ಸಂಸದರಿಂದ ದಾರಿ ತಪ್ಪಿಸುವ ಕೆಲಸವೆಂದರೆ‌ ಇದೇ ಇರಬೇಕು ಅಲ್ವಾ ಡಿಕೆ ಸುರೇಶ್ ರವರೇ!? ಮಾಜಿ ಸಚಿವ ಸುರೇಶ್ ಕುಮಾರ್​ ಪ್ರಶ್ನೆ

ಯಾವುದೇ ಸಂಬಂಧವಿಲ್ಲದ‌, ಯಾವುದೋ ಖಾಸಗಿ ಸಂಸ್ಥೆಯವರು ಮುದ್ರಿಸಿದ ಪುಸ್ತಕವೊಂದರಲ್ಲಿ ಮಲೆಯಾಳಿ ನಟನ ಭಾವಚಿತ್ರ. ಅದನ್ನೂ ಸಹ ಬಿಜೆಪಿ ಸರ್ಕಾರದ ಶಾಲಾ ಪಠ್ಯದ ಕೇಸರೀಕರಣ ವೆಂದು ಬಣ್ಣಿಸುವ ಪ್ರಯತ್ನ. ಸಂಸದರಿಂದ ದಾರಿ ತಪ್ಪಿಸುವ ಕೆಲಸವೆಂದರೆ‌ ಇದೇ ಇರಬೇಕು ಎಂದು ಮಾಜಿ ಸಚಿವ ಸುರೇಶ್​ ಕುಮಾರ್ ಅವರು ತಿರುಗೇಟು ನೀಡಿದ್ದಾರೆ.​

ಸಂಸದರಿಂದ ದಾರಿ ತಪ್ಪಿಸುವ ಕೆಲಸವೆಂದರೆ‌ ಇದೇ ಇರಬೇಕು ಅಲ್ವಾ ಡಿಕೆ ಸುರೇಶ್ ರವರೇ!? ಮಾಜಿ ಸಚಿವ ಸುರೇಶ್ ಕುಮಾರ್​ ಪ್ರಶ್ನೆ
ಸಂಸದರಿಂದ ದಾರಿ ತಪ್ಪಿಸುವ ಕೆಲಸವೆಂದರೆ‌ ಇದೇ ಇರಬೇಕು ಅಲ್ವಾ ಡಿಕೆ ಸುರೇಶ್ ರವರೇ!? ಸುರೇಶ್ ಕುಮಾರ್​ ಪ್ರಶ್ನೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 01, 2022 | 12:03 PM

ಬೆಂಗಳೂರು: ಕರ್ನಾಟಕ ರಾಜ್ಯದ ಶಾಲಾ ಪಠ್ಯ ಪುಸ್ತಕಗಳಲ್ಲಿ ಮಲಯಾಳಂ (Mollywood) ನಟನ ಭಾವಚಿತ್ರ ಬಳಕೆಯಾಗಿದ್ದು, ನಟ ಕುಂಚಾಕೋ ಬೋಬನ್ (Kunchacko Boban) ಅವರು ಕರ್ನಾಟಕದ ಪಠ್ಯದಲ್ಲಿ ಪೋಸ್ಟ್‌ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬ ಆರೋಪ ಕೇಳೀಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕುಂಚಾಕೋ ಬೋಬನ್ ಅವರು ಟ್ವೀಟ್ ಮಾಡಿ ಕರ್ನಾಟಕ ಸರ್ಕಾರದ ಕಾಲೆಳೆದಿದ್ದಾರೆ. ಇನ್ನು, ಇದೇ ವಿಚಾರವಾಗಿ ಕಾಂಗ್ರೆಸ್​ ಸಂಸದ ಡಿ.ಕೆ. ಸುರೇಶ್ ಅವರೂ ಸಹ ಟ್ವೀಟ್ ಮಾಡಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಇದಕ್ಕೆ ಮಾಜಿ ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್ (s sureshkumar)​ ಅವರು ತಿರುಗೇಟು ನೀಡಿದ್ದು, ವಾಸ್ತವ ಏನೆಂಬುದನ್ನು ಮನದಟ್ಟುಪಡಿಸಿದ್ದಾರೆ.

