Viral Video: ದೈತ್ಯಾಕಾರದ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತ ವ್ಯಕ್ತಿ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು

ವೈರಲ್​ ಆದ ವಿಡಿಯೋದಲ್ಲಿ, ವ್ಯಕ್ತಿಯೊರ್ವ ದೊಡ್ಡ ಹೆಬ್ಬಾವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಮತ್ತೊಂದು ಕೋಣೆಯತ್ತ ಸಾಗಿದ್ದಾನೆ. ಹೆಬ್ಬಾವು ಎಷ್ಟು ಉದ್ದವಾಗಿದೆ ಎಂದರೆ ಅದರ ಅರ್ಧ ಭಾಗ ನೆಲದ ಮೇಲೆ ಮತ್ತು ಬಾಯಿಯ ಭಾಗ ನೇರವಾಗಿ ವ್ಯಕ್ತಿಯ ತಲೆಗಿಂತ ಮೇಲೆ ಇದೆ.

Viral Video: ದೈತ್ಯಾಕಾರದ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತ ವ್ಯಕ್ತಿ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು
ಹೆಬ್ಬಾವು
Follow us
TV9 Web
| Updated By: preethi shettigar

Updated on:Jan 11, 2022 | 8:56 AM

ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ಒಂದಿಲ್ಲಾ ಒಂದು ವೈರಲ್​ ಆಗುತ್ತಲೇ ಇರುತ್ತದೆ. ಅದರಲ್ಲೂ ಹಾವಿನ (Snake) ವಿಡಿಯೋ ಜನರನ್ನು ಹೆಚ್ಚು ಆಕರ್ಷಿಸುತ್ತವೆ. ಹಾವನ್ನು ನೋಡಿದ ಕೂಡಲೇ ಸಾಮಾನ್ಯವಾಗಿ ಅನೇಕರಲ್ಲಿ ಭಯ ಹುಟ್ಟುತ್ತದೆ. ಹಾವು ಚಿಕ್ಕದಾಗಿರಲಿ ದೊಡ್ಡದಿರಲಿ ಎಲ್ಲರೂ ಅದರಿಂದ ದೂರವಿರಲು ಬಯಸುತ್ತಾರೆ . ಆದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ವ್ಯಕ್ತಿಯೊರ್ವರು ಬೃಹತ್​ ಗಾತ್ರದ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತು ಮುಂದೆ ಸಾಗಿದ್ದಾರೆ.

ವೈರಲ್​ ಆದ ವಿಡಿಯೋದಲ್ಲಿ, ವ್ಯಕ್ತಿಯೊರ್ವ ದೊಡ್ಡ ಹೆಬ್ಬಾವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಮತ್ತೊಂದು ಕೋಣೆಯತ್ತ ಸಾಗಿದ್ದಾನೆ. ಹೆಬ್ಬಾವು ಎಷ್ಟು ಉದ್ದವಾಗಿದೆ ಎಂದರೆ ಅದರ ಅರ್ಧ ಭಾಗ ನೆಲದ ಮೇಲೆ ಮತ್ತು ಬಾಯಿಯ ಭಾಗ ನೇರವಾಗಿ ವ್ಯಕ್ತಿಯ ತಲೆಗಿಂತ ಮೇಲೆ ಇದೆ. ಚೀಲವೊಂದನ್ನು ಎತ್ತುವ ಹಾಗೆ ಹೆಬ್ಬಾವನ್ನು ವ್ಯಕ್ತಿ ಹೊತ್ತೊಯ್ಯುತ್ತಿದ್ದಾರೆ. ಸದ್ಯ ಈ ವೀಡಿಯೊವನ್ನು ನೋಡಿದ ನೆಟ್ಟಗರು ಆಶ್ಚರ್ಯಚಕಿತರಾಗಿದ್ದಾರೆ.

View this post on Instagram

A post shared by hepgul5 ? (@hepgul5)

ಈ ವಿಡಿಯೋದಲ್ಲಿನ ವ್ಯಕ್ತಿ ಹಾವಿನೊಂದಿಗೆ ನಿಕಟ ಸಂಬಂಧ ಹೊಂದಿರುವಂತೆ ಕಾಣುತ್ತದೆ. ಈ ವೀಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ‘hepgul5’ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಕೆಲವರು ಈ ವೀಡಿಯೋವನ್ನು ತುಂಬಾ ತಮಾಷೆಯಾಗಿ ತೆಗೆದುಕೊಂಡರೆ ಮತ್ತೆ ಕೆಲವರು ಈ ವಿಡಿಯೋ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅನೇಕರು ಕಮೆಂಟ್​ ಮೂಲಕ ಈ ವಿಡಿಯೋ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು ಹೆಬ್ಬಾವು ಆ ವ್ಯಕ್ತಿಯನ್ನು ತಿನ್ನಬಹುದು ಎಂದು ಕಮೆಂಟ್​ ಮಾಡಿದರೆ, ಮತ್ತೊಬ್ಬರು ಹೆಬ್ಬಾವು ಅಲ್ಲ ಸಣ್ಣ ಹಾವನ್ನು ಹತ್ತಿರ ಇಟ್ಟುಕೊಳ್ಳಬಾರದು ಎಂದು ಹೇಳಿದ್ದಾರೆ.  ಇನ್ನು ಅನೇಕರು ಈ ವ್ಯಕ್ತಿ ಹೆಬ್ಬಾವು ಪ್ರೇಮಿ ಇರಬೇಕು ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಬರ್ತಡೇಗೆ ಮೊಬೈಲ್​ ಗಿಪ್ಟ್​ ನೀಡಿದ ಮಗ: ಖುಷಿಯಿಂದ ಕಣ್ಣೀರಾದ ತಾಯಿಯ ವಿಡಿಯೋ ವೈರಲ್​

ಒಂದೇ ದಿನ ಎರಡು ಅಪಘಾತದಿಂದ ಪಾರಾದ ಬೈಕ್​ ಸವಾರ: ವಿಡಿಯೋ ವೈರಲ್​

Published On - 8:42 am, Tue, 11 January 22

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