ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ವೈದ್ಯೆಯರು: ವೈರಲ್​ ಆದ ಎಂಗೇಜ್​ಮೆಂಟ್​​ ಫೋಟೋಗಳು

ಇದೀಗ ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ಜೋಡಿ ಸದ್ಯದಲ್ಲೇ ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ. ಬೆಂಗಾಲಿ ಮತ್ತು ಪಂಜಾಬ್​ ಸಂಪ್ರದಾಯದಂತೆ  ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರ ಮದುವೆ ಸಮಾರಂಭಕ್ಕೆ  ಸಿವಿಲ್​ ಯೂನಿಯನ್​ ಎಂದು ಕರೆದಿದ್ದಾರೆ.

ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ವೈದ್ಯೆಯರು: ವೈರಲ್​ ಆದ ಎಂಗೇಜ್​ಮೆಂಟ್​​ ಫೋಟೋಗಳು
ಸುರಭಿ ಮಿತ್ರ ಮತ್ತು ಪರೋಮಿತಾ ಮುಖರ್ಜಿ

ನಾಗ್ಪುರ: ಇತ್ತೀಚಿನ ದಿನಗಳಲ್ಲಿ ಸಲಿಂಗಿಗಳು ಮದುವೆಯಾಗುತ್ತಿರುವ ಘಟನೆಗಳು ಏರಿಕೆಯಾಗುತ್ತಿವೆ. ಕಳೆದ ತಿಂಗಳು ಹೈದ್ರಾಬಾದ್​ನಲ್ಲಿ ಸುಪ್ರಿಯೊ ಚಕ್ರವರ್ತಿ ಮತ್ತು ಅಭಯ್​ ದಂಗ್​ ಎನ್ನುವ ಸಲಿಂಗಿಗಳು ಮದುವೆಯಾಗಿ ದೇಶದಾದ್ಯಂತ ಸುದ್ದಿಯಾಗಿದ್ದರು. ಇದೀಗ  ನಾಗ್ಪುರದ ಮಹಿಳಾ ಸಲಿಂಗಿ ವೈದ್ಯರಿಬ್ಬರು ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಡಾ. ಸುರಭಿ ಮಿತ್ರ ಮತ್ತು ಡಾ. ಪರೋಮಿತ ಮುಖರ್ಜಿ ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ವೈದ್ಯರು. ಇದೀಗ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಸದ್ಯ ಈ ಸಲಿಂಗಿ ವೈದ್ಯ ಜೋಡಿಯ ಲವ್​ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತಮ್ಮ ಪ್ರೀತಿಯ ಕತೆಯ ಬಗ್ಗೆ ಸುರಭಿ ಹೇಳಿಕೊಂಡಿದ್ದಾರೆ. ಸುರಭಿ ಮತ್ತು ಪರೋಮಿತ ಮೊದಲು ಭೇಟಿಯಾಗಿದ್ದು ಕೋಲ್ಕತ್ತಾದ ಕಾನ್ಫರೆನ್ಸ್​ ಒಂದರಲ್ಲಿ. ಸುರಭಿ  ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಆಗ ಪರೋಮಿತ ಸುರಭಿಯನ್ನು ನೋಡಿದ್ದರು. ನಂತರ ಇನ್ಸ್ಟಾಗ್ರಾಮ್​ ಮೂಲಕ  ಇಬ್ಬರ  ಸ್ನೇಹ ಮುಂದುವರೆದಿತ್ತು. ಪರೋಮಿತ ಅವರಿಗೆ ಇದು ಕೇವಲ ಆಕರ್ಷಣೆಯಾಗಿ ಕಾಣಿಸಿತ್ತು. ಈ ವೇಳೆ ಸುರಭಿ ಮತ್ತು ಪರೋಮಿತ ತಮ್ಮ ಇತರ ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದರು. ಆಗ ಸುರಭಿ  ತಮ್ಮ ಪ್ರೇಮ ನಿವೇದನೆ ಮಾಡಿದ್ದರು. ಆ ಬಳಿಕ ನಡೆದಿದ್ದು ಇತಿಹಾಸ ಎನ್ನುತ್ತಾರೆ ಸುರಭಿ.

ಇದೀಗ ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ಜೋಡಿ ಸದ್ಯದಲ್ಲೇ ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ. ಬೆಂಗಾಲಿ ಮತ್ತು ಪಂಜಾಬ್​ ಸಂಪ್ರದಾಯದಂತೆ  ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರ ಮದುವೆ ಸಮಾರಂಭಕ್ಕೆ  ಸಿವಿಲ್​ ಯೂನಿಯನ್​ ಎಂದು ಕರೆದಿದ್ದಾರೆ. ಇವರ ಲವ್​ ಸ್ಟೋರಿಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇವರ ನಿಶ್ಚಿತಾರ್ಥದ ಫೋಟೋಗಳು ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ:

ಅಫ್ಘಾನಿಸ್ತಾನ: ತಾಲಿಬಾನಿಗಳಿಂದ ಪಾರಾಗಿ 4 ತಿಂಗಳ ಬಳಿಕ ಹೆತ್ತವರನ್ನು ಸೇರಿದ ಮಗು

Published On - 10:33 am, Tue, 11 January 22

Click on your DTH Provider to Add TV9 Kannada