ವೈರಲ್ ಆದ ಈ ವಿಡಿಯೋದಲ್ಲಿ ಪುಟ್ಟ ಬಾಲಕಿ ಆನೆಯೊಂದಿಗೆ ಮೊದಲು ಫುಟ್ಬಾಲ್ ಜತೆಗೆ ಆಟವಾಡುತ್ತಿದೆ. ಆನೆಯ ಸುತ್ತಲೂ ಆಡುತ್ತಿರುವುದು, ಆನೆಯನ್ನು ತಬ್ಬಿಕೊಳ್ಳುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಬಳಿಕ ಈ ಪುಟ್ಟ ಬಾಲಕಿ ಆನೆಯ ಕೆಚ್ಚಲಿಗೆ ಬಾಯಿ ಹಾಕಿದ್ದು, ಹಾಲು ಕುಡಿಯಲು ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಆನೆಯು ತನ್ನ ಸೊಂಡಿಲನ್ನು ಬಾಲಕಿಯತ್ತ ತಿರುಗಿಸುವ ಮೂಲಕ ಮಗುವನ್ನು ಮುದ್ದಿಸುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದೆ.
ಆನೆಯ ಕೆಚ್ಚಲು ಬಾಲಕಿಗೆ ಸಿಗುತ್ತಿಲ್ಲವಾದರೂ ನಾಲ್ಕೈದು ಬಾರಿ ಹಾಲು ಕುಡಿಯುವ ಪ್ರಯತ್ನದತ್ತ ಮಗು ಮುಂದೆ ಸಾಗಿದೆ. ಗೋಲಾಘಾಟ್ ಜಿಲ್ಲೆಯ ಹರ್ಷಿತಾ ಬೋರಾ ಎಂಬ ಬಾಲಕಿ ಕೂಡ ಆನೆಯ ಜೊತೆ ಹೀಗೆಯೇ ಫುಟ್ಬಾಲ್ ಆಡುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
ಈ ಬಗ್ಗೆ ಬಾಲಕಿ ಬಿನು ಪ್ರತಿಕ್ರಿಯೆ ನೀಡಿದ್ದು, ಆನೆಯು ನನ್ನೊಂದಿಗೆ ಚೆಂಡನ್ನು ಆಡುತ್ತದೆ. ನನ್ನ ಕೈಯಿಂದ ಬಾಳೆಹಣ್ಣು ತಿನ್ನಲು ಆನೆ ಇಷ್ಟಪಡುತ್ತದೆ ಎಂದು ಆನೆಯೊಂದಿಗಿನ ತನ್ನ ಒಡನಾಟವನ್ನು ವಿವರಿಸಿದ್ದಾಳೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಕಂಡ ನೆಟ್ಟಿಗರು ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಮಾನವ-ಆನೆಗಳ ಸಂಘರ್ಷ ಹೆಚ್ಚುತ್ತಿರುವ ಸಮಯದಲ್ಲಿ ಅಪರೂಪದ ವೀಡಿಯೋ ಒಂದು ಬಂದಿವೆ. ಪ್ರಾಣಿಗಳು ಅಲೆದಾಡುವ ಕಾಡುಗಳು, ತೋಟಗಳು ಮತ್ತು ಚಹಾ ತೋಟಗಳು ಆನೆಗಳ ಪಾಲಿಗೆ ಈಗ ಇಲ್ಲದಂತಾಗಿದೆ. ಅಂತದರಲ್ಲಿ ಮಗುವಿನೊಂದಿಗೆ ಆನೆ ಒಡನಾಟ ಅಧ್ಬುತವಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಒನ್ನೊಬ್ಬರು ಇದು ಹೃದಯಸ್ಪರ್ಶಿ ವಿಡಿಯೋ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Viral Video: ದೈತ್ಯಾಕಾರದ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತ ವ್ಯಕ್ತಿ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು
ಬೈಕ್ ಸವಾರನೊಬ್ಬ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದು ರೋಚಕ ಅದರೆ ಬೈಕ್ ತೆಗೆದುಕೊಳ್ಳಲು ಹೋಗಿದ್ದು ಮಾತ್ರ ಮೂರ್ಖತನ!