ಗಾಲಿಕುರ್ಚಿಯಲ್ಲಿ ಗರಿಷ್ಠ ದೂರ ಕ್ರಮಿಸಿ ವಿಶ್ವ ಗಿನ್ನಿಸ್ ದಾಖಲೆ ನಿರ್ಮಿಸಿದ ಒಡಿಶಾದ 28ರ ಯುವಕ

ಗಾಲಿಕುರ್ಚಿಯಲ್ಲಿ ಗರಿಷ್ಠ ದೂರ ಕ್ರಮಿಸಿ ವಿಶ್ವ ಗಿನ್ನಿಸ್ ದಾಖಲೆ ನಿರ್ಮಿಸಿದ ಒಡಿಶಾದ 28ರ ಯುವಕ
ಕಮಲಾ ಕಾಂತ ನಾಯಕ್

ಒಡಿಶಾದ ಪುರಿ ಮೂಲದ 28 ವರ್ಷದ ಪಾರ್ಶ್ವ ವಾಯು ಪೀಡಿತ ಯುವಕ ಕಮಲಾ ಕಾಂತ ನಾಯಕ್ ನಿಯೋಫ್ಲೈ ಬಳಸಿ ಗಾಲಿಕುರ್ಚಿಯಲ್ಲಿ ಗರಿಷ್ಠ ದೂರ ಕ್ರಮಿಸಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾನೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jan 31, 2022 | 4:45 PM

ಒಡಿಶಾದ ಪುರಿ ಮೂಲದ 28 ವರ್ಷದ ಪಾರ್ಶ್ವ ವಾಯು ಪೀಡಿತ ಯುವಕ ಕಮಲಾ ಕಾಂತ ನಾಯಕ್ ನಿಯೋಫ್ಲೈ ಬಳಸಿ ಗಾಲಿಕುರ್ಚಿಯಲ್ಲಿ ಗರಿಷ್ಠ ದೂರ ಕ್ರಮಿಸಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾನೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ತಯಾರಿಸಿದ ಗಾಲಿಕುರ್ಚಿಯಲ್ಲಿ ಅವನು 215 ಕಿಲೋಮೀಟರ್ ದೂರವನ್ನು 24 ಗಂಟೆಗಳಲ್ಲಿ ಕ್ರಮಿಸಿದ್ದಾನೆ. ಈ ಹಿಂದೆ 2007ರಲ್ಲಿ ಪೋರ್ಚುಗಲ್‌ನ ಮಾರಿಯೋ ಟ್ರಿನಿಡಾಡ್ ಪೋರ್ಚುಗಲ್‌ನ ವಿಲಾ ರಿಯಲ್‌ನಲ್ಲಿರುವ ವಿಲಾ ರಿಯಲ್ ಸ್ಟೇಡಿಯಂನಲ್ಲಿ 24 ಗಂಟೆಗಳಲ್ಲಿ 182 ಕಿಲೋಮೀಟರ್ ಕ್ರಮಿಸಿ ದಾಖಲೆ ನಿರ್ಮಿಸಲಾಗಿತ್ತು.

ಐಐಟಿ(IIT) ಮದ್ರಾಸ್‌ನ (TIK) ಟಿಕ್ ಸೆಂಟರ್ ಫಾರ್ ರಿಹ್ಯಾಬಿಲಿಟೇಶನ್ ರಿಸರ್ಚ್ ಅಂಡ್ ಡಿವೈಸ್ ಡೆವಲಪ್‌ಮೆಂಟ್ (RLD2) ಜೊತೆಗೆ ಅದರ ಸ್ಮಾರ್ಟ್ ಅಪ್, ನಿಯೋಮೋಷನ್ ಕಳೆದ ವರ್ಷ ವಿಕಲಚೇತನರಿಗಾಗಿ ಮೋಟಾರೀಕೃತ ಗಾಲಿಕುರ್ಚಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ನಿಯೋಬೋಲ್ಟ್ ಎಂದು ಕರೆಯಲ್ಪಡುವ ಇದನ್ನು ವಿಕಲಚೇತನರು ತಮ್ಮ ಪ್ರಯಾಣಕ್ಕೆ ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಯಾಂತ್ರಿಕೃತ ಯಂತ್ರವನ್ನು ಯಾವಾಗ ಬೇಕಾದರೂ ಬೇರ್ಪಡಿಸಬಹುದು ಮತ್ತು ಗಾಲಿಕುರ್ಚಿಗೆ ಮರು ಜೋಡಿಸಬಹುದಾಗಿದೆ. ನಿಯೋಬೋಲ್ಟ್ ನಿಯೋಫ್ಲೈನ್ನು ಸುರಕ್ಷಿತವಾಗಿದ್ದು, ರಸ್ತೆ ಯೋಗ್ಯವಾಗಿ ವಾಹನವನ್ನಾಗಿ ಪರಿವರ್ತಿಸುತ್ತದೆ. ನಾವು ಸಾಮಾನ್ಯವಾಗಿ ಎದುರಿಸಬಹುದಾದ ಯಾವುದೇ ರೀತಿಯ ಭೂಪುದೇಶವನ್ನು ನ್ಯಾವಿಗೇಟ್ ಮಾಡಬಹುದಾಗಿದೆ.  ರಸ್ತೆಗಳಿಲ್ಲದ ಅಥವಾ ಕಡಿದಾದ ಪ್ರದೇಶದಲ್ಲಿ ಸಲೀಸಾಗಿ ಸಾಗುತ್ತದೆ ಎಂದು ಈ ಹಿಂದೆ ಐಐತಿ ಮದ್ರಾಸ್ ಹೇಳಿತ್ತು.

