Viral Video: ತಂದೆಗೆ ಮೇಕಪ್​ ಮಾಡಿದ ಮಗಳು; ವಿಡಿಯೋ ನೋಡಿ ಸಖತ್​ ಖುಷಿಪಟ್ಟ ನೆಟ್ಟಿಗರು

ಲಿಪ್​ಸ್ಟಿಕ್​ ಹಚ್ಚಿದರೆ ನೀವು ಸುಂದರವಾಗಿ ಕಾಣುತ್ತೀರಾ ಅಪ್ಪ ಎಂದ ಮಗಳ ಮಾತು ಸದ್ಯ ವೈರಲ್​ ಆಗಿದೆ. ಈ ವಿಡಿಯೋವನ್ನು ವಿಜಯಕುಮಾರ್ ಐಪಿಎಸ್​ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಈ ವೀಡಿಯೊವನ್ನು ಮಗಳು ಅಥವಾ ಮಕ್ಕಳು ಸದಾ ಸಂತೋಷವನ್ನು ತರುತ್ತಾರೆ.

Viral Video: ತಂದೆಗೆ ಮೇಕಪ್​ ಮಾಡಿದ ಮಗಳು; ವಿಡಿಯೋ ನೋಡಿ ಸಖತ್​ ಖುಷಿಪಟ್ಟ ನೆಟ್ಟಿಗರು
ಮಗಳು, ತಂದೆ
Follow us
TV9 Web
| Updated By: preethi shettigar

Updated on: Jan 12, 2022 | 9:29 AM

ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಕಾಣಸಿಗುತ್ತವೆ. ಕೆಲವು ವಿಡಿಯೋಗಳು ಆಶ್ಚರ್ಯ ಉಂಟುಮಾಡುತ್ತದೆ. ಮತ್ತೆ ಕೆಲವು ತಮಾಷೆಯ ವಿಡಿಯೋಗಳಾಗಿರುತ್ತವೆ. ಸದ್ಯ ತಂದೆ-ಮಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್​ ಆಗಿದೆ. ತಂದೆ ಮತ್ತು ಮಗಳ ಬಾಂಧವ್ಯ ತುಂಬಾ ಸುಂದರವಾದದ್ದು. ಈ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಂದೆಯೊಂದಿಗೆ ಹೆಚ್ಚು ಪ್ರೀತಿ ವಿಶ್ವಾಸದಿಂದ ಇರುತ್ತಾರೆ. ಇದಕ್ಕೆ ಪುಷ್ಠಿ ನೀಡುವಂತಿದೆ ಈಗ ವೈರಲ್​ ಆದ ಈ ವಿಡಿಯೋ. ಪುಟ್ಟ ಮಗಳು ತನ್ನ ತಂದೆಗೆ ಮೇಕಪ್​(Makeup) ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.

ವೈರಲ್​ ಆದ ವಿಡಿಯೋದಲ್ಲಿ ಮಗಳು ತನ್ನ ತಂದೆಯೊಂದಿಗೆ ಕುಳಿತಿದ್ದು, ಬಳಿಕ ತಂದೆಗೆ ಲಿಪ್​ಸ್ಟಿಕ್​ ಹಾಕಿದ್ದಾಳೆ. ತಂದೆ ಈ ವೇಳೆ ತನ್ನ ಮಗಳೊಂದಿಗೆ ಸಂಭಾಷಣೆಗೆ ಮುಂದಾಗಿದ್ದು, ಇದೆಲ್ಲಾ ಏಕೆ ಮಗಳೇ ಎಂದು ಕೇಳಿದ್ದಾರೆ. ಅಲ್ಲದೇ ಲಿಪ್​ಸ್ಟಿಕ್​ನಲ್ಲಿ ಕೆಮಿಕಲ್​ ಇರುತ್ತದೆ ಎಂದು ಹೇಳಿದ್ದಾರೆ. ಆದರೆ ಮಗಳು ಇದಕ್ಕೆ ಬೇರೆಯೇ ಉತ್ತರಕೊಟ್ಟಿದ್ದು, ಸದ್ಯ ನೆಟ್ಟಿಗರಿಗೆ ಖುಷಿ ನೀಡಿದೆ.

ಲಿಪ್​ಸ್ಟಿಕ್​ ಹಚ್ಚಿದರೆ ನೀವು ಸುಂದರವಾಗಿ ಕಾಣುತ್ತೀರಾ ಅಪ್ಪ ಎಂದ ಮಗಳ ಮಾತು ಸದ್ಯ ವೈರಲ್​ ಆಗಿದೆ. ಈ ವಿಡಿಯೋವನ್ನು ವಿಜಯಕುಮಾರ್ ಐಪಿಎಸ್​ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಈ ವೀಡಿಯೊವನ್ನು ಮಗಳು ಅಥವಾ ಮಕ್ಕಳು ಸದಾ ಸಂತೋಷವನ್ನು ತರುತ್ತಾರೆ. ನನ್ನ ಜೊತೆ ನನ್ನ ಮಗಳು ನೀಲಾ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಸಾವಿರಾರು ಜನರು ರಿಟ್ವೀಟ್‌ ಮಾಡಿದ್ದಾರೆ. ಲಕ್ಷಾಂತರ ವಿವ್ಸ್​ ಕೂಡ ಬಂದಿದೆ. ಅಲ್ಲದೇ ಕಮೆಂಟ್​ ಮೂಲಕ ಅನೇಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮಗಳು ಮತ್ತು ತಂದೆಯ ಜೋಡಿ ತುಂಬಾ ಅದ್ಭುತವಾಗಿದೆ ಎಂದು ಕೆಲವರು ಕಮೆಂಟ್​ ಮಾಡಿದೆ, ಮತ್ತೊಬ್ಬರು ಈ ವೀಡಿಯೊ ನಿಜವಾಗಿಯೂ ಮುದ್ದಾಗಿದೆ, ಇಂತಹ ವೀಡಿಯೊಗಳು ಅಪರೂಪವಾಗಿ ಕಂಡುಬರುತ್ತವೆ ಎಂದು ಹೇಳಿದ್ದಾರೆ. ಇನ್ನೊಬ್ಬರು ನನ್ನ ಮಗಳು ಪ್ರತಿದಿನ ನನ್ನೊಂದಿಗೆ ಇದನ್ನು ಮಾಡುತ್ತಾಳೆ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Viral Video: ತನ್ನೊಂದಿಗಿದ್ದ ಶ್ವಾನಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ : ವಿಡಿಯೋ ವೈರಲ್​

ಬರ್ತಡೇಗೆ ಮೊಬೈಲ್​ ಗಿಪ್ಟ್​ ನೀಡಿದ ಮಗ: ಖುಷಿಯಿಂದ ಕಣ್ಣೀರಾದ ತಾಯಿಯ ವಿಡಿಯೋ ವೈರಲ್​