ಜೂನಿಯರ್ ಮಿ.ಬೀನ್ ಬಗ್ಗೆ ಕೇಳಿದ್ದೀರಾ? ಮುಂಬೈ ಯುವಕನ ಮಿ.ಬೀನ್ ಜರ್ನಿ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ
ಥೇಟ್ ಮಿ. ಬೀನ್ರಂತೆ ನಟಿಸುವ ಮೂಲಕ ಭಾರತೀಯರನ್ನು ನಗಿಸುವ ಮಿ.ಬೀನ್ ಇರುವುದು ಮುಂಬೈ ಮಹಾನಗರದಲ್ಲಿ ಈತನ ಹೆಸರು ಜತಿನ್ ತನ್ವಿ ಅಕಾ ಎಂದಾಗಿದೆ.
ಮಿಸ್ಟರ್ ಬೀನ್ ಯಾರಿಗೆ ಗೊತ್ತಿಲ್ಲ ಹೇಳಿ. ಜಗತ್ತಿನಾದ್ಯಂತ ಪರಿಚಿತ ವ್ಯಕ್ತಿ, ಚಾರ್ಲಿ ಚಾಪ್ಲಿನ್ ಬಳಿಕ ಒಂದೇ ಒಂದು ಮಾತನಾಡದೇ ತನ್ನ ವಿಭಿನ್ನ ವ್ಯಕ್ತಿತ್ವದಿಂದ ಇಡೀ ಜಗತ್ತನ್ನು ನಗಿಸಿದ ಕಲಾವಿದ. ರೋವನ್ ಸೆಬಾಸ್ಟಿಯನ್ ಅಟ್ಕಿನ್ಸನ್ ಹೆಸರಿನ ಇಂಗ್ಲೀಷ್ ನಟ ತನ್ನ ಹಾವ, ಭಾವದಿಂದ ಇಡೀ ಜಗತ್ತನ್ನು ನಗೆಗಡಲಲ್ಲಿ ತೆಲಿಸಿದ್ದಾರೆ. 90ರ ದಶಕದವರಿಗಂತೂ ಮಿ. ಬೀನ್ ಶೋ ಎಂದರೆ ನೆಚ್ಚಿನ ಟಿವಿ ಶೋ ಎನಿಸಿಕೊಂಡಿತ್ತು. ನಿಜವಾದ ಬಿ.ಬೀನ್ ಇಂಗ್ಲೆಂಡ್ ಮೂಲದವರು. ಅದರೆ ಭಾರತದಲ್ಲೂ ಒಬ್ಬ ಮಿ. ಬೀನ್ ಇದ್ದಾನೆ ಎಂದರೆ ನೀವು ನಂಬಲೇಬೆಕು. ಹೌದು ಥೇಟ್ ಮಿ. ಬೀನ್ರಂತೆ ನಟಿಸುವ ಮೂಲಕ ಭಾರತೀಯರನ್ನು ನಗಿಸುವ ಮಿ.ಬೀನ್ ಇರುವುದು ಮುಂಬೈ ಮಹಾನಗರದಲ್ಲಿ ಇವರ ಹೆಸರು ಜತಿನ್ ತನ್ವಿ ಅಕಾ ಎಂದಾಗಿದೆ. ಜೂನಿಯರ್ ಮಿ. ಬೀನ್ ಎಂದೇ ಕರೆಸಿಕೊಳ್ಳುವ ಇವರಿಗೆ ಕೇವಲ 22 ವರ್ಷ ವಯಸ್ಸು. ಜತಿನ್ ತನ್ವಿ ಅಕಾ ತಾವು ಮಿ. ಬೀನ್ ಎಂದು ಖ್ಯಾತಿಗಳಿಸಿದ್ದು ಹೇಗೆ. ಮೊದಲು ವಿರೋಧಿಸಿದ ಕುಟುಂಬ ನಂತರ ಒಪ್ಪಿಕೊಂಡಿದ್ದಾದರೂ ಯಾವ ರೀತಿ ಎನ್ನುವ ಕುರಿತು ಹಿಂದೂಸ್ತಾನ್ ಟೈಮ್ಸ್ ಸುದ್ದಿ ಸಂಸ್ಥೆ ಜತೆ ಮಾತನಾಡಿದ್ದಾರೆ. ಜೂನಿಯರ್ ಮಿ. ಬೀನ್ ಜೀವನದ ಕಥೆ ಹೀಗಿದೆ ನೋಡಿ.
