ವಿಶಾಖಪಟ್ಟಣಂ: ಚೂಪಾದ ಕೊಕ್ಕಿನಿಂದ ಮೀನುಗಾರನನ್ನು ಚುಚ್ಚಿ ಕೊಂದ ಬ್ಲ್ಯಾಕ್ ಮರ್ಲಿನ್ ಮೀನು
ಮೀನುಗಾರಿಕೆಗೆ ತೆರಳಿದ್ದ ವೇಳೆ ಬ್ಲ್ಯಾಕ್ ಮರ್ಲಿನ್ ಎನ್ನುವ ಮೀನು ಮೀನಾಗಾರನ ಮೇಲೆ ದಾಳಿ ನಡೆಸಿ ತನ್ನ ಚೂಪಾದ ಕೊಕ್ಕಿನಿಂದ ಇರಿದಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮೀನುಗಾರಿಕೆ (Fishering) ಎಷ್ಟು ಲಾಭದಾಯಕ ಉದ್ಯಮವೋ ಅಷ್ಟೇ ಅಪಾಯಕಾರಿ ಕೂಡ ಹೌದು. ಸಮುದ್ರದಲ್ಲಿ ಮೀನುಗಾರಿಕೆಯ ವೇಳೆ ಕೆಲವೊಂದು ಅಪಾಯಕಾರಿ ಮೀನುಗಳು ದಾಳಿ ಮಾಡಿ ಜೀವಕ್ಕೆ ಕುತ್ತು ತರುತ್ತದೆ. ಅಂತಹದ್ದೇ ಒಂದು ಘಟನೆ ಆಂದ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ಬ್ಲ್ಯಾಕ್ ಮರ್ಲಿನ್ (Black Marlin Fish) ಎನ್ನುವ ಮೀನು ಮೀನಾಗಾರನ ಮೇಲೆ ದಾಳಿ ನಡೆಸಿ ತನ್ನ ಚೂಪಾದ ಕೊಕ್ಕಿನಿಂದ ಇರಿದಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ವಿಶಾಖಪಟ್ಟಣಂನ (Visakhapatnam ) ಸುಮಾರು 90 ಕಿಮೀ ದೂರದಲ್ಲಿರುವ ಮುತ್ಯಾಲಮ್ಮಪಾಲೆಂ ಕರಾವಳಿಯಲ್ಲಿ ಸಮುದ್ರದ ಮಧ್ಯೆ ಮೀನುಗಾರ ಮೀನು ಇರಿದ ಪರಿಣಾಮ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ವಿಶಾಖಪಟ್ಟಣಂನ ನಿವಾಸಿ ಜೋಗಣ್ಣ (40) ಎಂದು ಗುರುತಿಸಲಾಗಿದೆ.
ಜೋಗಣ್ಣ ತನ್ನ ತಂಡದೊದಂದಿಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ 70-80 ಕೆಜಿ ತೂಕದ ಮೀನೊಂದು ಬಲೆಗೆ ಸಿಕ್ಕಿಬಿದ್ದಿತ್ತು. ಅದನ್ನು ದೋಣಿಗೆ ಎಳೆದು ತರಲು ಸಾಧ್ಯವಾಗದ ಹಿನ್ನಲೆಯಲ್ಲಿ ಜೋಗಣ್ಣ ನೀರಿಗೆ ಇಳಿದು ಬಲೆಯನ್ನು ಎಳೆದಿದ್ದಾರೆ. ಈ ವೇಳೆ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ಬ್ಲ್ಯಾಕ್ ಮರ್ಲಿನ್ ಮೀನು ತನ್ನ ಚೂಪಾದ ಕೊಕ್ಕಿನಿಂದ ಜೋಗಣ್ಣರಿಗೆ ಇರಿದು ತಪ್ಪಿಸಿಕೊಂಡು ಹೋಗಿದೆ. ಮೀನು ಬಲವಾಗಿ ಚುಚ್ಚಿದ ಪರಿಣಾಮ ಜೋಗಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಕ್ಷಣ ದೋಣಿಯಲ್ಲಿದ್ದ ಇತರರು ಜೋಗಣ್ಣನನ್ನು ಮೇಲಕ್ಕೆ ಎಳೆದು ದಡಕ್ಕೆ ತಂದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಬ್ಲ್ಯಾಕ್ ಮರ್ಲಿನ್ ಮೀನುಗಳು ಹೆಚ್ಚಾಗಿ ಪೆಸಿಫಿಕ್ ಸಾಗರಗಳ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುವ ಒಂದು ಜಾತಿಯ ಮೀನು. ಈ ಮೀನು ಸರಿಸುಮಾರು 4.65 ಮೀ ಉದ್ದ ಮತ್ತು 750 ಕೆಜಿ ತೂಕವಿರುತ್ತದೆ. ಇದು ಅತಿದೊಡ್ಡ ಮಾರ್ಲಿನ್‌ಗಳಲ್ಲಿ ಒಂದಾಗಿದೆ ಮತ್ತು ಅತಿದೊಡ್ಡ ಎಲುಬಿನ ಮೀನುಗಳಲ್ಲಿ ಒಂದಾಗಿದೆ. ಜತೆಗೆ ಈ ಬ್ಲ್ಯಾಕ್ ಮರ್ಲಿನ್ ಮೀನನ್ನು ಅಪಾಯಕಾರಿ ಮೀನುಗಳಲ್ಲಿ ಒಂದು ಹೇಳಲಾಗುತ್ತದೆ.
ಇದನ್ನೂ ಓದಿ:
Viral Video ಬೆಂಕಿ ಹೊತ್ತಿ ಉರಿಯುತ್ತಿದ್ದ ಟ್ರಕ್ ಚಲಾಯಿಸಿ ಭಾರೀ ಅನಾಹುತ ತಡೆದ ವ್ಯಕ್ತಿ; ಶ್ಲಾಘಿಸಿದ ಸಾರ್ವಜನಿಕರು
Published On - 10:56 am, Thu, 3 February 22