AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ನ್ಯೂ ಇಯರ್​ ಸಂಭ್ರಮ: ಚಾಕೋಲೇಟ್​ ಹುಲಿ ತಯಾರಿಸಿ ಶುಭ ಕೋರಿದ ಪೇಸ್ಟ್ರಿ ವಿನ್ಯಾಸಕಾರ

ಫೆಬ್ರವರಿ 1 ರಂದು ಚೀನಾ ಹೊಸ ವರ್ಷವನ್ನು ಸ್ವಾಗತಿಸಿದೆ. ಈ ಹಿನ್ನಲೆಯಲ್ಲಿ ಅಮೊರಿ ಗುಯಿಚನ್ ವಿಶೇಷ ಚಾಕೋಲೇಟ್​ನ ಹುಲಿಯ ಕಲಾಕೃತಿ ತಯಾರಿಸಿದ್ದಾರೆ.

ಚೀನಾದಲ್ಲಿ ನ್ಯೂ ಇಯರ್​ ಸಂಭ್ರಮ: ಚಾಕೋಲೇಟ್​ ಹುಲಿ ತಯಾರಿಸಿ ಶುಭ ಕೋರಿದ ಪೇಸ್ಟ್ರಿ ವಿನ್ಯಾಸಕಾರ
ಚಾಕೋಲೇಟ್​ನಿಂದ ತಯಾರಾದ ಹುಲಿ
Follow us
TV9 Web
| Updated By: Pavitra Bhat Jigalemane

Updated on:Feb 02, 2022 | 5:40 PM

ಖ್ಯಾತ ಪೇಸ್ಟ್ರಿ ಬಾಣಸಿಗ(Pastry Chef )ಅಮೊರಿ ಗುಯಿಚನ್ (Amaury Guichon) ಈ ಬಾರಿ ಚಾಕೋಲೇಟ್​ನಲ್ಲಿ​ ಹುಲಿಯನ್ನು ತಯಾರಿಸಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಖತ್​ ವೈರಲ್​ ಆಗಿದೆ. ಇವರು ಈಗಾಗಲೇ ವಿವಿಧ ಪ್ರಾಣಿ, ಮನುಷ್ಯರ ರೀತಿ ಚಾಕೋಲೇಟ್​ನಲ್ಲಿ ಆಕೃತಿಯನ್ನು ನಿರ್ಮಿಸಿ ಖ್ಯಾತಿಗಳಿಸಿದ್ದಾರೆ. ಇದೀಗ ಚೀನಾದ ಹೊಸ ವರ್ಷದ ಹಿನ್ನಲೆ ಹೊಸ ವರ್ಷದ ಶುಭಾಷಯಗಳನ್ನು ತಿಳಿಸಲು ಚಾಕೋಲೇಟ್​ನಲ್ಲಿ ಹುಲಿಯನ್ನು ತಯಾರಿಸಿದ್ದಾರೆ. ಫೆಬ್ರವರಿ 1 ರಂದು ಚೀನಾ ಹೊಸ ವರ್ಷವನ್ನು (China New Year) ಸ್ವಾಗತಿಸಿದೆ. ಈ ಹಿನ್ನಲೆಯಲ್ಲಿ ಅಮೊರಿ ಗುಯಿಚನ್ ವಿಶೇಷ ಕಲಾಕೃತಿ ತಯಾರಿಸಿದ್ದಾರೆ.  ಚಾಕೋಲೇಟ್​ ಹುಲಿದ ತಯಾರಿಕೆಯ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಮೊದಲು ಚಾಕೋಲೇಟ್​ಅನ್ನು ಹುಲಿಯ ವಿವಿಧ ಭಾಗಗಳ ಆಕೃತಿಯಲ್ಲಿ ತಯಾರಿಸಿಕೊಳ್ಳುತ್ತಾರೆ. ನಂತರ ಅದನ್ನು ಒಂದೊಂದಾಗಿ ಜೋಡಿಸಿ, ಬಣ್ಣವನ್ನು ಹಚ್ಚುತ್ತಾರೆ. ಹುಲಿಯ ಎಲ್ಲಾ ಭಾಗಗಳಲ್ಲಿ ಬೇಕಾದ ಬಣ್ಣವನ್ನು ಸ್ಪ್ರೇ ಮಾಡುತ್ತಾರೆ. ಕಣ್ಣು, ಹುಲಿಯ ಮೈಮೇಲಿನ ಪಟ್ಟೆಗಳು, ಮೀಸೆ ಎಲ್ಲವನ್ನೂ ತಮ್ಮ ಕೈಚಳಕದ ಮೂಲಕ ಮೂಡಿಸುತ್ತಾರೆ. ಇದೇನು ಮೊದಲ ಬಾರಿಯಲ್ಲ ಈ ಹಿಂದೆಯೂ ಅಮೊರಿ ಗುಯಿಚನ್ ಅನೇಕ ಆಕೃತಿಗಳನ್ನು ತಯಾರಿಸಿ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ್ದಾರೆ.

ಇದೀಗ ಚೀನಾದ ನ್ಯೂ ಇಯರ್​ ಸಂಭ್ರಮಕ್ಕೆ ಚಾಕಲೋಟ್​ಹುಲಿಯ ಆಕೃತಿ ತಯಾರಿಸಿದ ಅಮೊರಿ ಗುಯಿಚನ್ ಅದರೊಂದಿಗೆ ನಿಂತು ಪೋಸ್​ ನೀಡಿದ್ದಾರೆ. ಫೆ.1 ರಂದು ಹಂಚಿಕೊಂಡ ವಿಡಿಯೋ 4.7 ಲಕ್ಷ ಲೈಕ್ಸ್​ ಪಡೆದಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಇದನ್ನೂ ಓದಿ:

Viral Video; ಮೃಗಾಲಯದಲ್ಲಿದ್ದ ಕರಡಿ ಬೋನ್​ಗೆ 3 ವರ್ಷದ ಮಗುವನ್ನು ಎಸೆದ ಮಹಿಳೆ

Published On - 5:40 pm, Wed, 2 February 22