AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dosa Challenge: 40 ನಿಮಿಷದಲ್ಲಿ ಈ ದೋಸೆ ತಿನ್ನಿ, 71 ಸಾವಿರ ರೂ. ಬಹುಮಾನ ಗೆಲ್ಲಿ!

Viral News: ನೀವು ದೋಸೆ ಪ್ರಿಯರಾ? ಹಾಗಾದರೆ ಈ ರೆಸ್ಟೋರೆಂಟ್​ನಲ್ಲಿ ಸಿದ್ಧಪಡಿಸಲಾಗುವ 10 ಅಡಿ ಉದ್ದದ ಮಸಾಲ ದೋಸೆಯನ್ನು 40 ನಿಮಿಷಗಳಲ್ಲಿ ತಿಂದು ಮುಗಿಸುವವರಿಗೆ 71,000 ರೂಪಾಯಿ ಬಹುಮಾನವನ್ನು ನೀಡಲಾಗುತ್ತದೆ.

Dosa Challenge: 40 ನಿಮಿಷದಲ್ಲಿ ಈ ದೋಸೆ ತಿನ್ನಿ, 71 ಸಾವಿರ ರೂ. ಬಹುಮಾನ ಗೆಲ್ಲಿ!
ದೆಹಲಿ ರೆಸ್ಟೋರೆಂಟ್​ನ ದೋಸೆ
TV9 Web
| Updated By: ಸುಷ್ಮಾ ಚಕ್ರೆ|

Updated on:Feb 03, 2022 | 2:27 PM

Share

ದಕ್ಷಿಣ ಭಾರತದವರಿಗೆ ದೋಸೆಯೆಂದರೆ ವಿಪರೀತ ಪ್ರೀತಿ. ಅದರಲ್ಲೂ ಕರ್ನಾಟಕದ ಮಲೆನಾಡು, ಕರಾವಳಿ ಭಾಗದವರಿಗೆ ಪ್ರತಿ ದಿನವೂ ದೋಸೆ (Dosa) ಮಾಡಿಕೊಟ್ಟರೂ ಬೋರ್ ಎನಿಸುವುದೇ ಇಲ್ಲ. ಉದ್ದಿನ ದೋಸೆ, ನೀರು ದೋಸೆ, ಮಸಾಲೆ ದೋಸೆ, ತೆಳ್ಳೇವು, ಸೌತೆ ಕಾಯಿ ದೋಸೆ, ಖಾರ ದೋಸೆ, ಕಾಯಿ ದೋಸೆ, ಈರುಳ್ಳಿ ದೋಸೆ ಹೀಗೆ ನಾನಾ ವಿಧದ ದೋಸೆಗಳನ್ನು ಮಾಡಿಕೊಂಡು ದಿನವೂ ಸವಿಯುವವರಿದ್ದಾರೆ. ದೋಸೆ ಪ್ರಿಯರಿಗೆ ದೆಹಲಿಯ ರೆಸ್ಟೋರೆಂಟ್​ ಒಂದು ಚಾಲೆಂಜ್ ನೀಡಿದ್ದು, ಈ ಮಸಾಲ ದೋಸೆಯನ್ನು 40 ನಿಮಿಷದೊಳಗೆ ತಿಂದು ಮುಗಿಸಿದವರು ಬರೋಬ್ಬರಿ 71,000 ರೂ. ಬಹುಮಾನ ಗೆಲ್ಲುವ ಅವಕಾಶ ನೀಡಲಾಗಿದೆ. ಒಂದು ದೋಸೆ ತಿನ್ನೋಕೆ 40 ನಿಮಿಷ ಬೇಕಾ? ಒಂದು ದೋಸೆಯೆಲ್ಲ ನಮಗೆ ಲೆಕ್ಕಕ್ಕೇ ಇಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಈ ದೋಸೆಯ ಉದ್ದ 10 ಅಡಿ!

