AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಪಡೆದುಕೊಂಡ ಮಲಯಾಳಂನ ಖ್ಯಾತ ನಟ; ಇಲ್ಲಿದೆ ಮಜವಾದ ಕತೆ

Kunchacko Boban: ಮಲಯಾಳಂನ ಖ್ಯಾತ ನಟರೊಬ್ಬರಿಗೆ ಕರ್ನಾಟಕದಲ್ಲಿ ಪೋಸ್ಟ್​ಮ್ಯಾನ್ ಕೆಲಸ ಸಿಕ್ಕಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ಕುತೂಹಲಕರ ಸಮಾಚಾರ.

ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಪಡೆದುಕೊಂಡ ಮಲಯಾಳಂನ ಖ್ಯಾತ ನಟ; ಇಲ್ಲಿದೆ ಮಜವಾದ ಕತೆ
ಮಕ್ಕಳ ಪುಸ್ತಕದಲ್ಲಿ ಕುಂಚಾಕೋ ಬೋಬನ್ ಚಿತ್ರ (ಎಡ ಚಿತ್ರ), ನಟ ಕುಂಚಾಕೋ ಬೋಬನ್ (ಬಲ ಚಿತ್ರ)
TV9 Web
| Edited By: |

Updated on:Feb 01, 2022 | 9:30 AM

Share

ಮಲಯಾಳಂ ಚಿತ್ರರಂಗದಲ್ಲಿ (Mollywood) ಕುಂಚಾಕೋ ಬೋಬನ್ (Kunchacko Boban) ದೊಡ್ಡ ಹೆಸರು. ತಮ್ಮ ವೈವಿಧ್ಯಮಯ ಪಾತ್ರಪೋಷಣೆಯಿಂದ ಅಪಾರ ಅಭಿಮಾನಿ ಬಳಗವನ್ನು ಅವರು ಸಂಪಾದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಇರುವ ಅವರು, ಇದೀಗ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಪೋಸ್ಟ್ ಹಂಚಿಕೊಂಡಿದ್ದ ಅವರು, ಕೊನೆಗೂ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಸಿಕ್ಕಿದೆ ಎಂದು ಬರೆದುಕೊಂಡಿದ್ದರು. ಇದೀಗ ಈ ಪೋಸ್ಟ್ ವೈರಲ್ ಆಗಿದೆ. ಅಷ್ಟಕ್ಕೂ ಇದು ವೈರಲ್ (Post Viral) ಆಗಲು ಕಾರಣವೇನು? ಅದರಲ್ಲಿ ಮಜವಾಗಿದ್ದು ಏನಿದೆ ಅಂತೀರಾ? ಇಲ್ಲಿದೆ ಉತ್ತರ. ಕುಂಚಾಕೋ ಬೋಬನ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಕನ್ನಡ ನುಡಿಯುವ ಮಕ್ಕಳಿಗೆ ತಯಾರಾಗಿರುವ ಪರಿಚಯಾತ್ಮಕ ಪುಸ್ತಕವದು. ಅದರಲ್ಲಿ ವಿವಿಧ ಹುದ್ದೆಯನ್ನು ನಿರ್ವಹಿಸುವವರಿಗೆ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಏನೆಂದು ಕರೆಯಲಾಗುತ್ತದೆ ಎಂಬ ಮಾಹಿತಿಯಿದೆ. ಅಚ್ಚರಿಯೆಂದರೆ ಅದರಲ್ಲಿ ‘ಅಂಚೆಪೇದೆ’ಯ ಪರಿಚಯಕ್ಕೆ ಕುಂಚಾಕೋ ಬೋಬನ್ ಫೋಟೋ ಇದೆ.

