Viral Video: ಗೆಳತಿಯನ್ನು ಸೂಟ್ಕೇಸ್ನಲ್ಲಿಟ್ಟು ಹಾಸ್ಟೆಲ್‌ನೊಳಗೆ ಕರೆದೊಯ್ದ ವಿದ್ಯಾರ್ಥಿ; ಮಣಿಪಾಲ್ ಗರ್ಲ್ ವಿಡಿಯೋ ವೈರಲ್
Suitcase Girl: ಸೆಕ್ಯುರಿಟಿ ಗಾರ್ಡ್ ಬ್ಯಾಗ್ ತೆಗೆದು ನೋಡಲು ಪ್ರಯತ್ನಿಸುತ್ತಿದ್ದಂತೆ ಆತಂಕಗೊಂಡ ವಿದ್ಯಾರ್ಥಿ ಟ್ರಾವೆಲ್ ಬ್ಯಾಗ್ ಎತ್ತಿಕೊಂಡು ಓಡಲು ಯತ್ನಿಸಿದ್ದಾನೆ. ಈ ವೇಳೆ ಅನುಮಾನಗೊಂಡು ಬ್ಯಾಗ್ ಪರಿಶೀಲನೆ ಮಾಡಿದಾಗ ಆ ಬ್ಯಾಗ್ನೊಳಗೆ ಯುವತಿ ಇರುವುದು ಪತ್ತೆಯಾಗಿತ್ತು
ಬೆಂಗಳೂರು: ಗರ್ಲ್ಫ್ರೆಂಡ್ ಅನ್ನು ಟ್ರಾವೆಲ್ ಬ್ಯಾಗ್‌ನಲ್ಲಿ ತುಂಬಿಕೊಂಡು, ಹಾಸ್ಟೆಲ್‌ಗೆ ಒಳಗೆ ಕರೆದೊಯ್ದಿದ್ದ ವಿದ್ಯಾರ್ಥಿ ಹಾಸ್ಟೆಲ್ನಿಂದ ಹೊರಗೆ ಬರುವಾಗ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ (Video Viral) ಆಗಿದೆ. ಉಡುಪಿ ಜಿಲ್ಲೆಯ ಮಣಿಪಾಲ ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ತನ್ನ ಗೆಳತಿಯನ್ನು ಹಾಸ್ಟೆಲ್‌ನೊಳಗೆ ಕರೆದುಕೊಂಡು ಹೋಗಲು ಬ್ಯಾಗ್ನೊಳಗೆ ತುಂಬಿಕೊಂಡಿದ್ದ. ಹಾಸ್ಟೆಲ್ ಗೇಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಂದ ತಪಾಸಣೆ ನಡೆದಾಗ ಈ ವಿಷಯ ಗೊತ್ತಾಗಿತ್ತು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆಕ್ಯುರಿಟಿ ಗಾರ್ಡ್ ಬ್ಯಾಗ್ ತೆಗೆದು ನೋಡಲು ಪ್ರಯತ್ನಿಸುತ್ತಿದ್ದಂತೆ ಆತಂಕಗೊಂಡ ವಿದ್ಯಾರ್ಥಿ ಟ್ರಾವೆಲ್ ಬ್ಯಾಗ್ ಎತ್ತಿಕೊಂಡು ಓಡಲು ಯತ್ನಿಸಿದ್ದಾನೆ. ಈ ವೇಳೆ ಅನುಮಾನಗೊಂಡು ಬ್ಯಾಗ್ ಪರಿಶೀಲನೆ ಮಾಡಿದಾಗ ಆ ಬ್ಯಾಗ್ನೊಳಗೆ ಯುವತಿ ಇರುವುದು ಪತ್ತೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
The girl and the suitcase, you tell me??? pic.twitter.com/T1lm0Nv7Mp
— that royal whore qween (@justbhavyaugh) February 2, 2022
ತನ್ನ ಗರ್ಲ್ ಫ್ರೆಂಡನ್ನು ಹಾಸ್ಟೆಲ್ ರೂಂನೊಳಗೆ ಕರೆದುಕೊಂಡು ಹೋಗಲು ಟ್ರಾವೆಲ್ ಬ್ಯಾಗ್ನೊಳಗೆ ತುಂಬಿಕೊಂಡು ಹೋಗುವ ಐಡಿಯಾ ಮಾಡಿದ ಯುವಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ. ಈ ದೃಶ್ಯ ಉಡುಪಿಯ ಮಣಿಪಾಲ್ ವಿಶ್ವವಿದ್ಯಾಲಯದ ಎಂಐಟಿಯದ್ದು ಎಂದು ಕೆಲವರು ಹೇಳಿದ್ದಾರೆ. ಆದರೆ, ಈ ವಿಡಿಯೋ 2019ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಡೆಹ್ರಾಡೂನ್‍ನದ್ದು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.
ಹೀಗಾಗಿ, ಈ ವಿಡಿಯೋ ಕರ್ನಾಟಕದ ಮಣಿಪಾಲದ್ದಾ ಅಥವಾ ಡೆಹ್ರಾಡೂನ್ನದ್ದಾ ಎಂಬುದು ಇನ್ನೂ ಖಚಿತವಾಗಿಲ್ಲ. ಯುವತಿಯನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಹಾಸ್ಟೆಲ್‌ನೊಳಗೆ ಹೋಗುತ್ತಿದ್ದಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಈ ವಿಡಿಯೋ ನೋಡಿದವರು ಟ್ವಿಟ್ಟರ್ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
Dating app bios in Manipal: There’s always a space for you in my suitcase.
— Ena Robinson (@enaaa_robinson) February 2, 2022
2019ರಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಈ ವೀಡಿಯೋ ಉಡುಪಿಯದ್ದಲ್ಲ, ಡೆಹ್ರಾಡೂನ್‍ನದ್ದು ಎಂದು ಹೇಳಲಾಗುತ್ತಿದೆ. ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಟ್ರೋಲ್ ಪೇಜ್‍ಗಳಲ್ಲಿ ಈ ವಿಡಿಯೋ ಮತ್ತೆ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ.
manipal boys be like ‘I know a place’ , then put you in a suitcase
— Shreehari Thakral (@shreehari63) February 2, 2022
ಇದನ್ನೂ ಓದಿ: Viral News: 3 ವರ್ಷ ಸಿಗರೇಟ್ ಸೇದುವುದು ಬಿಟ್ಟಿದ್ದಕ್ಕೆ ಲಕ್ಷಾಧಿಪತಿಯಾದ; ಹೇಗೆ ಅಂತೀರಾ?
Dosa Challenge: 40 ನಿಮಿಷದಲ್ಲಿ ಈ ದೋಸೆ ತಿನ್ನಿ, 71 ಸಾವಿರ ರೂ. ಬಹುಮಾನ ಗೆಲ್ಲಿ!
Published On - 5:17 pm, Thu, 3 February 22