Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸಂಸದ ರಮೇಶ ಕತ್ತಿ ಭಜನಾ ಕಾರ್ಯಕ್ರಮವೊಂದರಲ್ಲಿ ತನ್ಮಯತೆಯಿಂದ ಭಾಗಿಯಾಗಿರುವ ವಿಡಿಯೋ ವೈರಲ್

ಮಾಜಿ ಸಂಸದ ರಮೇಶ ಕತ್ತಿ ಭಜನಾ ಕಾರ್ಯಕ್ರಮವೊಂದರಲ್ಲಿ ತನ್ಮಯತೆಯಿಂದ ಭಾಗಿಯಾಗಿರುವ ವಿಡಿಯೋ ವೈರಲ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 03, 2022 | 10:38 PM

ರಮೇಶ್ ಕತ್ತಿ ಅವರು ಪಾಲ್ಗೊಂಡಿರುವ ಈ ಭಜನೆಯಲ್ಲಿ ಮೊದಲು ಶಿವಾನಾಮದ ಜಪ ನಮಗೆ ಕೇಳಿಸುತ್ತದೆ. ಅದಾದ ಮೇಲೆ ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಜಾನಪದ ಗೀತೆಯಾಗಿರುವ ‘ಚನ್ನಪ್ಪ ಚನ್ನಗೌಡ ಕುಂಬಾರ ಮಾಡಿದ ಕೊಡನವ್ವ ಚಂದಕ ತಂದೇನ ತಂಗಿ ನೀರಿಗೆ ಬಂದೇನ ಚಂದಕ ತಂದೇನ ತಂಗಿ ನೀರಿಗೆ ಬಂದೇನ,’ ಹಾಡುವಾಗ ಅವರು ಅಕ್ಷರಶಃ ಭಾವಪರವಶರಾಗುತ್ತಾರೆ.

ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಉಮೇಶ ಕತ್ತಿ ಅವರ ಸಹೋದರ ರಮೇಶ ಕತ್ತಿ (Ramesh Katti) ಅವರು ಬಹಳ ದಿನಗಳಿಂದ ಸುದ್ದಿಯಲ್ಲಿರಲಿಲ್ಲ. ಅವರು 2009-2014 ರ ಅವಧಿಗೆ ಚಿಕ್ಕೋಡಿ (Chikkodi) ಲೋಕ ಸಭಾ ಕ್ಷೇತ್ರದ ಸಂಸದರಾಗಿದ್ದರು. 56 ವರ್ಷ ವಯಸ್ಸಿನ ರಮೇಶ್ ಸಹಕಾರಿ ಕ್ಷೇತ್ರದಲ್ಲಿ (cooperative sector) ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸೇವೆ ಪ್ರತಿಫಲವಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅವರನ್ನು ಈಗ ನೆನಪಿಸಿಕೊಳ್ಳಲು ಕಾರಣವಿದೆ ಮಾರಾಯ್ರೇ. ವಿಷಯ ಏನೆಂದರೆ, ಮಾಜಿ ಸಂಸದರು ಬುಧವಾರ ರಾತ್ರಿ ತಮ್ಮ ಸ್ನೇಹಿತರೊಂದಿಗೆ ಸೇರಿ ಅತ್ಯಂತ ತನ್ಮಯತೆಯಿಂದ ಭಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಮವಾಸ್ಯೆಯ ದಿನದಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ (Bellad Bagewadi) ಗ್ರಾಮದಲ್ಲಿ ರಮೇಶ್ ಅವರು ಗೆಳೆಯರೊಂದಿಗೆ ಶಿವನಾಮ ಭಜನೆ ಮಾಡಿದ್ದಾರೆ. ಭಜನೆ ಮಾಡುವುದು ಒಂದು ಕಲೆ. ಭಜನೆ ನಡೆಯುವಾಗ ಗುಂಪಿನಲ್ಲಿ ಕೂರುವುದು ಬೇರೆ ಮತ್ತು ಕೈಯಲ್ಲಿ ತಾಳ ಹಿಡಿದುಕೊಂಡು ಭಜನಾ ಮಂಡಳಿಯ ಜೊತೆ ಅದನ್ನು ಲೀಡ್ ಮಾಡುವುದೇ ಬೇರೆ.

ಭಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರಿಗೆ ಇದು ಗೊತ್ತಿರುತ್ತದೆ. ಅದು ಬೇಗ ಮುಗಿಯುವಂಥ ಕಾರ್ಯಕ್ರಮವಲ್ಲ. ಗಂಟೆಗಟ್ಟಲೆ ಮತ್ತು ರಾತ್ರಿಯಿಡೀ ನಡೆಯುತ್ತದೆ. ಶಿವರಾತ್ರಿಯ ಸಮಯದಲ್ಲಿ ನೀವು ನೋಡಿರುತ್ತೀರಿ. ಜಾಗರಣೆಯ ನಿಮಿತ್ತ ಭಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಇಡೀ ಊರಿನ ಜನ ಈಶ್ವರನ ದೇವಸ್ಥಾನದಲ್ಲಿ ನೆರೆದು ಭಜನೆ ಮಾಡುತ್ತಾರೆ.

ರಮೇಶ್ ಕತ್ತಿ ಅವರು ಪಾಲ್ಗೊಂಡಿರುವ ಈ ಭಜನೆಯಲ್ಲಿ ಮೊದಲು ಶಿವಾನಾಮದ ಜಪ ನಮಗೆ ಕೇಳಿಸುತ್ತದೆ. ಅದಾದ ಮೇಲೆ ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಜಾನಪದ ಗೀತೆಯಾಗಿರುವ ‘ಚನ್ನಪ್ಪ ಚನ್ನಗೌಡ ಕುಂಬಾರ ಮಾಡಿದ ಕೊಡನವ್ವ ಚಂದಕ ತಂದೇನ ತಂಗಿ ನೀರಿಗೆ ಬಂದೇನ ಚಂದಕ ತಂದೇನ ತಂಗಿ ನೀರಿಗೆ ಬಂದೇನ,’ ಹಾಡುವಾಗ ಅವರು ಅಕ್ಷರಶಃ ಭಾವಪರವಶರಾಗುತ್ತಾರೆ.

ಭಜನೆ ಹಾಡುಗಳಿರುವ ತಾಕತ್ತೇ ಅದು  ಮಾರಾಯ್ರೇ!

ಇದನ್ನೂ ಓದಿ:   ಸಚಿವ ಉಮೇಶ ಕತ್ತಿ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅಯೋಗ್ಯರೆಂದರು ವಿಜಯಪುರದ ರೈತರು!