‘ಅವರ​ ಜತೆ ಸಾಕಷ್ಟು ನೆನಪುಗಳಿವೆ’; ಪುನೀತ್, ‘ಒನ್ ಕಟ್​ ಟೂ ಕಟ್​’ ಸಿನಿಮಾ ಬಗ್ಗೆ ನಟ ದಾನಿಶ್​ ಸೇಠ್​ ಮಾತು

‘ಅವರ​ ಜತೆ ಸಾಕಷ್ಟು ನೆನಪುಗಳಿವೆ’; ಪುನೀತ್, ‘ಒನ್ ಕಟ್​ ಟೂ ಕಟ್​’ ಸಿನಿಮಾ ಬಗ್ಗೆ ನಟ ದಾನಿಶ್​ ಸೇಠ್​ ಮಾತು
‘ಒನ್ ಕಟ್​ ಟೂ ಕಟ್​’ ಸಿನಿಮಾದಲ್ಲಿ ನಟ ದಾನಿಶ್​ ಸೇಠ್​

‘ಒನ್​ ಕಟ್​ ಟೂ ಕಟ್​’ ಚಿತ್ರದಲ್ಲಿ ಸರ್ಕಾರಿ ಶಾಲೆ ಉಳಿಸಿ ಎಂಬ ಒಂದು ಸಂದೇಶ ಇದೆ. ಈ ಚಿತ್ರ ಫೆಬ್ರವರಿ 3ರಂದು ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆಗುತ್ತಿದೆ. ಸಿನಿಮಾ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್​ ಜತೆ ದಾನಿಶ್​ ಮಾತನಾಡಿದ್ದಾರೆ.

Rajesh Duggumane

|

Jan 30, 2022 | 11:59 AM

ನಟ ದಾನಿಶ್​ ಸೇಠ್ (Danish Sait)​ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಇದೆ. ಅವರು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಭಿನ್ನವಾಗಿರುತ್ತದೆ ಎಂಬುದಕ್ಕೆ ಅವರು ಇಲ್ಲಿಯವರೆಗೆ ಮಾಡಿರುವ ಕೆಲಸಗಳೇ ಸಾಕ್ಷಿ. ಈಗ ಅವರು ‘ಒನ್​ ಕಟ್​ ಟೂ ಕಟ್​’ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ನಿರ್ಮಾಣ ಆಗಿದ್ದು ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ‘ಪಿಆರ್​ಕೆ ಪ್ರೊಡಕ್ಷನ್​’ (PRK Production) ಬ್ಯಾನರ್​ ಅಡಿಯಲ್ಲಿ. ಈ ಬ್ಯಾನರ್​ ಅಡಿಯಲ್ಲಿ ದಾನಿಶ್​ ನಟಿಸುತ್ತಿರುವ ಎರಡನೇ ಸಿನಿಮಾ ಇದು ಅನ್ನೋದು ವಿಶೇಷ. ಈ ಮೊದಲು ಅವರು ನಟಿಸಿದ್ದ ‘ಫ್ರೆಂಚ್​ ಬಿರಿಯಾನಿ’ ಸಿನಿಮಾ ಪಿಆರ್​ಕೆ ಅಡಿಯಲ್ಲಿ ಸಿದ್ಧವಾಗಿತ್ತು. ದಾನಿಶ್​ ಸೃಷ್ಟಿಸಿರುವ ಗೋಪಿ ಪಾತ್ರ ಆಧರಿಸಿ ‘ಒನ್​ ಕಟ್​ ಟೂ ಕಟ್​’ ಸಿದ್ಧವಾಗಿದೆ. ಈ ಚಿತ್ರದಲ್ಲಿ ಸರ್ಕಾರಿ ಶಾಲೆ ಉಳಿಸಿ ಎಂಬ ಒಂದು ಸಂದೇಶ ಕೂಡ ಇದೆ. ಈ ಚಿತ್ರ ಫೆಬ್ರವರಿ 3ರಂದು ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆಗುತ್ತಿದೆ. ಸಿನಿಮಾ ಬಗ್ಗೆ  ಟಿವಿ9 ಕನ್ನಡ ಡಿಜಿಟಲ್​ ಜತೆ ದಾನಿಶ್​ ಮಾತನಾಡಿದ್ದಾರೆ.

‘ಪಿಆರ್​ಕೆ’ ಬ್ಯಾನರ್​ ಅಡಿಯಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡಿದ್ದೀರಿ, ಹೇಗಿತ್ತು ಅನುಭವ?

