AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾಷನ್​ ಶೋ ವೇಳೆ ಪ್ರೇಕ್ಷಕನಿಗೆ ಕೋಟ್​ನಿಂದ ಹೊಡೆದ ರೂಪದರ್ಶಿ; ವಿಡಿಯೋ ವೈರಲ್​

ಇಲ್ಲೊಂದು ರೂಪದರ್ಶಿ ಸ್ಟೇಜ್​ ಮೇಲೆ ನಡೆಯುವಾಗ ತನ್ನ ಕೋಟ್​ನಿಂದ ನೆರೆದಿದ್ದ ವ್ಯಕ್ತಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಫ್ಯಾಷನ್​ ಶೋ ವೇಳೆ ಪ್ರೇಕ್ಷಕನಿಗೆ ಕೋಟ್​ನಿಂದ ಹೊಡೆದ ರೂಪದರ್ಶಿ; ವಿಡಿಯೋ ವೈರಲ್​
ರೂಪದರ್ಶಿ
TV9 Web
| Edited By: |

Updated on:Feb 01, 2022 | 9:54 AM

Share

ರೂಪದರ್ಶಿಗಳು (Model) ಸ್ಟೇಜ್​ ಮೇಲೆ ನಡೆದುಕೊಂಡು ಹೋಗುವಾಗ ನೆರೆದವರ ಗಮನ ಅವರ ಮೇಲೆಯೇ ಇರುತ್ತದೆ. ಹೀಗಿದ್ದಾಗ ಅವರ ವರ್ತನೆ, ಹಾವ, ಭಾವ ಎಲ್ಲವೂ ಪ್ರಕ್ಷಕರನ್ನು ಮನರಂಜಿಸುತ್ತವೆ. ಇಲ್ಲೊಂದು ರೂಪದರ್ಶಿ ಪ್ಯಾಷನ್​ ಶೋ (Fashion Show) ವೇಳೆ ಸ್ಟೇಜ್​ ಮೇಲೆ ನಡೆಯುವಾಗ ತನ್ನ ಕೋಟ್​ನಿಂದ ನೆರೆದಿದ್ದ ವ್ಯಕ್ತಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ಈ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ.  ಡಿಸೈನರ್​ ಕ್ರಿಶ್ಚಿಯನ್ ಕೋವನ್ ಎನ್ನುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೊದಲು ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದ  ವಿಡಿಯೋವನ್ನು ಕ್ರಿಶ್ಚಿಯನ್ ಕೋವನ್ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ 2 ಮಿಲಿಯನ್​ ವೀಕ್ಷಣೆ ಪಡೆದಿದೆ. ಕ್ರಿಶ್ಚಿಯನ್ ಕೋವನ್ ಅವರ Spring 2022 Ready-to-Wear runway ಎನ್ನುವ ಶೋದಲ್ಲಿ ಈ ಘಟನೆ ನಡೆದಿದ್ದು ಜಗತ್ತಿನಾದ್ಯಂತ ವಿಡಿಯೋ ವೈರಲ್​ ಆಗಿದೆ.

ವಿಡಿಯೋದಲ್ಲಿ ನೇರಳೆ ಬಣ್ಣದ ಕ್ರಾಫ್​ಟಾಪ್ ಧರಿಸಿದ್ದ ರೂಪದರ್ಶಿಯೊಬ್ಬಳು ನಡೆದುಕೊಂಡು ಬರುತ್ತಿದ್ದಳು. ನಂತರ ತಕ್ಷಣ ಹಿಂದೆ ಹೋಗಿ ತನ್ನ ಕೈಲ್ಲಿದ್ದ ಕೋಟ್​ನಲ್ಲಿ ಸ್ಟೇಜಿನ ಕೆಳಗೆ ನಿಂತ ವ್ಯಕ್ತಿಗೆ ಹೊಡೆಯುತ್ತಾಳೆ. ನಂತರ ತಿರುಗಿ ಮತ್ತೆ ಮುಂದೆ ಕ್ಯಾಟ್​ಮಾಡುತ್ತಾ ನಡೆದುಕೊಂಡು ಬರುತ್ತಾಳೆ. ಇದರ ವಿಡಿಯೋ ನೋಡಿ ನೆಟ್ಟಿಗರು ಇದೊಂದು ಹೊಸ ಟ್ರೆಂಡ್​ ಸೃಷ್ಟಿ ಮಾಡಲಿದೆ ಎಂದಿದ್ದಾರೆ. ವಿಡಿಯೋದಲ್ಲಿರುವ ರೂಪದರ್ಶಿಯನ್ನು ಥಿಯೋಡೋರಾ ಕ್ವಿನ್ಲಿವಾನ್ ಎಂದು ಗುರುತಿಸಲಾಗಿದೆ.  ಟಿಕ್​ಟಾಕ್​ನಲ್ಲಿ ವೈರಲ್​ ಆದ ವಿಡಿಯೋ ಸದ್ಯ ಇನ್ಸ್ಟಾಗ್ರಾಮ್​ನಲ್ಲಿಯೂ ಟ್ರೆಂಡ್​ ಸೆಟ್​ ಮಾಡಿದೆ.

ಇದನ್ನೂ ಓದಿ:

ಗಾಲಿಕುರ್ಚಿಯಲ್ಲಿ ಗರಿಷ್ಠ ದೂರ ಕ್ರಮಿಸಿ ವಿಶ್ವ ಗಿನ್ನಿಸ್ ದಾಖಲೆ ನಿರ್ಮಿಸಿದ ಒಡಿಶಾದ 28ರ ಯುವಕ

Published On - 9:52 am, Tue, 1 February 22

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