲ್ಯಾಶ್​ ತಪ್ಪಿಸಿಕೊಳ್ಳಲು ಪ್ಲ್ಯಾನ್​ ಮಾಡಬೇಕಿದೆ.

ಎಸ್​ಎಸ್​ ರಾಜಮೌಳಿ ನಿರ್ದೇಶನ ಇರುವ ಈ ಸಿನಿಮಾದಲ್ಲಿ, ರಾಮ್​ ಚರಣ್​ ಹಾಗೂ ಜ್ಯೂ.ಎನ್​ಟಿಆರ್​ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.  ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್​ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ.  ಟ್ರೇಲರ್​ ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರತಂಡ ಮತ್ತೆ ಪ್ರಚಾರ ಕಾರ್ಯ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ಮತ್ತು ‘ಬಚ್ಚನ್​ ಪಾಂಡೆ’ ನಡುವೆ ಏರ್ಪಡಲಿದೆ ಬಿಗ್​ ಕ್ಲ್ಯಾಶ್?

‘ಆರ್​ಆರ್​ಆರ್​’ ನಿರ್ಮಾಪಕನ ಖಾತೆಯಿಂದ ಪ್ರಭಾಸ್​ಗೆ ವರ್ಗಾವಣೆ ಆಯ್ತು 50 ಕೋಟಿ ರೂಪಾಯಿ?  

VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಪ್ರಗತಿ ಹೊಂದುವರು
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಪ್ರಗತಿ ಹೊಂದುವರು
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