KaRaVe Protest: ಬೆಂಗಳೂರು ಆಕಾಶವಾಣಿ ಕೇಂದ್ರ ಮುಂದೆ ಕರವೇ ಪ್ರೊಟೆಸ್ಟ್
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರು ನಗರ ಸಂಸ್ಕೃತಿಯ ಪ್ರತೀಕವಾಗಿರುವ ಎಫ್ ಎಂ ರೇನ್ ಬೋ ಮುಚ್ಚುವ ನಿರ್ಧಾರವನ್ನು ವಾಪಸ್ಸು ತೆಗೆದುಕೊಳ್ಳಬೇಕು ಅಂತ ಕರವೇ ಪಟ್ಟು ಹಿಡಿದಿದೆ.
ಕನ್ನಡ ಎಫ್ ಎಂ ರೇನ್ ಬೋ 103.3 ಮುಚ್ಚಲು ಯತ್ನದ ವಿರುದ್ಧ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು ಸಿಡಿದೆದ್ದಿವೆ. ಬೆಂಗಳೂರು ಆಕಾಶವಾಣಿ ಕೇಂದ್ರದ ಮುಂದೆ ಕರವೇ ಪ್ರತಿಭಟನೆ ನಡೆಸುತ್ತಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರು ನಗರ ಸಂಸ್ಕೃತಿಯ ಪ್ರತೀಕವಾಗಿರುವ ಎಫ್ ಎಂ ರೇನ್ ಬೋ ಮುಚ್ಚುವ ನಿರ್ಧಾರವನ್ನು ವಾಪಸ್ಸು ತೆಗೆದುಕೊಳ್ಳಬೇಕು ಅಂತ ಕರವೇ ಪಟ್ಟು ಹಿಡಿದಿದೆ. ಬ್ಯಾನರ್ ಹಿಡಿದು ಎಫ್ ಎಂ ರೇನ್ ಬೋ ಮುಂದೆ ಕರವೇ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರು ರಾಜಭವನ ರಸ್ತೆಯಲ್ಲಿರುವ ಆಕಾಶವಾಣಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಕಾರ್ಯಕರ್ತರು ಸಜ್ಜಾಗಿದ್ದಾರೆ. ಇತ್ತೀಚಿಗೆ ಆಕಾಶವಾಣಿ ಮುಖ್ಯಸ್ಥ ರಮಾಕಾಂತ್ಗೆ ಶಾಸಕ ಸುರೇಶ್ ಕುಮಾರ್ ಪತ್ರ ಬರೆದು ಎಚ್ಚರಿಕೆ ನೀಡಿದ್ದರು. ಇದೀಗ ಬೆಂಗಳೂರು ಆಕಾಶವಾಣಿ ಕಚೇರಿ ಮುಂದೆ ಕರವೇ ಪ್ರತಿಭಟನೆ ನಡೆಸುತ್ತಿದೆ.
Latest Videos