Viral Video: ಹದಗೆಟ್ಟ ಊರಿನ ರಸ್ತೆಯ ಬಗ್ಗೆ ವಿವರಿಸಲು ರಿಪೋರ್ಟರ್​ ಆದ ಬಾಲಕಿ

ಬಾಲಕಿಯೊಬ್ಬಳು ರಿಪೋರ್ಟರ್​ ಆಗುವ ಮೂಲಕ ತಮ್ಮ ಊರಿನ ರಸ್ತೆಯ ದುಸ್ಥಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸದ್ಯ ವಿಡಿಯೋ ಸಖತ್​ ವೈರಲ್​ ಆಗಿದೆ.

Viral Video: ಹದಗೆಟ್ಟ ಊರಿನ ರಸ್ತೆಯ ಬಗ್ಗೆ ವಿವರಿಸಲು ರಿಪೋರ್ಟರ್​ ಆದ ಬಾಲಕಿ
ವರದಿಗಾರ್ತಿಯಾಗಿರುವ ಬಾಲಕಿ
Follow us
| Updated By: Pavitra Bhat Jigalemane

Updated on:Jan 11, 2022 | 12:11 PM

ಜಮ್ಮು&ಕಾಶ್ಮೀರ: ಸಾಮಾಜಿಕ ಜಾಲತಾಣಗಳು ಕೇವಲ ತಮಾಷೆ ವಿಡಿಯೋಗಳಿಗೆ ವೇದಿಕೆಯಾಗಿ ಉಳಿಯದೆ ಸಾಮಾಜದ ಉತ್ತಮ ಕೆಲಸಗಳಿಗೂ ಪ್ಲಾಟ್​ಫಾರ್ಮ್​ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳು ಕೂಡ ತಮ್ಮ ಕ್ರಿಯೇವಿಟಿಯನ್ನು ಬಳಸಿಕೊಂಡು ಸಮಾಜಿಕ ಕೆಲಸಗಳಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ಕಾಶ್ಮೀರದ ಪುಟ್ಟ ಬಾಲಕಿಯೊಬ್ಬಳು ತನ್ನೂರಿನ ರಸ್ತೆಯ ದುಸ್ಥಿತಿಯ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ. ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುರಿದ ಹಿಮ ಮಳೆಗೆ ರಸ್ತೆಗಳು ಹದಗೆಟ್ಟಿವೆ. ರಸ್ತೆ ಮಧ್ಯೆ ಗುಂಡಿಗಳಾಗಿ ನೀರು ನಿಂತು ಜನ ಓಡಾಡಲೂ ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ಈ ನಡುವೆ ಬಾಲಕಿಯೊಬ್ಬಳು ರಿಪೋರ್ಟರ್​ ಆಗುವ ಮೂಲಕ ತಮ್ಮ ಊರಿನ ರಸ್ತೆಯ ದುಸ್ಥಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸದ್ಯ ವಿಡಿಯೋ ಸಖತ್​ ವೈರಲ್​ ಆಗಿದೆ. ಗುಲಾಬಿ ಬಣ್ಣದ ಜಾಕೆಟ್​ ಧರಿಸಿದ ಪುಟ್ಟ ಬಾಲಕಿಯೊಬ್ಬಳು ಮೈಕ್​ ಹಿಡಿದು ರಸ್ತೆ ಹದಗೆಟ್ಟ ಬಗ್ಗೆ ದೂರಿದ್ದಾಳೆ. 

ವಿಡಿಯೋದಲ್ಲಿ ಬಾಲಕಿ ಹಾಳಾದ ರಸ್ತೆಯನ್ನು ತೋರಿಸಿ ಮಾತನಾಡಿ ಇಷ್ಟು ಕೆಟ್ಟ ರಸ್ತೆ ಇರುವುದರಿಂದ ಸಂಬಂಧಿಕರು ಮನೆಗೆ ಬರುತ್ತಿಲ್ಲ, ನಮಗೂ ನಡೆದಾಡಲು ಕಷ್ಟವಾಗುತ್ತಿದೆ. ನೋಡಿ ಎಷ್ಟು ಕಸ ಮತ್ತು ಕೆಸರು ತುಂಬಿಕೊಂಡಿದೆ ಎಂದು ತೋರಿಸುತ್ತಾಳೆ. 2 ನಿಮಿಷದವರೆಗೆ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಕೆಸರು ತುಂಬಿದ ರಸ್ತೆಯಲ್ಲಿ ಓಡಾಡಿ ರಸ್ತೆ ಹದಗೆಟ್ಟ ಬಗ್ಗೆ ಅಲ್ಲಿಯ ಜನರು ಸಂಚರಿಸಲು ಕಷ್ಟಪಡುತ್ತಿರುವ ಬಗ್ಗೆ ವಿವರಿಸಿದ್ದಾಳೆ.  ಅಲ್ಲದೇ ಅಲ್ಲಿ ಹಾಕಿರುವ ಕಸಗಳನ್ನು ನೋಡಿ ಕೋಪಗೊಂಡು ಜನರೂ ಕೂಡ ಎಷ್ಟು ಕೊಳಕು ಮನಸ್ಥಿತಿಯವರಾಗಿದ್ದಾರೆ ಎಂದು  ಕೂಗಿದ್ದಾಳೆ.

ವಿಡಿಯೋದ ಕೊನೆಯಲ್ಲಿ ತನ್ನ ವಿಡಿಯೋವನ್ನು ಲೈಕ್,​ ಶೇರ್​ ಮಾಡಿ ಚಾನೆಲ್ ಅನ್ನು ಸಬ್ಸ್ಕ್ರೈಬ್​ ಮಾಡುವಂತೆ ಕೇಳಿದ್ದಾಳೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ. ಒಂದು ಮಿಲಿಯನ್​ಗೂ ಅಧಿಕ ವೀಕ್ಷಣೆಗೊಂಡ ವಿಡಿಯೋ  ಲಕ್ಷಾಂತರ ಬಾರಿ ರೀ ಶೇರ್ ಆಗಿದೆ.

ಈ ಹಿಂದೆ ಪ್ರಧಾನಿ ಮೋದಿಯವರನ್ನು ಉಲ್ಲೇಖಸಿ ಬಾಲಕಿಯೊಬ್ಬಳು ಶಾಲೆಯಲ್ಲಿ ಹೆಚ್ಚು ಹೋಮ್​ ವರ್ಕ್​ ಕೊಡುತ್ತಾರೆ ಎಂದು ದೂರಿದ್ದಳು. ಇದೀಗ ಬಾಲಕಿ ಸರ್ಕಾರವನ್ನು ಎಚ್ಚರಿಸುವ ರೀತಿ ವಿಡಿಯೋ ಮಾಡಿ ತನ್ನ ಊರಿನ ಪರಿಸ್ಥಿಯನ್ನು ತೋರಿಸಿದ್ದಾಳೆ.

ಇದನ್ನೂ ಓದಿ:

ನೀರಿನ ಟ್ಯಾಂಕ್​ನಲ್ಲಿ ಕೋಟಿ ರೂ. ಅಡಗಿಸಿಟ್ಟ ಉದ್ಯಮಿ: ಐಟಿ ದಾಳಿಯಲ್ಲಿ ಹೊರತೆಗೆದ ನೋಟುಗಳನ್ನು ಹೇರ್​ ಡ್ರೈಯರ್​ನಲ್ಲಿ ಒಣಗಿಸಿದ ಅಧಿಕಾರಿಗಳು

Published On - 12:08 pm, Tue, 11 January 22

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು