ಸಚಿವ ನಾರಾಯಣಗೌಡ ಬಗ್ಗೆ ಹಗುರವಾಗಿ ಮಾತಾಡಿದ ವ್ಯಕ್ತಿಯನ್ನು ಬಿಜೆಪಿ ಕಾರ್ಯಕರ್ತರು ತಳ್ಳಾಡಿದರು!

ಸಚಿವ ನಾರಾಯಣಗೌಡ ಬಗ್ಗೆ ಹಗುರವಾಗಿ ಮಾತಾಡಿದ ವ್ಯಕ್ತಿಯನ್ನು ಬಿಜೆಪಿ ಕಾರ್ಯಕರ್ತರು ತಳ್ಳಾಡಿದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Feb 03, 2022 | 9:33 PM

ಮೊದಲು ಚಿಕ್ಕ ಮಾತಿನ ಚಕಮಕಿಯೊಂದಿಗೆ ಶುರುವಾಗುವ ಈ ಸನ್ನಿವೇಶ ಹೆಚ್ಚು ಕಡಿಮೆ ಮಾರಾಮಾರಿಯ ಹಂತ ತಲುಪುತ್ತದೆ. ಪೊಲೀಸರು ಅಲ್ಲಿದ್ದಾರೆ, ಆದರೆ ಅವರು ಜಗಳ ನಿಲ್ಲಿಸಲು ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಕಪ್ಪು ಅಂಗಿ ಧರಿಸಿರುವ ವ್ಯಕ್ತಿ ಏಟು ತಿನ್ನದಂತೆ ಅವರು ಬಚಾವು ಮಾಡುವುದು ಮಾತ್ರ ಸತ್ಯ.

ಇದರ ಅವಶ್ಯಕತೆ ಇರಲಿಲ್ಲ. ಆದರೆ ಇಂಥ ಘಟನೆಗಳಿಲ್ಲದಿದ್ದರೆ ರಾಜಕೀಯ ಅಪೂರ್ಣ ಅನ್ನುವಂಥ ಸ್ಥಿತಿ ಈಗ ನಿರ್ಮಾಣವಾಗಿದೆ. ಮಂಡ್ಯದಿಂದ ಲಭ್ಯವಾಗಿರುವ ಈ ವಿಡಿಯೋ ನೋಡಿ. ಅಲ್ಲಿನ ಪ್ರವಾಸಿ ಮಂದಿರದಲ್ಲಿ(inspection bungalow) ನಡೆದಿರುವ ಘಟನೆ ಇದು. ಸುಮಾರು 10-15 ಬಿಜೆಪಿ ಕಾರ್ಯಕರ್ತರು (BJP workers) ಒಬ್ಬ ವ್ಯಕ್ತಿಯ ಮೇಲೆ ಹರಿಹಾಯುತ್ತಿದ್ದಾರೆ. ಮೊದಲು ಚಿಕ್ಕ ಮಾತಿನ ಚಕಮಕಿಯೊಂದಿಗೆ ಶುರುವಾಗುವ ಈ ಸನ್ನಿವೇಶ ಹೆಚ್ಚು ಕಡಿಮೆ ಮಾರಾಮಾರಿಯ ಹಂತ ತಲುಪುತ್ತದೆ. ಪೊಲೀಸರು ಅಲ್ಲಿದ್ದಾರೆ, ಆದರೆ ಅವರು ಜಗಳ ನಿಲ್ಲಿಸಲು ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಕಪ್ಪು ಅಂಗಿ ಧರಿಸಿರುವ ವ್ಯಕ್ತಿ ಏಟು ತಿನ್ನದಂತೆ ಅವರು ಬಚಾವು ಮಾಡುವುದು ಮಾತ್ರ ಸತ್ಯ. ಅಂದಹಾಗೆ, ಈ ವ್ಯಕ್ತಿ ಸಚಿವ ಕೆ ಸಿ ನಾರಾಯಣಗೌಡರ ( KC Narayanagowda) ಬಗ್ಗೆ ಯಾವುದೋ ವಿಷಯಕ್ಕೆ ಕಾಮೆಂಟ್ ಮಾಡಿದ್ದಾರಂತೆ. ಅವರನ್ನು ಕೇವಲವಾಗಿ ಚಿತ್ರಿಸುವ ಪ್ರಯತ್ನ ವ್ಯಕ್ತಿ ಮಾಡಿದ್ದಾರೆನ್ನುವುದು ಅಸ್ಪಷ್ಟವಾಗಿ ಕೇಳುವ ಅವರ ಮಾತುಗಳಿಂದ ಅರ್ಥ ಮಾಡಿಕೊಳ್ಳಬಹುದು.

