Viral Video: ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಯುವತಿಯನ್ನು ಕಾಪಾಡಿದ ಪುರುಷರು; ಶಾಕಿಂಗ್ ವಿಡಿಯೋ ವೈರಲ್
Shocking News: ಈ ವಿಡಿಯೋದಲ್ಲಿ ಎತ್ತರದ ಕಟ್ಟಡದ ಕಿಟಕಿಗಳಿಂದ ಕಪ್ಪು ಹೊಗೆ ಹೊರಹೊಮ್ಮುವುದನ್ನು ಕಾಣಬಹುದು. ಆ ಮಹಡಿಯ ಕೆಳಗಿನ ಮಹಡಿಯಲ್ಲಿರುವ ಪುರುಷರು ಬೆಂಕಿ ಹೊತ್ತಿಕೊಂಡ ಮಹಡಿಯಲ್ಲಿರುವ ಬಾಲಕಿಗೆ ಸಹಾಯ ಮಾಡುತ್ತಿದ್ದಾರೆ.
ನವದೆಹಲಿ: ತನಗೇನಾದರೂ ಸಂಕಷ್ಟ ಎದುರಾದರೆ, ಜೀವನ ನಡೆಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಎದುರಾದಾಗ ಪ್ರತಿಯೊಬ್ಬ ಮನುಷ್ಯನು ತನಗಾಗಿ ದಾರಿಯನ್ನು ಹುಡುಕುತ್ತಾನೆ. ಇನ್ನು ಕೆಲವೊಮ್ಮೆ ನಮಗೇ ಅರಿವಿಲ್ಲದಂತೆ ಯಾರಾದರೂ ಆಪದ್ಭಾಂದವರಾಗಿ ಬಂದು ಕಾಪಾಡುತ್ತಾರೆ. ಅದೇ ರೀತಿ ಬೆಂಕಿ ಹೊತ್ತಿಕೊಂಡ ಕಟ್ಟಡದಿಂದ ಹುಡುಗಿಯೊಬ್ಬಳನ್ನು ರಕ್ಷಿಸಲು ರಷ್ಯಾದಲ್ಲಿ ಇಬ್ಬರು ಪುರುಷರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವ ವಿಡಿಯೋ ವೈರಲ್ ಆಗಿದೆ. ಅವರ ಧೈರ್ಯವನ್ನು ಮೆಚ್ಚಿದ ನೆಟ್ಟಿಗರು ವಿಡಿಯೋವನ್ನು (Viral Video) ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಈ ವಿಡಿಯೋದಲ್ಲಿ ಎತ್ತರದ ಕಟ್ಟಡದ ಕಿಟಕಿಗಳಿಂದ ಕಪ್ಪು ಹೊಗೆ ಹೊರಹೊಮ್ಮುವುದನ್ನು ಕಾಣಬಹುದು. ಆ ಮಹಡಿಯ ಕೆಳಗಿನ ಮಹಡಿಯಲ್ಲಿರುವ ಪುರುಷರು ಬೆಂಕಿ ಹೊತ್ತಿಕೊಂಡ ಮಹಡಿಯಲ್ಲಿರುವ ಬಾಲಕಿಗೆ ಸಹಾಯ ಮಾಡುತ್ತಿದ್ದಾರೆ. ಈ ವೇಳೆ ಬೆಂಕಿ ಹೊತ್ತಿಕೊಂಡ ಮಹಡಿಯ ಕಿಟಕಿಯೊಂದರಿಂದ ಹುಡುಗಿ ಕೆಳಗೆ ಹಾರಲು ಪ್ರಯತ್ನಿಸಿದ್ದಾಳೆ. ಆಕೆಯನ್ನು ರಕ್ಷಿಸಲು ತಮ್ಮ ಜೀವವನ್ನೂ ಲೆಕ್ಕಿಸದೆ ಇಬ್ಬರು ಪುರುಷರು ಬೆಂಕಿ ಹೊತ್ತಿಕೊಂಡ ಮಹಡಿಯನ್ನು ಹತ್ತಿ ಹೋಗಿದ್ದಾರೆ.
52 ಸೆಕೆಂಡುಗಳ ಈ ವಿಡಿಯೋದಲ್ಲಿ ಪುರುಷರು ತಮ್ಮ ಮಹಡಿಯ ಕಿರಿದಾದ ಕಿಟಕಿಯ ಅಂಚಿನಲ್ಲಿ ನಿಂತಿದ್ದಾರೆ. ಮೇಲಿನ ಮಹಡಿಯಲ್ಲಿ ಸಿಲುಕಿದ ಹುಡುಗಿಯನ್ನು ಕಾಪಾಡಲು ಕಿಟಕಿಯಿಂದ ಮೇಲೆ ಜೋತಾಡುತ್ತಾ ಹತ್ತಿ ಹೋಗಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಂಡು ಕೆಳಗೆ ಹಾರಲು ಪ್ರಯತ್ನಿಸುತ್ತಿರುವ ಯುವತಿಯನ್ನು ಕಾಪಾಡಲು ಹಲವಾರು ನಿಮಿಷ ಹೆಣಗಾಡಿದ ಇಬ್ಬರು ಪುರುಷರು ಕೊನೆಗೂ ಆಕೆಯನ್ನು ರಕ್ಷಿಸಿದ್ದಾರೆ.
ಮಾಸ್ಕೋದ ಡೊರೊಜ್ನಾಯಾ ಸ್ಟ್ರೀಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಜನವರಿ 29ರ ಸಂಜೆ ಬೆಂಕಿ ಕಾಣಿಸಿಕೊಂಡಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿತ್ತು. ಜೋರಾಗಿ ಹೊತ್ತಿಕೊಂಡ ಬೆಂಕಿ ಕಟ್ಟಡದ ಒಂಬತ್ತನೇ ಮಹಡಿಯಲ್ಲಿರುವ ಅಪಾರ್ಟ್ಮೆಂಟ್ ಅನ್ನು ಸಂಪೂರ್ಣವಾಗಿ ಆವರಿಸಿತು.
ಮಾಧ್ಯಮದ ವರದಿಯ ಪ್ರಕಾರ, ಬೆಂಕಿಯಲ್ಲಿ ಮೂವರು ಗಾಯಗೊಂಡಿದ್ದಾರೆ. 12 ಜನರನ್ನು ಮನೆಯಿಂದ ರಕ್ಷಿಸಲಾಗಿದೆ. ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಇದನ್ನೂ ಓದಿ: Viral Video: 300 ಹಾವುಗಳನ್ನು ಗೋಣಿಚೀಲದಲ್ಲಿ ತುಂಬಿ ಕಾಡಲ್ಲಿ ಸುರಿದ ವ್ಯಕ್ತಿ; ಈ ವಿಡಿಯೋ ನೋಡಿ ಶಾಕ್ ಆಗಬೇಡಿ!
Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?
Published On - 1:47 pm, Wed, 2 February 22