ಜಿಂಕೆಗಳಿಗಾಗಿ ವಯಲಿನ್ ನುಡಿಸಿದ ಯುವತಿ: ಆನಂದಿಸುತ್ತಾ ಹತ್ತಿರ ಬಂದ ಜಿಂಕೆಗಳು

ವಿಡಿಯೋ ನೋಡಿದ ನೆಟ್ಟಿಗರು ಸಂಗೀತಕ್ಕಿರುವ ಶಕ್ತಿ  ಎಂದು ಹಲವರು ಕಾಮೆಂಟ್​ ಮಾಡಿದರೆ ಡಯಾನಾ ಅವರ ಸೆಲ್ಲೋದಿಂದ ಬಂದ ಧ್ವನಿಗೆ ಹಲವರು ಫಿದಾ ಆಗಿದ್ದಾರೆ.

ಜಿಂಕೆಗಳಿಗಾಗಿ ವಯಲಿನ್ ನುಡಿಸಿದ ಯುವತಿ: ಆನಂದಿಸುತ್ತಾ ಹತ್ತಿರ ಬಂದ ಜಿಂಕೆಗಳು
ಸೆಲ್ಲೋ ನುಡಿಸುತ್ತಿರುವ ಮಹಿಳೆ

ಸಂಗೀತ ಎಲ್ಲರನ್ನೂ ಆಕರ್ಷಿಸುತ್ತದೆ. ನೋವನ್ನು ಮರೆಸುತ್ತದೆ. ಒಂದು ಒಳ್ಳೆಯ ಸಂಗೀತ ಆತ್ಮವನ್ನೂ ಸಂತಸಗೊಳಿಸುವಷ್ಟು ಶಕ್ತಿಯನ್ನು ಹೊಂದಿದೆ. ಜಾತಿ, ಲಿಂಗ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ತನ್ನಡೆಗೆ ಸೆಳೆದು ಪ್ರಪಂಚವನ್ನೇ ಮರೆಸುವ ಗುಣ ಸಂಗೀತಕ್ಕಿದೆ. ಕೇವಲ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳನ್ನೂ ಸಂಗೀತ ಸೆಳೆಯುತ್ತದೆ. ಹೌದು ಪ್ರಾಣಿಗಳೂ ಕೂಡ ಸಂಗೀತವನ್ನು ಆನಂದಿಸುತ್ತದೆ. ಅಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಎರಡು ಜಿಂಕೆಗಳು ಸೆಲ್ಲೋ (ವಯಲಿನ್​) ಶಬ್ದವನ್ನು ಆನಂದಿಸುವ ವಿಡಿಯೋ ವೈರಲ್​ ಆಗಿದೆ.

ಸ್ಪಾನಿಶ್​ ಸೆಲ್ಲೋ ಕಲಾವಿದೆ ಡಯಾನಾ ಅವರು ವನ್ಯಧಾಮದ ಮಧ್ಯದಲ್ಲಿ ಕುಳಿತು ಸೆಲ್ಲೋ ಸಂಗೀತವನ್ನು ನುಡಿಸಿದ್ದಾರೆ. ಇದನ್ನು ಕೇಳಿ ಸುತ್ತಲೂ ಇದ್ದ ಪ್ರಾಣಿಗಳು ಹೆದರದೇ ನಿಂತುಕೊಂಡಿದ್ದವು. ಕೆಲವು ಕ್ಷಣಗಳ ಬಳಿಕ ಎರಡು ಜಿಂಕೆಗಳು  ಡಯಾನಾ ಅವರು ನುಡಿಸುತ್ತ ಕುಳಿತಲ್ಲಿಗೆ ಬರುತ್ತವೆ. ಇದರ ವಿಡಿಯೋವನ್ನು ಚಲೊಡಯಾನಾ ಎನ್ನುವ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಜಿಂಕೆಗಳಿಗೋಸ್ಕರ ಈ ಸಂಗೀತ ಎಂದು ಕ್ಯಾಪ್ಷನ್​ ನೀಡುವ ಮೂಲಕ ಶೇರ್​ ಮಾಡಿದ್ದಾರೆ. ಸೆಲ್ಲೋ ನುಡಿಸುತ್ತಿರುವ ವೇಳೆ ಹಿಂದಿನಿಂದ ಎರಡು  ಜಿಂಕೆಗಳು ನಿಧಾನವಾಗಿ ಬರುತ್ತಿರುವುದನ್ನು ವಿಡಿಯೋದಲ್ಲಿ  ಕಾಣಬಹುದು.

View this post on Instagram

A post shared by Diana (@chelodiana)

ವಿಡಿಯೋ ಹಂಚಿಕೊಂಡ ಬಳಿಕ ಈವರೆಗೆ 3 ಲಕ್ಷ ವೀಕ್ಷಣೆ ಪಡೆದಿದ್ದು, ಸಾವಿರಾರು ಮಂದಿ ಕಾಮೆಂಟ್​ ಮಾಡಿದ್ದಾರೆ. ಸಂಗೀತಕ್ಕಿರುವ ಶಕ್ತಿ  ಎಂದು ಹಲವರು ಕಾಮೆಂಟ್​ ಮಾಡಿದರೆ ಡಯಾನಾ ಅವರ ಸೆಲ್ಲೋದಿಂದ ಬಂದ ಧ್ವನಿಗೆ ಹಲವರು ಫಿದಾ ಆಗಿದ್ದಾರೆ. ಈ ಕಿರು ವಿಡಿಯೋ ಈಗ ಸಖತ್​ ವೈರಲ್​ ಆಗಿದೆ.  ಈ ಹಿಂದೆ ಪಿಯಾನೋ ಶಬ್ದವನ್ನು ಆನಂದಿಸಿ  ತಲೆಯಾಡಿಸುವ ವಿಡಿಯೋ ವೈರಲ್​ ಆಗಿತ್ತು. ಇದೀಗ ಜಿಂಕೆಗಳ ವಿಡಿಯೋ ನೆಟ್ಟಿಗರನ್ನೂ ಸೆಳೆದಿದೆ.

ಇದನ್ನೂ ಓದಿ:

Viral Video: ತನ್ನೊಂದಿಗಿದ್ದ ಶ್ವಾನಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ : ವಿಡಿಯೋ ವೈರಲ್​

Published On - 2:50 pm, Tue, 11 January 22

Click on your DTH Provider to Add TV9 Kannada