10 ವರ್ಷದ ಮೊದಲು ನಿಮ್ಮದು ಒಂದು ಸಿನಿಮಾ ಬರುತ್ತದೆ ಎಂದು ಯಾರಾದರೂ ಹೇಳಿದ್ದರೆ ನಾನೇ ನಂಬುತ್ತಿರಲಿಲ್ಲ. ಆದರೆ, ಈಗ ಮೂರು ಸಿನಿಮಾ, ಒಂದು ವೆಬ್​ ಸೀರಿಸ್​ನಲ್ಲಿ ನಟಿಸಿದ್ದೇನೆ. ಪಿಆರ್​ಕೆ ಬ್ಯಾನರ್​ ಅಡಿಯಲ್ಲಿ ನಟಿಸಿದ ಎರಡನೇ ಸಿನಿಮಾ. ಟ್ಯಾಲೆಂಟ್​ ಇದ್ದರೆ ಸಾಧನೆ ಮಾಡೋಕೆ ಆಗಲ್ಲ. ಅದನ್ನು ಗುರುತಿಸುವವರೂ ಇರಬೇಕು. ಪಿಆರ್​ಕೆ ಆ ಕೆಲಸವನ್ನು ಮಾಡುತ್ತಿದೆ. ಆ ಬಗ್ಗೆ ಖುಷಿ ಇದೆ.

ಪುನೀತ್​ ರಾಜ್​ಕುಮಾರ್​ ಈ ಸಿನಿಮಾ ನೋಡಿದ್ರಾ?

ಹೌದು, ಪುನೀತ್​​ ಅವರು ‘ಒನ್​ ಕಟ್​ ಟೂ ಕಟ್​’ ಚಿತ್ರವನ್ನು ನೋಡಿದ್ದರು. ಅವರಿಗೆ ಈ ಚಿತ್ರ ತುಂಬಾನೇ ಇಷ್ಟ ಆಗಿತ್ತು. ಅವರು ಸಾಕಷ್ಟು ನಕ್ಕಿದ್ದರು. ಅವರು ಪ್ರೊಡಕ್ಷನ್​ ವಿಚಾರದಲ್ಲಿ ತುಂಬಾನೇ ಇನ್ವಾಲ್​ ಆಗುತ್ತಿದ್ದರು. ಏನಾಗುತ್ತಿದೆ ಎನ್ನುವ ಬಗ್ಗೆ ನಿತ್ಯವೂ ಅಪ್​ಡೇಟ್​ ಕೇಳುತ್ತಿದ್ದರು. ಶೂಟಿಂಗ್​ ಆದ ಬಳಿಕ ಅವರು ನಿತ್ಯ ದೃಶ್ಯಗಳನ್ನು ನೋಡುತ್ತಿದ್ದರು. ನನ್ನ ನಟನೆಯನ್ನು ಅವರು ಮೆಚ್ಚಿ ಹೊಗಳಿದ್ದರು. ಇದಕ್ಕಿಂತ ಹೆಚ್ಚಿನದ್ದು ಏನನ್ನು ಕೇಳಲು ಸಾಧ್ಯ?

ನಿಮ್ಮ ಕಾಮಿಡಿಗಳು ಪುನೀತ್​ಗೆ ಇಷ್ಟ ಆಗುತ್ತಿತ್ತು, ಆ ಬಗ್ಗೆ ಏನು ಹೇಳ್ತಾ ಇದ್ರು?

ಪುನೀತ್​ ಅವರು ನನ್ನ ಆ್ಯಕ್ಟಿಂಗ್​ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದರು, ಹೊಗಳುತ್ತಿದ್ದರು. ಅವರಿಗೆ ನನ್ನ ನಟನೆ ಇಷ್ಟ ಆಗಿದ್ದರಿಂದ ಅವರ ಬ್ಯಾನರ್​ ಅಡಿಯಲ್ಲಿ ಎರಡನೇ ಸಿನಿಮಾ ಬರುತ್ತಿದೆ. ಅವರು ನಿಜಕ್ಕೂ ದೊಡ್ಡ ಮನಸ್ಸು ಹೊಂದಿದ್ದರು. ಎಲ್ಲರಿಗೂ ಸಾಕಷ್ಟು ಬೆಂಬಲ ನೀಡುತ್ತಿದ್ದರು. ಅವರ ಜತೆ ಸಾಕಷ್ಟು ಮೆಮೋರಿ ಇದೆ. ವೈಯಕ್ತಿಕವಾಗಿಯೂ ನನಗೆ ಅವರು ತುಂಬಾನೇ ಹತ್ತಿರವಾಗಿದ್ದರು. ಪುನೀತ್​ ನನಗೆ ಗೆಳೆಯರಾಗಿ, ಮೆಂಟರ್​ ಆಗಿ ಇದ್ದರು.

