ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಕ್ರೂಸರ್ ಮೇಲೆ ಕುಳಿತು ಬೆಂಕಿ ಹಚ್ಚಿಕೊಂಡ ಮಾಲಿಕ; ಓನರ್ ಬಚಾವ್, ವಾಹನ ಸುಟ್ಟುಕರಕಲು
ಕೊಪ್ಪಳ ನಗರದ ಎಲ್ಐಸಿ ಕಚೇರಿ ಮುಂಭಾಗ ದೊಡ್ಡ ದುರಂತವೊಂದು ತಪ್ಪಿದೆ. ಇದಕ್ಕೆಲ್ಲ ಕಾರಣ ಫೈನಾನ್ಸ್ ಕಿರುಕುಳ. ಸಾಲ ಸೋಲ ಮಾಡಿ ಕ್ರೂಸರ್ ಖರೀದಿ ಮಾಡಿದ್ದ ಕ್ರೂಸರ್ ಮಾಲೀಕ ಸುಭಾಷ್ ಚಂದ್ರ ನಿನ್ನೆ (ಜನವರಿ 30) ತನ್ನ ವಾಹನಕ್ಕೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಪವಾಡ ಸದೃಶ ರೀತಿಯಲ್ಲಿ ಮಾಲಿಕ ಸುಭಾಷ್ ಚಂದ್ರ ಬದುಕುಳಿದ್ದಾರೆ.
ಕೊಪ್ಪಳ: ಆತ ಸಾಲ ಸೋಲ ಮಾಡಿ ವಾಹನ ತಗೆದುಕೊಂಡಿದ್ದ. ಆದರೆ ವೀಕೆಂಡ್ ಕರ್ಪ್ಯೂ, ಕೊರೊನಾ ಭೀತಿ, ಆ ವಾಹನ ಮಾಲೀಕನಿಗೆ ಇನ್ನಿಲ್ಲದ ಸಂಕಷ್ಟ ತಂದಿಟ್ಟಿತ್ತು. ಈ ಮದ್ಯೆ ಸಾಲಗಾರರ ಕಿರುಕುಳ. ಇದರಿಂದ ಬೇಸತ್ತು ಆತ ವಾಹನಕ್ಕೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹೋಗಿದ್ದ. ಆದರೆ ಅದೃಷ್ಟ ಚೆನ್ನಾಗಿತ್ತು. ಮಾಲೀಕ ಬದುಕಿದ್ದಾನೆ. ಅಷ್ಟಕ್ಕೂ ವಾಹನಕ್ಕೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದ ಮಾಲೀಕ ಯಾರೂ ಅಂತೀರಾ ಈ ವರದಿ ನೋಡಿ.
ಕೊಪ್ಪಳ ನಗರದ ಎಲ್ಐಸಿ ಕಚೇರಿ ಮುಂಭಾಗ ದೊಡ್ಡ ದುರಂತವೊಂದು ತಪ್ಪಿದೆ. ಇದಕ್ಕೆಲ್ಲ ಕಾರಣ ಫೈನಾನ್ಸ್ ಕಿರುಕುಳ. ಸಾಲ ಸೋಲ ಮಾಡಿ ಕ್ರೂಸರ್ ಖರೀದಿ ಮಾಡಿದ್ದ ಕ್ರೂಸರ್ ಮಾಲೀಕ ಸುಭಾಷ್ ಚಂದ್ರ ನಿನ್ನೆ (ಜನವರಿ 30) ತನ್ನ ವಾಹನಕ್ಕೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಪವಾಡ ಸದೃಶ ರೀತಿಯಲ್ಲಿ ಮಾಲಿಕ ಸುಭಾಷ್ ಚಂದ್ರ ಬದುಕುಳಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರೋದು ಫೈನಾನ್ಸ್ ಕಿರುಕುಳ.
ವಾಹನ ಮಾಲೀಕ ಸುಭಾಷ್ ಚಂದ್ರ ಇದೇ 28 ರಂದು ಫೈನಾನ್ಸ್ಗೆ ಕಂತು ಕಟ್ಟಬೇಕಿತ್ತು. ಚೋಳ ಫೈನಾನ್ಸ್ನಲ್ಲಿ ವಾಹನಕ್ಕಾಗಿ ಸಾಲ ಮಾಡಿದ್ದಾರೆ. ಆದರೆ ವೀಕೆಂಡ್ ಕರ್ಪ್ಯೂ ಹಾಗೂ ಕೊರೊನಾ ಭೀತಿಯಿಂದ ದುಡಿಮೆಯಾಗಿಲ್ಲ. ಹೀಗಾಗಿ ಎರಡು ಕಂತು ಬಾಕಿ ಉಳಿಸಿಕೊಂಡಿದ್ದಾರೆ. ಇದೇ 28 ರಂದು ಎರಡು ಕಂತಿನ ಸುಮಾರು 18 ಸಾವಿರ ಹಣ ಕಟ್ಟಬೇಕಿತ್ತು. ಆದರೆ ಹಣ ಹೊಂದಿಕೆಯಾಗಿರಲಿಲ್ಲ. ಇಂದು ಫೈನಾನ್ಸ್ನವರು ಪದೇ ಪದೇ ಫೋನ್ ಮಾಡಿ ಕಿರುಕುಳ ಕೊಟ್ಟಿದ್ದಾರೆ. ಇದರಿಂದ ಬೇಸತ್ತು ವಾಹನ ಮಾಲೀಕ ವಾಹನದೊಂದಿಗೆ ತಾನು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಹಣೆಬರಹ ಗಟ್ಟಿ ಇತ್ತು ಬದುಕುಳಿದ್ದಾರೆ.