AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನ: ತಾಲಿಬಾನಿಗಳಿಂದ ಪಾರಾಗಿ 4 ತಿಂಗಳ ಬಳಿಕ ಹೆತ್ತವರನ್ನು ಸೇರಿದ ಮಗು

ವಿಮಾನ ನಿಲ್ದಾಣದಲ್ಲಿದ್ದ ಮಗುವನ್ನು ಕಾಬೂಲ್​ ನಿರಾಶ್ರಿತರ ಸಂಘಟನೆಯ ಸದಸ್ಯ ಹಮೀದ್​ ಸಫಿ ಎನ್ನುವವರು ಕರೆದೊಯ್ದು  ರಕ್ಷಣೆ ಮಾಡಿದ್ದರು. ಕಳೆದ ನವೆಂಬರ್​ನಲ್ಲಿ ಮಗುವಿನ ಬಗ್ಗೆ ತಂದೆ ತಾಯಿಗಳು ಮಾಹಿತಿ ಪಡೆದಿದ್ದರು.

ಅಫ್ಘಾನಿಸ್ತಾನ: ತಾಲಿಬಾನಿಗಳಿಂದ ಪಾರಾಗಿ 4 ತಿಂಗಳ ಬಳಿಕ ಹೆತ್ತವರನ್ನು ಸೇರಿದ ಮಗು
ಹೆತ್ತವರನ್ನು ಸೇರಿದ ಮಗು
TV9 Web
| Edited By: |

Updated on:Jan 11, 2022 | 9:52 AM

Share

2021ರ ಅಗಸ್ಟ್​ನಲ್ಲಿ ಅಫಘಾನಿಸ್ತಾನವನ್ನು ತಾಲಿಬಾನ್​ ಉಗ್ರರು ವಶಪಡಿಸಿಕೊಂಡ ಬಳಿಕ ಅಲ್ಲಿಯ ಜನರ ಬದುಕು ನರಕ ಸದೃಶವಾಗಿದೆ. ಅಫ್ಘಾನ್​ ಅನ್ನು ತಾಲಿಬಾನ್​ ಕೈವಶ ಮಾಡಿಕೊಳ್ಳುತ್ತಿದ್ದಂತೆ ಅಮೆರಿಕ ಕೂಡ ತನ್ನ ಸೇನೆಯನ್ನು ವಾಪಸ್​ ಕರೆಸಿಕೊಂಡಿತ್ತು. ಈ ವೇಳೆ ಅಫ್ಘಾನ್​ ಜನತೆ ತಾಲಿಬಾನಿಗಳ ಕೈಗೆ ಸಿಲುಕಿದರೆ ತಮ್ಮ ಮಕ್ಕಳು ಜೀವಂತವಾಗಿರುವುದಿಲ್ಲ ಎನ್ನುವ ಭಯದಲ್ಲಿ ಹೆತ್ತ ಮಕ್ಕಳನ್ನು ಸೈನಿಕರಿಗೆ ನೀಡಿದ್ದರು. ಇದೀಗ ಒಂದು ಮಗು ಅದರ ಪೋಷಕರನ್ನು ಮತ್ತೆ ಸೇರಿಕೊಂಡಿದೆ ಎಂದು ವರದಿ ತಿಳಿಸಿದೆ. 

ಅಗಸ್ಟ್​ 19ರಂದು  ದೇಶ ತೊರೆದು ಹೋಗಲು ಸಾವಿರಾರು ಮಂದಿ ಅಫ್ಘಾನ್​ ನಿವಾಸಿಗಳು ವಿಮಾನ ನಿಲ್ದಾಣದಲ್ಲಿ ಸೇರಿದ್ದರು ಈ ವೇಳೆ 2 ತಿಂಗಳ ಮಗುವನ್ನು ಯುಎಸ್​ ಸೈನಿಕರಿಗೆ  ಹಸ್ತಾಂತರಿಸಿದ್ದರು. ಬಳಿಕ ವಿಮಾನ ಹತ್ತುವ ವೇಳೆ ಮಗು ಎಲ್ಲಿದೆ ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಮಗು ಸಿಗದ ಕಾರಣ  ಕುಟುಂಬ ಉಳಿದ ನಾಲ್ಕು ಮಕ್ಕಳೊಂದಿಗೆ ಯುಎಸ್​ಗೆ ಸ್ಥಳಾಂತರಗೊಂಡಿದ್ದರು. ವಿಮಾನ ನಿಲ್ದಾಣದಲ್ಲಿದ್ದ ಮಗುವನ್ನು ಕಾಬೂಲ್​  ಟ್ಯಾಕ್ಸಿ ಡ್ರೈವರ್​ ಹಮೀದ್​ ಸಫಿ ಎನ್ನುವವರು ಕರೆದೊಯ್ದು  ರಕ್ಷಣೆ ಮಾಡಿದ್ದರು. ಕಳೆದ ನವೆಂಬರ್​ನಲ್ಲಿ ಮಗುವಿನ ಬಗ್ಗೆ ತಂದೆ ತಾಯಿಗಳು ಮಾಹಿತಿ ಪಡೆದಿದ್ದರು. ಇದೀಗ 4 ತಿಂಗಳ ಬಳಿಕ ತಂದೆ ತಾಯಿಗಳಿಂದ ಬೇರ್ಪಟ್ಟ ಮಗು ಮತ್ತೆ ಹೆತ್ತವರ ಮಡಿಲು ಸೇರಿದೆ. ಸೊಹಾಲ್​ ಅಹಮದಿ ಪೋಷಕರನ್ನು ಮತ್ತೆ ಸೇರಿದ ಮಗು.

View this post on Instagram

A post shared by Reuters (@reuters)

ಮಗುವನ್ನು ಮತ್ತೆ ಹೆತ್ತವರು ಪಡೆದುಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಹೃದಯಸ್ಪರ್ಶಿ ಫೊಟೋವನ್ನು ನೋಡಿ ಟ್ವಿಟರ್​ ಬಳಕೆದಾರರು  ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವುದು ನಿಜವಾದ ಸಂತಸ ಎಂದಿದ್ದಾರೆ.

ಕಳೆದ ಅಗಸ್ಟ್​ನಲ್ಲಿ ತಾಲಿಬಾನ್​ ಉಗ್ರರು  ಅಫ್ಘಾನಿಸ್ತಾವನ್ನು ಬಲವಂತದಿಂದ ವಶಪಡಿಸಿಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ದೇಶದಲ್ಲಿ ಜನರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಅಫ್ಘಾನ್​ ಅಧ್ಯಕ್ಷರಿಂದ ಹಿಡಿದು ಸಾವಿರಾರು ನಿವಾಸಿಗಳು ದೇಶದಿಂದ ಪಲಾಯನ ಮಾಡಿ ಜೀವ ಉಳಿಸಿಕೊಂಡಿದ್ದಾರೆ.

Published On - 9:51 am, Tue, 11 January 22

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್