ಇದನ್ನು ಉಲ್ಲೇಖಿಸಿರುವ ಕುಂಚಾಕೋ ಬೋಬನ್, ‘ಹಾಗಾದರೆ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಲಭ್ಯವಾಗಿದೆ’ ಎಂದು ತಮಾಷೆಯಾಗಿ ಬರೆದುಕೊಂಡು ಕುಂಚಾಕೋ ಫೋಟೋ ಹಂಚಿಕೊಂಡಿದ್ದಾರೆ. ಪತ್ರಗಳನ್ನು ತಲುಪಿಸುವ ಪೋಸ್ಟ್​ಮ್ಯಾನ್ ಕೆಲಸ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದ್ದು, ಮಲಯಾಳಂ ಖ್ಯಾತ ತಾರೆಯರೂ ಕೂಡ ಇದಕ್ಕೆ ಕಾಮೆಂಟ್ ಮಾಡುತ್ತಿದ್ದಾರೆ.

ಕುಂಚಾಕೋ ಪೋಸ್ಟ್​ಮ್ಯಾನ್ ಆಗಿದ್ದು ಹೇಗೆ? ವಾಸ್ತವವಾಗಿ ಕುಂಚಾಕೋ ಬೋಬನ್ ಹಂಚಿಕೊಂಡಿರುವ ಚಿತ್ರ ಅವರ ‘ಒರಿಡತೊರು ಪೋಸ್ಟ್​ಮ್ಯಾನ್’ ಚಿತ್ರದ್ದು. ಅದರಲ್ಲಿ ಪೋಸ್ಟ್​ಮ್ಯಾನ್ ಆಗಿ ಕಾಣಿಸಿಕೊಂಡಿದ್ದ ಕುಂಚಾಕೋ, ಎಲ್ಲರ ಮನಗೆದ್ದಿದ್ದರು. ಮಕ್ಕಳಿಗೆ ವ್ಯಾಸಂಗ ಮಾಡಲು ಅನುಕೂಲವಾಗಲು ತಯಾರಾದ ಪರಿಚಯಾತ್ಮಕ ಪುಸ್ತಕವೊಂದರಲ್ಲಿ ಅವರ ಈ ಚಿತ್ರದ ಸ್ಟಿಲ್ ಒಂದನ್ನು ಬಳಸಲಾಗಿದೆ. ಇದು ವೈರಲ್ ಆಗಿದ್ದು, ಸ್ವತಃ ಕುಂಚಾಕೋ ಅವರನ್ನು ತಲುಪಿ ಚಕಿತರನ್ನಾಗಿಸಿದೆ. ಆದ್ದರಿಂದಲೇ ನಟ ಫೋಟೋ ಹಂಚಿಕೊಂಡು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಕುಂಚಾಕೋ ಬೋಬನ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

View this post on Instagram

A post shared by Kunchacko Boban (@kunchacks)

ಕುಂಚಾಕೋ ಬೋಬನ್ ಮಲಯಾಳಂನ ಖ್ಯಾತ ನಟರಲ್ಲಿ ಒಬ್ಬರು. ಇನ್ಸ್ಟಾಗ್ರಾಂನಲ್ಲಿ ಅವರಿಗೆ ಸುಮಾರು 26 ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದಾರೆ. ಚಿತ್ರಗಳ ವಿಷಯಕ್ಕೆ ಬಂದರೆ, ಕುಂಚಾಕೋ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಭೀಮಂಟೆ ವಳಿ’ ಎಂಬ ಕಾಮಿಡಿ ಚಿತ್ರದಲ್ಲಿ. ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ಹಲವು ಚಿತ್ರಗಳಲ್ಲಿ ನಟ ಬಣ್ಣಹಚ್ಚುತ್ತಿದ್ದಾರೆ.

ಇದನ್ನೂ ಓದಿ:

‘ಹೃತಿಕ್​ ರೋಷನ್​ ಜತೆ ನೀವು ಡೇಟಿಂಗ್​ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?

‘ಕನ್ನಡತಿ’ ನಟಿ ರಂಜನಿ ರಾಘವನ್​ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ

Published On - 9:27 am, Tue, 1 February 22