ಕೆಜಿಎಫ್ ಟೀಮ್​ನಿಂದ ಭರ್ಜರಿ ಕ್ರಿಕೆಟ್; ನಿರ್ಮಾಪಕರ ಬೌಲಿಂಗ್​ಗೆ ಯಶ್ ಬ್ಯಾಟಿಂಗ್- ವೈರಲ್ ಆಯ್ತು ವಿಡಿಯೋ

ಕೆಜಿಎಫ್ ಟೀಮ್​ನಿಂದ ಭರ್ಜರಿ ಕ್ರಿಕೆಟ್; ನಿರ್ಮಾಪಕರ ಬೌಲಿಂಗ್​ಗೆ ಯಶ್ ಬ್ಯಾಟಿಂಗ್- ವೈರಲ್ ಆಯ್ತು ವಿಡಿಯೋ

TV9 Web
| Updated By: shivaprasad.hs

Updated on: Feb 01, 2022 | 1:34 PM

‘ಕೆಜಿಎಫ್ 2’ ಚಿತ್ರತಂಡ ಚಿತ್ರದ ಕೆಲಸಗಳಲ್ಲಿ ನಿರತವಾಗಿದೆ. ಪ್ರಸ್ತುತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಕುಂದಾಪುರದ ಸ್ಟುಡಿಯೋದಲ್ಲಿ ಮ್ಯೂಸಿಕ್ ಕೆಲಸಗಳು ನಡೆಯುತ್ತಿವೆ. ಅಲ್ಲಿಗೆ ಭೇಟಿ ನೀಡಿರುವ ತಂಡ ಭರ್ಜರಿ ಕ್ರಿಕೆಟ್ ಕೂಡ ಆಡಿದೆ.

ಉಡುಪಿ: ರಾಕಿಂಗ್​ಸ್ಟಾರ್ ಯಶ್​ ತಮ್ಮ ‘ಕೆಜಿಎಫ್ 2’​ (KGF 2) ಸಿನಿಮಾದ ಬ್ಯುಸಿ ವರ್ಕ್​​ನ ನಡುವೆಯೂ ಕೂಲ್​ ಆಗಿ ರಿಲ್ಯಾಕ್ಸ್​ ಮೂಡ್​ನಲ್ಲಿ ಕ್ರಿಕೆಟ್​ ಆಟವಾಡಿದ್ದಾರೆ. ಕೆಜಿಎಫ್​ ನಿರ್ಮಾಪಕ ವಿಜಯ್ ಕಿರಗಂದೂರು ಬೌಲಿಂಗ್ ಮಾಡಿದ್ದು. ನಾಯಕ ನಟ ಯಶ್ (Yash) ಭರ್ಜರಿ ಬ್ಯಾಟ್ ಬೀಸಿದ್ದಾರೆ. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಸ್ತುತ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಕೆಜಿಎಫ್ 2 ಚಿತ್ರದ ಮ್ಯೂಸಿಕ್ ಕಂಪೋಸ್ ನಡೆಯುತ್ತಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರ್ (Ravi Basrur) ಸ್ಟುಡಿಯೋದಲ್ಲಿ ಚಿತ್ರದ ಕೆಲಸಗಳು ನಡೆಯುತ್ತಿವೆ. ಇದರಲ್ಲಿ ನಿರ್ಮಾಪಕ, ನಟ ಹಾಗೂ ಚಿತ್ರತಂಡ ಭಾಗಿಯಾಗಿದೆ.

ಉಡುಪಿ ಪ್ರವಾಸದ ವೇಳೆ ಕುಂಭಾಶಿ ಆನೆಗುಡ್ಡೆ ದೇವಸ್ಥಾನಕ್ಕೆ ನಟ ಯಶ್ ಭೇಟಿ ನೀಡಿ, ಶ್ರೀ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೂ ನಟ ಭೇಟಿ ನೀಡಿದ್ದಾರೆ. ಇದಕ್ಕೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು ಸಾಥ್ ನೀಡಿದ್ದಾರೆ.

ಇದನ್ನೂ ಓದಿ:

‘ಕೆಜಿಎಫ್​ 2’ ಎದುರು ಪರಭಾಷೆ ಚಿತ್ರಗಳ ಮುಖಾಮುಖಿ; ಯಶ್​ಗೆ ಪೈಪೋಟಿ ನೀಡೋರು ಯಾರೆಲ್ಲ?

ಅಪ್ಪು ‘ಜೇಮ್ಸ್​’ಗೆ ದಾರಿ ಬಿಟ್ಟುಕೊಟ್ಟ ರಾಜಮೌಳಿ; ಹೊಸ ರಿಲೀಸ್​ ದಿನಾಂಕ ಘೋಷಣೆ ಮಾಡಿದ ‘ಆರ್​ಆರ್​ಆರ್’ ತಂಡ