ಕಮಲಾ ಕಾಂತ ನಾಯಕ್ ಅವರಿಗೆ ಸರಿಯಾದ ಸೌಕರ್ಯ, ದಕ್ಷತೆ ಮತ್ತು ಇತರ ಅಂಶಗಳನ್ನು ಒದಗಿಸಲು ಅವರ ದೇಹಕ್ಕೆ ಅನುಗುಣವಾಗಿ ಗಾಲಿಕುರ್ಚಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ರಿಹ್ಯಾಬಿಲಿಟೇಶನ್ ರಿಸರ್ಚ್ ಅಂಡ್ ಡಿವೈಸ್ ಡೆವಲಪ್‌ಮೆಂಟ್ (R2D2) ನ ಮುಖ್ಯಸ್ಥೆ ಸುಜಾತಾ ಶ್ರೀನಿವಾಸನ್ ಹೇಳಿದ್ದಾರೆ. ಗುರುತ್ವಾಕರ್ಷಣೆಯ ಕೇಂದ್ರದಿಂದ ಹಿಡಿದು ಸೂಕ್ತವಾದ ಚಕ್ರದ ಗಾತ್ರದವರೆಗೂ, ನಾಯಕ್ ಅವರಿಗೆ ನೆರವಾಗುವ ರೀತಿಯಲ್ಲಿ ಗಾಲಿಕುರ್ಚಿಯನ್ನು ತಯಾರಿಸಲಾಗಿದೆ. ನಾಯಕ್ ಅವರು ವಿಶ್ವ ದಾಖಲೆಯ ಪಯತ್ನವನ್ನು ಮಾಡುವ ಮೊದಲು ನಾಲ್ಕು ವರ್ಷಗಳ ಕಾಲ ನಿಯೋಫ್ಲೈ ಗಾಲಿಕುರ್ಚಿಯಲ್ಲಿ ಸ್ವತಃ ತರಬೇತಿ  ಪಡೆದುಕೊಂಡಿದ್ದಾರೆ ಎಂದು ಐಐಟಿ ಮದ್ರಾಸ್ ಹೇಳಿದೆ.

ಆರಂಭದಲ್ಲಿ ಪ್ರತಿ ವ್ಯಕ್ತಿಯ ದೇಹ ಮತ್ತು ಪರಿಸರಕ್ಕೆ ಸರಿಹೊಂದುವಂತೆ ನಿಯೋಫ್ಟ್ ಅನ್ನು 18 ವಿಭಿನ್ನ ರೀತಿಯಲ್ಲಿ ಹೊಂದಿಸಬಹುದು. ನಿಯೋಫ್ಲೈ (NeoFly) ನಂತರ, ನಿಯೋಮೋಷನ್ (NeoMotion) ಅವರು ಗಾಲಿಕುರ್ಚಿ ಬಳಕೆದಾರರಿಗೆ ವೈಯಕ್ತಿಕರಿಸಿದ ಗಾಲಿಕುರ್ಚಿಯ ಅನುಭವವನ್ನು ಒದಗಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದರು. ಆದರೆ ವಿಕಲಾಂಗ ವ್ಯಕ್ತಿಗಳು ಸ್ವತಂತ್ರರಾಗಿರಲು ಬಯಸುತ್ತಾರೆ. ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿರುವ ಮೋಟಾರೀಕೃತ ಗಾಲಿಕುರ್ಚಿ (ನಿಯೋಬೋಲ್ಸ್) ಸಾಧನವು ಗಂಟೆಗೆ ಗರಿಷ್ಠ 25 ಕಿಮೀ ವೇಗವನ್ನು ತಲುಪುತ್ತದೆ. ಪ್ರತಿ ಚಾರ್ಜ್‌ಗೆ 50 ಕಿಮೀ ಕ್ರಮಿಸುತ್ತದೆ. ಈ ಮೋಟಾರೀಕೃತ ಗಾಲಿಕುರ್ಚಿ ವಾಹನವು ತೆರಿಗೆ ಸೇರಿದಂತೆ ರೂ 95,000 ಬೆಲೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ;

Viral Video: ಆನೆ ಜತೆಗೆ ಫುಟ್​ಬಾಲ್​ ಆಡುತ್ತಿದ್ದ ಬಾಲಕಿ ಆನೆ ಹಾಲು ಕುಡಿಯಲು ಮುಂದಾಗಿದ್ದೇಕೆ? ಇಲ್ಲಿದೆ ವೈರಲ್​ ವಿಡಿಯೋ

Follow us on

Related Stories

Most Read Stories

Click on your DTH Provider to Add TV9 Kannada