Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕುರುಳಿದ ಕಾರು

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕುರುಳಿದ ಕಾರು

ಸಾಧು ಶ್ರೀನಾಥ್​
|

Updated on:Feb 01, 2022 | 12:36 PM

ಮಡಿಕೇರಿಯ ವಿರಾಜಪೇಟೆ ತಾಲ್ಲೂಕಿನ ಕೊಂಡಂಗೇರಿ ಬಳಿ ಘಟನೆ. ಕಾರಿನಲ್ಲಿದ್ದ ಚಾಲಕ, ಪ್ರಯಾಣಿಕರು ಪವಾಡ ಸದೃಶ ಪಾರು.

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಕೆಳಕ್ಕುರುಳಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಂಡಂಗೇರಿ ಗ್ರಾಮದಲ್ಲಿ ನಡೆದಿದೆ. ಸೇತುವೆಯಿಂದ ಕೆಳಕ್ಕುರುಳಿದ ಕಾರು ಆಳ ನದಿಯಿಂದ ಕೆಲವೇ ಅಡಿ ದೂರದಲ್ಲಿ‌ನಿಂತಿದೆ. ಕಾರು ನದಿಗೆ ಬಿದ್ದಿದ್ದಲ್ಲಿ ಭಾರೀ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.‌ ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದು ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಚಾಲಕ ಅಶ್ಫಕ್ ಎಂಬಾತನ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಮೂರ್ನಾಡು ಪೊಲೀಸರು ಭೇಟಿ‌ನೀಡಿ ಪರಿಶೀಲಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕುರುಳಿದ ಕಾರು. ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕುರುಳಿದ ಕಾರು (Car Accident). ಮಡಿಕೇರಿಯ (madikeri) ವಿರಾಜಪೇಟೆ (virajpet) ತಾಲ್ಲೂಕಿನ ಕೊಂಡಂಗೇರಿ ಬಳಿ ಘಟನೆ. ಕಾರಿನಲ್ಲಿದ್ದ ಚಾಲಕ, ಪ್ರಯಾಣಿಕರು ಪವಾಡ ಸದೃಶ ಪಾರು. ಕೆಳಕ್ಕುರುಳಿ ನದಿಯಿಂದ ಕೆಲವೇ ಅಡಿ ದೂರದಲ್ಲಿ ನಿಂತ ಕಾರು. ಸ್ಥಳಕ್ಕೆ ಮೂರ್ನಾಡು ಠಾಣಾ ಪೊಲೀಸರ ಭೇಟಿ ಪರಿಶೀಲನೆ.

ಮತ್ತೊಂದು ಅಪಘಾತದಲ್ಲಿ ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ಸಾವು:
ಬಾಗಲಕೋಟೆ: ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದ ಮೂವರು ಕೊನೆಯುಸಿರೆಳೆದಿದ್ದಾರೆ. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಜಾಲಿಹಾಳ ಗ್ರಾಮದ ಬಳಿ, ಗದಗ-ಬಾಗಲಕೋಟೆ ಮಾರ್ಗದ ರಸ್ತೆಯಲ್ಲಿ ದುರ್ಘಟನೆ ನಡೆದಿದೆ.

ಬಸನಗೌಡ ಪಾಟೀಲ್(60), ಮಂಜುನಾಥ ಮಾರನಬಸರಿ (38) ಸ್ಥಳದಲ್ಲಿಯೇ ಮೃತಪಟ್ಟರೆ ಸಂಗಮ್ಮ ಪಾಟಿಲ್(55) ಗದಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಇಬ್ಬರಿಗೆ ಗಾಯಗಳಾಗಿದ್ದು, ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಗದಗ ಜಿಲ್ಲೆ ಡಸ ಹಡಗಲಿ ಗ್ರಾಮದವರು. ಬಾಗಲಕೋಟೆ ತಾಲ್ಲೂಕಿನ ಭಗವತಿ ಗ್ರಾಮಕ್ಕೆ ನಿನ್ನೆ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ಬಂದಿದ್ದರು. ರಾತ್ರಿ ವಾಪಸ್ ಹೊರಡುವಾಗ ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್ ಸವಾರ ದುರ್ಮರಣ -ಮೈಸೂರು: ಹುಣಸೂರು ತಾಲೂಕಿನ ಕಲ್‌ಬೆಟ್ಟ ಜಂಕ್ಷನ್‌ನಲ್ಲಿ ಬೈಕ್‌ಗೆ ಚಾಮರಾಜನಗರ ಡಿಪೋಗೆ ಸೇರಿದ ಬಸ್ ಡಿಕ್ಕಿಯಾಗಿ ಭುವನಹಳ್ಳಿಯ ಬೈಕ್ ಸವಾರ ಮಂಜುನಾಥ ದುರ್ಮರಣಕ್ಕೀಡಾಗಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಸಂಸದರಿಂದ ದಾರಿ ತಪ್ಪಿಸುವ ಕೆಲಸವೆಂದರೆ‌ ಇದೇ ಇರಬೇಕು ಅಲ್ವಾ ಡಿಕೆ ಸುರೇಶ್ ರವರೇ!? ಮಾಜಿ ಸಚಿವ ಸುರೇಶ್ ಕುಮಾರ್​ ಪ್ರಶ್ನೆ

ಇದನ್ನೂ ಓದಿ:
ಕಣ್ಣಳತೆಯಲ್ಲೇ ನಕಲಿ ಬೀಗದ ಕೈ ತಯಾರಿಸಿ ಅಚ್ಚುಕಟ್ಟಾಗಿ ಪ್ಲ್ಯಾನ್ ಮಾಡಿ 13 ವರ್ಷದಿಂದ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್

Published on: Feb 01, 2022 12:26 PM