‘ಕನ್ನಡತಿ’ ನಟಿ ರಂಜನಿ ರಾಘವನ್​ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ

ರಂಜನಿ ರಾಘವನ್​ ಅವರು ಉಳಿತಾಯದ ಬಗ್ಗೆ ಇತ್ತೀಚೆಗೆ ಕೆಲವು ಸಲಹೆ ನೀಡಿದ್ದರು. ಹಾಗಾದ್ರೆ ಅವರು ಸ್ವತಃ ಎಷ್ಟು ಹಣ ಉಳಿತಾಯ ಮಾಡಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡುವುದು ಸಹಜ.

TV9kannada Web Team

| Edited By: Madan Kumar

Jan 31, 2022 | 10:01 AM

ಕನ್ನಡ ಕಿರುತೆರೆಯಲ್ಲಿ ನಟಿ ರಂಜನಿ ರಾಘವನ್ (Ranjani Raghavan)​ ಅವರು ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ‘ಕನ್ನಡತಿ’ (Kannadathi Serial) ಧಾರಾವಾಹಿಯಿಂದ ಅವರಿಗೆ ಹೆಚ್ಚು ಖ್ಯಾತಿ ಸಿಕ್ಕಿದೆ. ನಟನೆಯ ಜೊತೆಗೆ ಅವರು ಬರಹಗಾರ್ತಿ ಆಗಿಯೂ ಸಕ್ರಿಯರಾಗಿದ್ದಾರೆ. ಸೀರಿಯಲ್​ ಮಾತ್ರವಲ್ಲದೇ ಸಿನಿಮಾದಲ್ಲೂ ನಟಿಸಿರುವ ರಂಜನಿ ರಾಘವನ್​ ಅವರಿಗೆ ಒಳ್ಳೆಯ ಸಂಭಾವನೆ ಸಿಗುತ್ತಿದೆ. ಇತ್ತೀಚೆಗೆ ಅವರು ಹಣ ಉಳಿಸುವುದರ ಮಹತ್ವದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದರು. ಹಾಗಾದ್ರೆ ರಂಜನಿ ಅವರು ಸ್ವತಃ ಎಷ್ಟು ಹಣ ಉಳಿತಾಯ ಮಾಡಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡುವುದು ಸಹಜ. ಅದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಪ್ರಾಮಾಣಿಕವಾಗಿ ಉತ್ತರ ನೀಡುತ್ತೇನೆ. ಒಂದು ವೇಳೆ ನಟನೆ ಬಿಟ್ಟರೂ ಕೂಡ ಭಯವಿಲ್ಲದೇ ಆರಾಮಾಗಿ ಜೀವನ ಸಾಗಿಸುವಷ್ಟು ಹಣವನ್ನು ಉಳಿತಾಯ ಮಾಡಿದ್ದೇನೆ. ನಟನೆಯ ಅವಕಾಶ ಸಿಗದೇ ಇದ್ದರೂ ಜೀವನ ಸಾಗಿಸಬಲ್ಲೆ’ ಎಂದು ಅವರು ಹೇಳಿದ್ದಾರೆ. ರಂಜನಿ ರಾಘವನ್​ ನಟನೆಯ ‘ಟಕ್ಕರ್​’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಮುಂತಾದ ಸಿನಿಮಾಗಳು (Ranjani Raghavan Movies) ಬಿಡುಗಡೆಗೆ ಸಜ್ಜಾಗಿವೆ. ಕೊರೊನಾ ಕಾರಣದಿಂದ ಇವುಗಳ ಬಿಡುಗಡೆ ದಿನಾಂಕ ತಡವಾಗಿದೆ.

ಇದನ್ನೂ ಓದಿ:

‘ಕನ್ನಡತಿ’ ನಟಿ ರಂಜನಿ ರಾಘವನ್​ಗೆ ಕೊವಿಡ್​ ಪಾಸಿಟಿವ್​; ಬೇಗ ಗುಣಮುಖರಾಗಿ ಚಾಂಪ್​ ಎಂದ ಕಿರಣ್​ ರಾಜ್​

ಹಣ ಉಳಿಸಲು ಅಭಿಮಾನಿಗಳಿಗೆ ಐದು ಕಿವಿಮಾತು ಹೇಳಿದ ‘ಕನ್ನಡತಿ’ ನಟಿ ರಂಜನಿ ರಾಘವನ್​

Follow us on

Click on your DTH Provider to Add TV9 Kannada