Viral: ತಂದೆಯ ಮರಣದ ಬಳಿಕ ಅವರ ಫೋಟೋ ಆಲ್ಬಂ ನೋಡಿ ದಂಗಾದ ಮಗಳು
ತಂದೆಯ ಅದ್ಬುತ ಫೋಟೋಗ್ರಫಿ ಕಲೆಯ ಬಗ್ಗೆ ತಿಳಿಯದೇ ಇರುವ ಮಗಳು ಅವರ ಅನುಪಸ್ಥಿತಿಯಲ್ಲಿ ಅವರ ಕ್ರಿಯೇಟಿವ್ ಫೋಟೋಗಳನ್ನು ನೋಡಿ ಮಂತ್ರಮುಗ್ಧಗೊಂಡಿದ್ದಾಳೆ.
ವ್ಯಕ್ತಿ ಬದುಕಿರುವವರೆಗೆ ಅವರ ಬೆಲೆ ತಿಳಿಯುವುದಿಲ್ಲ. ಅವರ ಕೆಲಸಗಳು ಕಾಣಿಸುವುದೇ ಇಲ್ಲ. ಎಲ್ಲವೂ ಅರಿವಿಗೆ ಬರುವುದು ಆ ವ್ಯಕ್ತಿಯ ಮರಣದ ನಂತರವೇ. ಕೆಲವೊಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಾಗ ಅವರನ್ನು ಕೊಂಚ ನಿರ್ಲಕ್ಷಿಸಿ ಬೇರೆಯದೇ ಯೋಚನೆಯಲ್ಲಿ ತೊಡಗಿಕೊಳ್ಳುತ್ತೇವೆ. ಆದರೆ ಅವರ ಮರಣದ ನಂತರ ಅವರ ಅನುಪಸ್ಥಿತಿ ಕಾಡಲು ಆರಂಭಿಸುತ್ತವೆ. ಅವರೊಂದಿಗೆ ಕಳೆದ ಕ್ಷಣಗಳ ನೆನಪಿನ ಬುತ್ತಿ ತೆರೆದುಕೊಳ್ಳುತ್ತದೆ. ಪ್ರೀತಿ ಪಾತ್ರರನ್ನು ಕಳೆದುಕೊಂಡು ಅವರ ಕೆಲಸದ ಬಗ್ಗೆ ನಂತರ ತಿಳಿದರೆ ಅದೊಂದು ನೋವಾಗಿ ಕಾಣುವುದು ಸುಳ್ಳಲ್ಲ. ಅಂತಹದ್ದೇ ಒಂದು ಘಟನೆಯನ್ನು ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ತಂದೆಯ ಮರಣದ ನಂತರ ಅವರ ಫೋಟೋಗ್ರಫಿ ಕಲೆಯ ಬಗ್ಗೆ, ಅವರು ತೆಗೆದ ಅದ್ಭುತ ಪೋಟೊಗಳನ್ನು ನೋಡಿ ಮೂಕವಿಸ್ಮಿತರಾಗಿದ್ದಾರೆ. ಈ ಬಗ್ಗೆ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ತಂದೆ ತೀರಿಕೊಂಡ ಬಳಿಕ ಮಗಳಿಗೆ ಅವರ ಆಲ್ಬಂ ದೊರಕಿದೆ ಅದರಲ್ಲಿನ ನದಿ, ಗುಡ್ಡ, ಹಸಿರು ಪರಿಸರದ ಫೋಟೋಗಳನ್ನೂ ನೋಡಿ ದಂಗಾಗಿದ್ದಾಳೆ. ತಂದೆಯ ಅದ್ಬುತ ಫೋಟೋಗ್ರಫಿ ಕಲೆಯ ಬಗ್ಗೆ ತಿಳಿಯದೇ ಇರುವ ಮಗಳು ಅವರ ಅನುಪಸ್ಥಿತಿಯಲ್ಲಿ ಅವರ ಕ್ರಿಯೇಟಿವ್ ಫೋಟೋಗಳನ್ನು ನೋಡಿ ಮಂತ್ರಮುಗ್ಧಗೊಂಡಿದ್ದಾಳೆ. ಈ ಬಗ್ಗೆ ಆಕೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ನನ್ನ ತಂದೆ ತೀರಿ ಹೋಗಿದ್ದಾರೆ, ಇದೀಗ ಅವರ ಫಿಲ್ಮಂ ಫೋಟೋಗ್ರಫಿ ಆಲ್ಬಂ ದೊರಕಿದೆ. ಇದನ್ನು ನೋಡಿ ಶಾಕ್ ಆಗಿದ್ದೇನೆ ಎಂದಿದ್ದಾರೆ. ಡೆರ್ಯಾ ಎನ್ನುವ ಟ್ವಿಟರ್ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ. ಇವರು ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ನಿವಾಸಿಯಾಗಿದ್ದಾರೆ.
After my dad passed away I found an album with his old film photography and I’m stunned pic.twitter.com/OTQkrXiaEK
— Derya (@Deryakba) January 2, 2022
ಫೋಟೋಗಳು 6 ಸಾವಿರಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದ್ದು, 42 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಹಲವರು ತಂದೆಯಂತೆ ನಿಮ್ಮಲ್ಲೂ ಇಂತಹ ಅದ್ಭುತ ಕಲೆ ಇರಬಹುದು ಎಂದ ಕಾಮೆಂಟ್ ಮಾಡಿದ್ದಾರೆ. ಯುವತಿಗೆ ಹಲವರು ಫೋಟೊಗಳು ಕಾಪಿರೈಟ್ ಆಗುವ ಸಂಭವವಿರುತ್ತದೆ ಹೀಗಾಗಿ ವಾಟರ್ ಮಾರ್ಕ್ ಹಾಕುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ;
ಹಿಮದಿಂದ ಆವೃತವಾದ ಶ್ರೀನಗರ ರೈಲು ನಿಲ್ದಾಣ: ಫೋಟೋ ಹಂಚಿಕೊಂಡ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್