ದೆಹಲಿಯ ಉತ್ತಮ್ ನಗರದಲ್ಲಿರುವ ಸ್ವಾಮಿ ಶಕ್ತಿ ಸಾಗರ್ ಎಂಬ ಹೆಸರಿನ ರೆಸ್ಟೋರೆಂಟ್ ತನ್ನ ಎಲ್ಲಾ ಗ್ರಾಹಕರಿಗೆ, ವಿಶೇಷವಾಗಿ ಆಹಾರಪ್ರೇಮಿಗಳಿಗೆ ಸವಾಲೊಂದನ್ನು ನೀಡಿದೆ. ಈ ರೆಸ್ಟೋರೆಂಟ್​ನಲ್ಲಿ ಸಿದ್ಧಪಡಿಸಲಾಗುವ 10 ಅಡಿ ಉದ್ದದ ದೋಸೆಯನ್ನು 40 ನಿಮಿಷಗಳಲ್ಲಿ ತಿಂದು ಮುಗಿಸುವವರಿಗೆ 71,000 ರೂಪಾಯಿ ಬಹುಮಾನವನ್ನು ನೀಡಲಾಗುತ್ತದೆ. ಈ ಕುರಿತು ಮಾತನಾಡಿರುವ ಸ್ವಾಮಿ ಶಕ್ತಿ ಸಾಗರ್ ರೆಸ್ಟೋರೆಂಟ್ ಮಾಲೀಕ ಶೇಖರ್ ಕುಮಾರ್, ನಮ್ಮ ರೆಸ್ಟೊರೆಂಟ್‌ನಲ್ಲಿ 10 ಅಡಿ ಉದ್ದದ ದೋಸೆ ಚಾಲೆಂಜ್ ನಡೆಯುತ್ತಿದ್ದು, 40 ನಿಮಿಷದಲ್ಲಿ ಒಬ್ಬರೇ ಈ ದೋಸೆಯನ್ನು ಮುಗಿಸಿದರೆ 71,000 ರೂಪಾಯಿಗಳ ಬಹುಮಾನದ ಚೆಕ್ ನೀಡುತ್ತೇವೆ ಎಂದಿದ್ದಾರೆ.

View this post on Instagram

A post shared by Bhawna ? (@delhi_tummy)

ಮೊದಲು ನಾವು ಚಿಕ್ಕ ದೋಸೆಗಳನ್ನು ಮಾಡುತ್ತಿದ್ದೆವು. ನಂತರ ಸ್ವಲ್ಪ ದೊಡ್ಡ ದೋಸೆ ಮಾಡಬೇಕೆಂದು ಯೋಚಿಸಿದೆವು. ನಾವು ದೊಡ್ಡ ದೋಸೆ ಮಾಡಿ, ಗ್ರಾಹಕರನ್ನು ಸೆಳೆಯಲು ಈ ಚಾಲೆಂಜ್ ನೀಡುತ್ತಿದ್ದೇವೆ. ಈಗಾಗಲೇ ಹಲವು ಜನರು ಈ ಚಾಲೆಂಜ್ ಸ್ವೀಕರಿಸಿ ಸೋತಿದ್ದಾರೆ. ಯಾರು 10 ಅಡಿ ಉದ್ದದ ದೋಸೆಯನ್ನು ಒಬ್ಬರೇ ತಿಂದು ಮುಗಿಸುತ್ತಾರೋ ಅವರು ಬಹುಮಾನವನ್ನು ಗೆಲ್ಲುತ್ತಾರೆ ಎಂದು ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ.

ಈ 10 ಅಡಿ ಉದ್ದದ ದೋಸೆಯ ವಿಡಿಯೋ ವೈರಲ್ ಆಗಿದ್ದು, ಇಲ್ಲಿಯವರೆಗೆ 25ರಿಂದ 26 ಜನರು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಆದರೆ, ಈ ಸವಾಲನ್ನು ಇಲ್ಲಿಯವರೆಗೆ ಯಾರೂ ಗೆದ್ದಿಲ್ಲ. ನಾವು ಎಲ್ಲೆಡೆಯಿಂದ ಕರೆಗಳನ್ನು ಸ್ವೀಕರಿಸುತ್ತಿದ್ದೇವೆ. ಮುಖ್ಯವಾಗಿ ನಾವು ದೋಸೆಯ ಗುಣಮಟ್ಟಕ್ಕೆ ಮಹತ್ವ ನೀಡುತ್ತೇವೆ. ಇದೇ ಕಾರಣಕ್ಕೆ ನಮ್ಮ ರೆಸ್ಟೋರೆಂಟ್​ನ ದೋಸೆಯನ್ನು ಮೆಚ್ಚಿ ದೂರದೂರುಗಳಿಂದ ಜನರು ಬರುತ್ತಾರೆ ಎಂದು ಮಾಲೀಕರು ತಿಳಿಸಿದ್ದಾರೆ.

ಇದನ್ನೂ ಓದಿ: Success Story: ಕೇವಲ ಎರಡೂವರೆ ರೂ.ಗೆ ಇಡ್ಲಿ, 5 ರೂ.ಗೆ ದೋಸೆ ಮಾರುವ ಬೆಂಗಳೂರಿನ ಅಮ್ಮ; ವಿಡಿಯೋ ಇಲ್ಲಿದೆ

Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?

Published On - 2:22 pm, Thu, 3 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