ಮೊದಲು ನೋಗರಾಜ್​, ಈಗ ಗೋಪಿ ಪಾತ್ರ; ಮುಂದೆ ಯಾವ ಕ್ಯಾರೆಕ್ಟರ್ ಸಿನಿಮಾ ಆಗಬಹುದು?

ನಾನು ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್​ ಆಗಿರುತ್ತೇನೆ. ನನ್ನ ತಲೆಯಲ್ಲಿ ಹೊಳೆದ ಕ್ಯಾರೆಕ್ಟರ್​ಗಳಿಗೆ ಜೀವ ತುಂಬಿ ಜನರ ಎದುರು ಇಡುತ್ತೇನೆ. ಅವುಗಳನ್ನು ಫೈನ್​ ಟ್ಯೂನ್​ ಮಾಡಿದ ಬಳಿಕವೇ ನನ್ನ ಪಾತ್ರಗಳು ಸಿನಿಮಾ ಆಗೋದು. ಸಿನಿಮಾ ಇಂಡಸ್ಟ್ರಿ ದೊಡ್ಡದು. ಇಲ್ಲಿ ಒಂದು ಸಣ್ಣ ಜಾಗ ಮಾಡಿಕೊಳ್ಳಬೇಕು ಎಂದರೆ ನಮ್ಮ ತನವನ್ನು ನಾವು ತೋರಿಸಬೇಕು. ಆ ಪ್ರಯತ್ನವನ್ನು ನಾನು ಮಾಡಿದ್ದೇನೆ.  ಸದ್ಯಕ್ಕೆ ನಿರ್ದೇಶನದ ಆಲೋಚನೆ ಇಲ್ಲ. 10 ವರ್ಷದ ಬಳಿಕ ಆ ಬಗ್ಗೆ ಯೋಚಿಸುತ್ತೇನೆ.

‘ಒನ್​ ಕಟ್​ ಟೂ ಕಟ್​’ ಸಿನಿಮಾ ಬಗ್ಗೆ ಹೇಳೋದಾದ್ರೆ..

ಈ ಚಿತ್ರದಲ್ಲಿ ನಾನು ರೊಮ್ಯಾನ್ಸ್​ ಮಾಡಿದ್ದೇನೆ. ನಾನು ರೊಮ್ಯಾಂಟಿಕ್​ ಅಲ್ಲ ಎಂದು ನನ್ನ ಹೆಂಡತಿ ಕೂಡ ಅಂದುಕೊಂಡಿದ್ದಾರೆ. ನಾನು ರೇಡಿಯೋ ಜಾಕಿ ಆಗಿದ್ದಾಗ ಸಂಯುಕ್ತಾ ಹೊರನಾಡ್ ಪರಿಚಯ ಆಗಿದ್ದರು. ಅವರ ಜತೆ ನಟಿಸಿದ ಖುಷಿ ಇದೆ. ಪ್ರಕಾಶ್​ ಬೆಳವಾಡಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಒಟ್ಟಾರೆ ಅನುಭವ ಚೆನ್ನಾಗಿತ್ತು. ಸಿನಿಮಾ ಯಶಸ್ಸು ಕಾಣಲಿದೆ ಎನ್ನುವ ನಂಬಿಕೆ ಇದೆ.

danish sait

ದಾನಿಶ್​-ಸಂಯುಕ್ತಾ

ಇದನ್ನೂ ಓದಿ: ನಟ ದಾನಿಶ್​ ಸೇಠ್​ಗೆ ಅಭಿನಂದನೆ ತಿಳಿಸಿದ ಕ್ರಿಕೆಟರ್​​ ಕೆ.ಎಲ್​. ರಾಹುಲ್​; ಕಾರಣ ಏನು?

ಮದುವೆ ಆಗ್ತೀನಿ ಎಂದಾಗ ದಾನಿಶ್​ಗೆ ಪುನೀತ್​ ಕಡೆಯಿಂದ ಸಿಕ್ಕಿತ್ತು ವಿಶೇಷ ಟಿಪ್ಸ್

Follow us on

Related Stories

Most Read Stories

Click on your DTH Provider to Add TV9 Kannada