ನೀರಿನ ಟ್ಯಾಂಕ್ನಲ್ಲಿ ಕೋಟಿ ರೂ. ಅಡಗಿಸಿಟ್ಟ ಉದ್ಯಮಿ: ಐಟಿ ದಾಳಿಯಲ್ಲಿ ಹೊರತೆಗೆದ ನೋಟುಗಳನ್ನು ಹೇರ್ ಡ್ರೈಯರ್ನಲ್ಲಿ ಒಣಗಿಸಿದ ಅಧಿಕಾರಿಗಳು
ಉದ್ಯಮಿ ಶಂಕರ್ ರೈ ಒಂದು ಕೋಟಿಯಷ್ಟು ಹಣವನ್ನು ಅಂಡರ್ ಗ್ರೌಂಡ್ನಲ್ಲಿರುವ ನೀರಿನ ಟ್ಯಾಂಕ್ನಲ್ಲಿ ಬಚ್ಚಿಟ್ಟಿದ್ದರು. ಮನೆಯನ್ನು ಜಾಲಾಡಿದ ಅಧಿಕಾರಿಗಳಿಗೆ ಟ್ಯಾಂಕ್ನಲ್ಲಿ ಬಚ್ಚಿಟ್ಟ ಹಣವನ್ನೂ ಹೊರತೆಗೆದಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಭೂಪಾಲ್ನ ಮದ್ಯ ಉದ್ಯಮಿಯೊಬ್ಬರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 8 ಕೋಟಿ ರೂ.ನಷ್ಟು ಹಣ, 3 ಕೆಜಿ ಬಂಗಾರ ದೊರಕಿದೆ. ಉದ್ಯಮಿ ಶಂಕರ್ ರೈ ಮತ್ತು ಅವರ ಕುಟುಂಬದವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅಚ್ಚರಿಯ ಸಂಗತಿ ಎಂದರೆ ಶಂಕರ್ ರೈ ಒಂದು ಕೋಟಿಯಷ್ಟು ಹಣವನ್ನು ಅಂಡರ್ ಗ್ರೌಂಡ್ನಲ್ಲಿರುವ ನೀರಿನ ಟ್ಯಾಂಕ್ನಲ್ಲಿ ಬಚ್ಚಿಟ್ಟಿದ್ದರು. ಮನೆಯನ್ನು ಜಾಲಾಡಿದ ಅಧಿಕಾರಿಗಳು ಟ್ಯಾಂಕ್ನಲ್ಲಿ ಬಚ್ಚಿಟ್ಟ ಹಣವನ್ನೂ ಹೊರತೆಗೆದಿದ್ದಾರೆ. ಆದರೆ ನೋಟುಗಳು ನೀರಿನಲ್ಲಿ ಒದ್ದೆಯಾಗಿದ್ದವು. ಹೀಗಾಗಿ ಅಧಿಕಾರಿಗಳು ಒಂದು ಕೋಟಿರೂ ಮೌಲ್ಯದ ನೋಟುಗಳನ್ನು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟುಗೆ ಮೂಲಕ ಒಣಗಿಸಿದ್ದಾರೆ.
ಅಧಿಕಾರಿಗಳು ಹೇರ್ ಡ್ರೈಯರ್ ಮತ್ತು ಇಸ್ತ್ರಿಪೆಟ್ಟಿಗೆ ಉಪಯೋಗಿಸಿ ನೋಟುಗಳನ್ನು ಒಣಗಿಸುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ದಾಳಿಯಲ್ಲಿ ಸಿಕ್ಕ ಆಸ್ತಿಯ ಬಗ್ಗೆ ಮಾಹಿತಿ ನೀಡಿದ ಜಬಲ್ಪುರದ ಆದಾಯ ತೆರಿಗೆ ಇಲಾಖೆಯ ಕಮಿಷನರ್ ತನಿಖೆಯ ವೇಳೆ 8 ಕೋಟಿ ಮೌಲ್ಯದ ಹಣ, 3 ಕೆಜಿ ಬಂಗಾರ ದೊರಕಿದೆ. ಅದರಲ್ಲಿ ಒಂದು ಕೋಟೊ ಹಣವನ್ನು ನೀರಿನ ಟ್ಯಾಂಕ್ನಿಂದ ಹೊರತೆಗೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಒಟ್ಟು 39 ಗಂಟೆಗಳ ನಿರಂತರ ವಿಚಾರಣೆ ನಡೆಸಿದ ಅಧಿಕಾರಿಗಳ ತಂಡ ಭೌತಿಕ ವಿಚಾರಣೆ ಮುಗಿದಿದೆ. ಇನ್ನು ದಾಖಲೆಗಳನ್ನು ಇಟ್ಟುಕೊಂಡು ತನಿಖೆ ಮುಂದುವರೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
Cash was stashed in an underground tank, hair dryers and clothes iron were used by IT dept sleuths to dry up the cash @ndtv @ndtvindia pic.twitter.com/gKq1lXS3km
— Anurag Dwary (@Anurag_Dwary) January 8, 2022
ಶಂಕರ್ ರೈ ಕೇವಲ ಮದ್ಯ ಉದ್ಯಮಿ ಮಾತ್ರವಲ್ಲದೆ ಬಡ್ಡಿ ವ್ಯವಹಾರವನ್ನೂ ಮಾಡುತ್ತಿದ್ದರು ಎಂದು ವರದಿಯಾಗಿದೆ. ಸದ್ಯ ವೈರಲ್ ಆದ ವಿಡಿಯೋ 8 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಹಲವು ರೀಟ್ವೀಟ್ ಆಗಿದೆ.
ಇದನ್ನೂ ಓದಿ:
ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ವೈದ್ಯೆಯರು: ವೈರಲ್ ಆದ ಎಂಗೇಜ್ಮೆಂಟ್ ಫೋಟೋಗಳು
Published On - 11:16 am, Tue, 11 January 22