ಆ ವ್ಯಕ್ತಿ, ಅವರ ಹೆಸರು ಗೊತ್ತಿರದ ಕಾರಣ ನಾವು ವ್ಯಕ್ತಿ ಅಂತ ಹೇಳುತ್ತಿದ್ದೇವೆ, ಸಚಿವರ ಬಗ್ಗೆ ಮಾತಾಡಿದ್ದು, ಮಂಡ್ಯದ ಬಿಜೆಪಿ ಕಾರ್ಯಕರ್ತರಿಗೆ ಗೊತ್ತಾಗಿದೆ. ಒಂದು ಗುಂಪು ಮಾಡಿಕೊಂಡು ಅವರು ವ್ಯಕ್ತಿಯನ್ನು ಹುಡುಕಿಕೊಂಡು ಪ್ರವಾಸಿ ಮಂದಿರಕ್ಕೆ ಬಂದಿದ್ದಾರೆ. ಅಲ್ಲೇ ಮಾತಿನ ಚಕಮಕಿ ಶುರುವಾಗಿದೆ.

ಒಬ್ಬಂಟಿಯಾಗಿರುವ ವ್ಯಕ್ತಿಯನ್ನು ತಳ್ಳಾಡಲು, ನೂಕಾಡಲು ಬಿಜೆಪಿ ಕಾರ್ಯಕರ್ತರು ಪ್ರಾರಂಭಿಸುತ್ತಾರೆ. ಅ ವ್ಯಕ್ತಿ ಪೊಲೀಸರ ಸಲಹೆಯಂತೆ ಅಲ್ಲಿಂದ ಹೋಗುವ ಪ್ರಯತ್ನ ಮಾಡುತ್ತಿಲ್ಲ. ಎಲ್ಲರೊಂದಿಗೆ ವಾದಕ್ಕೆ ನಿಲ್ಲುತ್ತಾರೆ. ಪೊಲೀಸರು ಅವರನ್ನು ಬೇರೆಡೆ ಕರೆದೊಯ್ಯಲು ಸಹ ಕಾರ್ಯಕರ್ತರು ಬಿಡದೆ ಅಡ್ಡ ಹಾಕಿ ನಿಲ್ಲಿಸುತ್ತಾರೆ. ಅಂತಿಮವಾಗಿ ಅ ವ್ಯಕ್ತಿ ಅಲ್ಲಿಂದ ದಾಟಿ ಹೋಗುತ್ತಾರಾದರೂ ಮೊದಲು ಅವರ ಕೈಯಲ್ಲಿದ್ದ ಫೈಲು ಕಾಣುವುದಿಲ್ಲ.

ಇದನ್ನೂ ಓದಿ:  Viral Video: ಗೆಳತಿಯನ್ನು ಸೂಟ್​ಕೇಸ್​ನಲ್ಲಿಟ್ಟು ಹಾಸ್ಟೆಲ್​ನೊಳಗೆ ಕರೆದೊಯ್ದ ವಿದ್ಯಾರ್ಥಿ; ಮಣಿಪಾಲ್ ಗರ್ಲ್ ವಿಡಿಯೋ ವೈರಲ್

Published on: Feb 03, 2022 09:27 PM