Viral Video ಬೆಂಕಿ ಹೊತ್ತಿ ಉರಿಯುತ್ತಿದ್ದ ಟ್ರಕ್ ಚಲಾಯಿಸಿ ಭಾರೀ ಅನಾಹುತ ತಡೆದ ವ್ಯಕ್ತಿ; ಶ್ಲಾಘಿಸಿದ ಸಾರ್ವಜನಿಕರು
ಕೇರಳದ ವ್ಯಕ್ತಿಯೊಬ್ಬರು ಬೆಂಕಿ ಹೊತ್ತಿ ಉರಿಯುತ್ತಿದ್ದ ಟ್ರಕ್ ಒಂದನ್ನು ಚಲಾಯಿಸುವ ಮೂಲಕ ಸಂಭವಿಸಲಿದ್ದ ಭಾರೀ ಅನಾಹುತವನ್ನು ತಪ್ಪಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ.
ಕೇರಳದ (Kerala) ವ್ಯಕ್ತಿಯೊಬ್ಬರು ಬೆಂಕಿ (Fire) ಹೊತ್ತಿ ಉರಿಯುತ್ತಿದ್ದ ಟ್ರಕ್ (Truck) ಒಂದನ್ನು ಚಲಾಯಿಸುವ ಮೂಲಕ ಸಂಭವಿಸಲಿದ್ದ ಭಾರೀ ಅನಾಹುತವನ್ನು ತಪ್ಪಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹತ್ತಿದ ಟ್ರಕ್ ಚಲಾಯಿಸುವ ವಿಡಿಯೋ ಸಖತ್ ವೈರಲ್ ಆಗಿದೆ. ಕೇರಳದ ಕೊಂಡಿಂಚೇರಿ ಎನ್ನುವಲ್ಲಿ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ನಿಲ್ಲಿಸದ್ದ ಹುಲ್ಲು ತುಂಬಿದ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಗಾಬರಿಗೊಂಡ ಚಾಲಕ ಟ್ರಕ್ ಅನ್ನು ಬಿಟ್ಟು ಓಡಿಹೋಗಿದ್ದನು. ತಕ್ಷಣ ಶಾಪಿ ಪಾಪನ್ ಎನ್ನುವ ವ್ಯಕ್ತಿ ಟ್ರಕ್ಅನ್ನು ಚಲಾಯಿಸಿಕೊಂಡು ಜನನಿಬಿಡ ಪ್ರದೇಶದಿಂದ ದೂರಕ್ಕೆ ತೆಗೆದುಕೊಂಡು ಬಂದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
View this post on Instagram
ವಿಡಿಯೋದಲ್ಲಿ ಹುಲ್ಲು ತುಂಬಿದ ಲಾರಿಗೆ ಬೆಂಕಿ ಕೆನ್ನಾಲಿಗೆಯನ್ನು ಚಾಚಿ ಆಕಾಶದೆತ್ತರಕ್ಕೆ ಹೊತ್ತು ಉರಿಯುತ್ತಿರುವುದನ್ನು ಕಾಣಬಹುದು. ಅಂತಹ ಟ್ರಕ್ ಅನ್ನು ಶಾಜಿ ಎನ್ನುವವರು ಓಡಿಸಿರುವ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ @kozhikottukaarofficial ಎನ್ನುವ ಬಳಕೆದಾರರರು ಈ ಆಘಾತಕಾರಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಗಾಬರಿಗೊಂಡಿದ್ದಾರೆ. ಸದ್ಯ ವಿಡಿಯೋ 14 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದ್ದು, ಶಾಜಿ ಅವರ ಸಮಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದು ಭಾರೀ ಅನಾಹುತ ತಪ್ಪಿದಂತಾಗಿದೆ. ಕೇರಳದ ಸ್ಥಳೀಯ ವರದಿಗಳ ಪ್ರಕಾರ ಶಾಜಿ ಅವರನ್ನು ವರ್ಗೀಸ್ ಎಂದು ಕರೆಯುತ್ತಾರೆ. ಈ ಹಿಂದೆ 50 ಅಡಿ ಕೆಳಕ್ಕೆ ಬೀಳುವುದನ್ನು ತಪ್ಪಿಸಿ ಜನರನ್ನು ರಕ್ಷಣೆ ಮಾಡಿ ಹೀರೋ ಎನಿಸಿಕೊಂಡಿದ್ದರು. ಈಗಲೂ ಬೆಂಕಿ ಹೊತ್ತಿ ಉರಿಯುತ್ತಿದ್ದ ಟ್ರಕ್ ಅನ್ನು ಚಲಾಯಿಸಿ ಅನಾಹುತವನ್ನು ತಡೆದು ಸಾರ್ವಜನಿಕರ ಪಾಲಿನ ಹೀರೋ ಆಗಿದ್ದಾರೆ.
ಇದನ್ನೂ ಓದಿ:
ಛೆ..ಎಂಥಾ ದುರಂತ: ಹೈವೋಲ್ಟೇಜ್ ವಿದ್ಯುತ್ ತಂತಿ ಬಿದ್ದು 30 ಮಂದಿ ದುರ್ಮರಣ