‘2020ರಲ್ಲಿ ಮೊದಲ ಬಾರಿ ಲಾಕ್ಡೌನ್ ಆದ ವೇಳೆ ಮನೆಯಲ್ಲಿ ಕುಳಿತು ದಿನದೂಡುತ್ತಿದ್ದೆ. ಒಂದು ದಿನ ಮಿ. ಬೀನ್ರಂತೆ ನಟಿಸಿ ವಿಡಿಯೋ ಮಾಡಿ ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ವಿಡಿಯೋ 600 ಸಾವಿರ ವೀಕ್ಷಣೆ ಪಡೆದಿತ್ತು ಎಂದು ಮಾತು ಆರಂಭಿಸಿದ ಅವರು, ನನ್ನ ವಿಡಿಯೋ ಅಷ್ಟೊಂದು ಜನ ವೀಕ್ಷಿಸಿದ್ದಾರೆ ಎನ್ನುವುದನ್ನು ನನಗೆ ನಂಬಲಾಗಲಿಲ್ಲ ಎಂದಿದ್ದಾರೆ. ನಂತರ ಎರಡನೇ ವಿಡಿಯೋವನ್ನು ಹಂಚಿಕೊಂಡಾಗ 56 ಮಿಲಿಯನ್ ವೀವ್ಸ್ ಪಡೆದಿತ್ತು. ನಿಜಕ್ಕೂ ನಂಬಲಾಗಲಿಲ್ಲ ಏನಾಗುತ್ತಿದೆ ಎಂದು. ನನಗೆ ಕಲ್ಪನೆಯೂ ಇರಲಿಲ್ಲ ಸಾಮಾಜಿಕ ಜಾಲತಾಣಕ್ಕೆ ಇಷ್ಟೊಂದು ಶಕ್ತಿ ಇದೆ ಎಂದು. ಆ ಬಳಿಕ ಪ್ರತಿದಿವೂ ಒಂದೊಂದು ವಿಡಿಯೋ ಮಾಡಿ ಹಂಚಿಕೊಳ್ಳಲು ನಿರ್ಧರಿಸಿದ್ದೆ’ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ತಮ್ಮ ಸ್ಕೂಲ್ ಡೇಸ್ ಅನ್ನು ನೆನಪಿಸಿಕೊಂಡಿದ್ದಾರೆ. ಚಿಕ್ಕವನಿರುವಾಗ ನನ್ನ ಸ್ನೇಹಿತರು ನನ್ನನ್ನು ನೋಡಿ ಮಿ. ಬೀನ್ ಎಂದು ರೇಗಿಸುತ್ತಿದ್ದರು. ಆಗ ನಾನು ಕೂಡ ಮಿ. ಬೀನ್ ಶೊಅನ್ನು ನೋಡಿ ಆಕರ್ಷಿತನಾಗಿದ್ದೆ. ಒಂದು ಬಾರಿ ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಅನ್ನು ಏರ್ಪಡಿಸಿದ್ದರು ಆಗ ನಾನು ಮಿ. ಬೀನ್ ಪಾತ್ರವನ್ನೇ ಮಾಡಿದ್ದೆ. ಪ್ರಶಸ್ತಿಯೇನೂ ಬಂದಿರಲಿಲ್ಲ ಆದರೆ ನನ್ನ ಆ್ಯಕ್ಟಿಂಗ್ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ಆ ಮೊದಲು ಸ್ಕೂಲಿನಲ್ಲಿ ನನಗೆ ಹೆಚ್ಚು ಜನ ಸ್ನೇಹಿತರಿರಲಿಲ್ಲ. ಆ ಪಾತ್ರ ಮಾಡಿದ ಬಳಿಕ ಎಲ್ಲರೂ ಬಂದು ಮಾತನಾಡಿಸುತ್ತಿದ್ದರು. ನಿಜ ಹೇಳಬೇಕೆಂದರೆ ಮಿ. ಬೀನ್ ನನ್ನ ಜೀವನವನ್ನೇ ಬದಲಾಯಿಸಿದ್ದರು. ಆದರೆ ನನ್ನ ಕುಟುಂಬ ಅದನ್ನು ವಿರೋಧಿಸಿತ್ತು ಆರ್ಕಿಟೆಕ್ಚರ್ ಓದುತ್ತಿದ್ದ ನಾನು, ಓದು ನಿಲ್ಲಿಸಿದ್ದೆ. ಆಗ ಅಮ್ಮ ಅಸಮಧಾನ ತೋರಿಸಿದ್ದರು. ಏನು ಮಾಡುತ್ತೀಯಾ ಎಂದು ರೇಗಿದ್ದರು. ದಿನಕಳೆದಂತೆ ನನ್ನ ವಿಡಿಯೋಗಳು ಲಕ್ಷಾಂತರ ಜನರನ್ನು ತಲುಪುತ್ತಿತ್ತು. ಒಂದು ದಿನ ನಾನು ಕುಟುಂಬದೊಂದಿಗೆ ಹೋಗುವಾಗ ಒಂದಷ್ಟು ಜನ ಬಂದು ಸೆಲ್ಫಿ ಕೇಳಿದ್ದರು. ಮಿ.ಬೀನ್ರಂತೆ ನಟಿಸಲು, ಮಾತನಾಡಲು ಕೆಳಿಕೊಂಡರು. ಇದನ್ನು ನೋಡಿ ನನ್ನ ತಂದೆ ತಾಯಿ ಕೂಡ ಸಂತಸಗೊಂಡಿದ್ದರು ಎಂದು ತಮ್ಮ ಜೀವನದ ಕತೆಯನ್ನು ಹಂಚಿಕೊಂಡಿದ್ದಾರೆ.
View this post on Instagram
ಜತಿನ್ ತನ್ವಿ ಅಕಾ ಅವರಿಗೆ ಮಿ.ಬೀನ್ರನ್ನು ಭೇಟಿಯಾಗುವ ಆಸೆಯಿದೆಯಂತೆ ಜತೆಗೆ ಮೀ.ಬೀನ್ ಅವರ ಸಿರೀಸ್ ಅನ್ನು ಭಾರತದಲ್ಲಿ ತಯಾರಿಸುವ ಆಸೆ ಹೊಂದಿದ್ದು, ಅದರಲ್ಲಿ ಆ್ಯಕ್ಟ್ ಮಾಡುವ ಬಯಕೆ ಹೊಂದಿದ್ದಾರೆ.
ಇದನ್ನೂ ಓದಿ:
‘ಅವರ ಜತೆ ಸಾಕಷ್ಟು ನೆನಪುಗಳಿವೆ’; ಪುನೀತ್, ‘ಒನ್ ಕಟ್ ಟೂ ಕಟ್’ ಸಿನಿಮಾ ಬಗ್ಗೆ ನಟ ದಾನಿಶ್ ಸೇಠ್ ಮಾತು
Published On - 3:28 pm, Sun, 30 January 22