ಕಾಂಗ್ರೆಸ್ ಸಂಸತ್ ಸದಸ್ಯ ಡಿ.ಕೆ. ಸುರೇಶ್ ನನ್ನಿಂದ ಹಾಗೂ ಹಾಲಿ ಶಿಕ್ಷಣ ಸಚಿವರಿಂದ ಒಂದು ವಿಚಾರಕ್ಕೆ ಸ್ಪಷ್ಟೀಕರಣ ಬಯಸಿದ್ದಾರೆ. ರಾಜ್ಯದ ಒಂದು ತರಗತಿಯ ಪುಸ್ತಕದಲ್ಲಿ “ಅಂಚೆಯಣ್ಣ” ಎಂಬ ಶೀರ್ಷಿಕೆಗೆ ಮಲಯಾಳಂ ಚಲನಚಿತ್ರ ನಟರ ಫೋಟೋ ಹಾಕಿರುವುದನ್ನು ಬಿಜೆಪಿ ಸರ್ಕಾರದ ಕಾರ್ಯ ಎಂದು ಬಣ್ಣಿಸಿ ಇದು ಯಾರ ನಿರ್ದೇಶನದಲ್ಲಿ ಮಾಡಿರುವುದು ಎಂದು ಕೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹಿಂದಿನ ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್​ ಅವರು ಡಿಕೆ ಸುರೇಶ್ ರವರೇ ಅಷ್ಟು ಧಾವಂತ ಬೇಡ. ಅವಸರ ವಿವೇಚನೆ ಕಸಿದುಕೊಳ್ಳುತ್ತದೆ. ನಿಮ್ಮ ಗ್ರಹಿಕೆ ಸಂಪೂರ್ಣವಾಗಿ ತಪ್ಪು. ಇದು ಖಂಡಿತ ನಮ್ಮ ರಾಜ್ಯದ ಶಿಕ್ಷಣ ಇಲಾಖೆ ಪ್ರಕಟಿಸಿರುವ ಆಧಿಕೃತ ಪಠ್ಯ ಪುಸ್ತಕವಲ್ಲ. ಇದೊಂದು ಹುಬ್ಬಳ್ಳಿ ಯಲ್ಲಿ ಖಾಸಗಿ ಪ್ರಕಾಶಿತ ಪುಸ್ತಕ. (ಇದರ ಫೋಟೋ ಲಗತ್ತಿಸಿದ್ದೇನೆ) ಎಂದು ಸಂಸದ ಸುರೇಶ್​ ಅವರ ಗಮನ ಸೆಳೆದಿದ್ದಾರೆ.

ಯಾವುದೇ ಸಂಬಂಧವಿಲ್ಲದ‌, ಯಾವುದೋ ಖಾಸಗಿ ಸಂಸ್ಥೆಯವರು ಮುದ್ರಿಸಿದ ಪುಸ್ತಕವೊಂದರಲ್ಲಿ ಮಲೆಯಾಳಿ ನಟನ ಭಾವಚಿತ್ರ. ಅದನ್ನೂ ಸಹ ಬಿಜೆಪಿ ಸರ್ಕಾರದ ಶಾಲಾ ಪಠ್ಯದ ಕೇಸರೀಕರಣ ವೆಂದು ಬಣ್ಣಿಸುವ ಪ್ರಯತ್ನ. ಸಂಸದರಿಂದ ದಾರಿ ತಪ್ಪಿಸುವ ಕೆಲಸವೆಂದರೆ‌ ಇದೇ ಇರಬೇಕು. ಅಥವಾ ಅವರೇ ದಾರಿ ತಪ್ಪಿರಬೇಕು! ಎಂದು ಮಾಜಿ ಸಚಿವ ಸುರೇಶ್​ ಕುಮಾರ್ ಅವರು ತಿರುಗೇಟು ನೀಡಿದ್ದಾರೆ.

ಡಿಕೆ ಸುರೇಶ್ ಅವರ ಆರೋಪ ಏನಿತ್ತು?: ಬಿಜೆಪಿ ಆಡಳಿತದಲ್ಲಿ ಶಾಲಾ ಪಠ್ಯಕ್ರಮದ ಗುಣಮಟ್ಟ ಕುಸಿಯುತ್ತಿದೆ. ವಿದ್ಯಾರ್ಥಿಗಳು ಈಗಾಗಲೇ ಕಡಿಮೆ ಪಠ್ಯಕ್ರಮ ಹೊಂದಿದ್ದಾರೆ. ಇದರ ಜೊತೆಗೆ ಭೋದನೆಗೆ ಸಂಬಂಧಪಟ್ಟ ಸರ್ಕಾರದ ಮೇಲ್ವಿಚಾರಣೆ ಕೂಡ ಇಲ್ಲ. ಸದ್ಯದ ಪಠ್ಯಪುಸ್ತಕಗಳಲ್ಲಿ ಚಿತ್ರಗಳನ್ನು ಶಿಕ್ಷಣ ಸಮಿತಿಯು ಯಾವುದೇ ಸಂಶೋಧನೆ ಮಾಡದೆ ಅಂತರ್ಜಾಲದಿಂದ ತೆಗೆದು ಪ್ರಕಟಿಸುತ್ತಿದೆ. ಅಂದ ಹಾಗೆ ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರಗಳು ಮತ್ತು ಪಠ್ಯಗಳನ್ನು ಶಿಕ್ಷಣ ಇಲಾಖೆಯಲ್ಲಿ ಸಿದ್ದಪಡಿಸಲಾಗುತ್ತಿದೆಯೋ ಅಥವಾ ಕೇಶವಕೃಪದಲ್ಲೋ ಎಂಬುದನ್ನು ಬಿ.ಸಿ. ನಾಗೇಶ್ ಮತ್ತು ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಬೇಕು. ಬಿಜೆಪಿ ಸರಕಾರದ ತೀವ್ರ ಅಸಡ್ಡೆ ಹಾಗೂ ಅವ್ಯವಸ್ಥೆಯಿಂದ ಕರ್ನಾಟಕವು ಇಡೀ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದರು.

Also Read: ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಪಡೆದುಕೊಂಡ ಮಲಯಾಳಂನ ಖ್ಯಾತ ನಟ; ಇಲ್ಲಿದೆ ಮಜವಾದ ಕತೆ

Published On - 11:58 am, Tue, 1 February 22