AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 300 ಹಾವುಗಳನ್ನು ಗೋಣಿಚೀಲದಲ್ಲಿ ತುಂಬಿ ಕಾಡಲ್ಲಿ ಸುರಿದ ವ್ಯಕ್ತಿ; ಈ ವಿಡಿಯೋ ನೋಡಿ ಶಾಕ್ ಆಗಬೇಡಿ!

Trending Video: ಆ ವ್ಯಕ್ತಿ ತನ್ನ ಕಾಲುಗಳ ಬಳಿಯೇ ಆ ಗೋಣಿ ಚೀಲವನ್ನು ಬಿಚ್ಚಿ, ಅದರೊಳಗಿದ್ದ 300ಕ್ಕೂ ಹೆಚ್ಚು ಹಾವುಗಳನ್ನು ಕೆಳಗೆ ಸುರಿದ ರೀತಿ ನೆಟ್ಟಿಗರನ್ನು ಬಿಚ್ಚಿ ಬೀಳಿಸಿದೆ.

Viral Video: 300 ಹಾವುಗಳನ್ನು ಗೋಣಿಚೀಲದಲ್ಲಿ ತುಂಬಿ ಕಾಡಲ್ಲಿ ಸುರಿದ ವ್ಯಕ್ತಿ; ಈ ವಿಡಿಯೋ ನೋಡಿ ಶಾಕ್ ಆಗಬೇಡಿ!
ಹಾವುಗಳನ್ನು ಚೀಲದಿಂದ ಸುರಿಯುತ್ತಿರುವ ದೃಶ್ಯ
TV9 Web
| Updated By: ಸುಷ್ಮಾ ಚಕ್ರೆ|

Updated on:Feb 01, 2022 | 8:12 PM

Share

ನವದೆಹಲಿ: ಹಾವುಗಳನ್ನು ಕಂಡರೆ ಬಹುತೇಕ ಜನರಿಗೆ ಭಯ. ಆದರೆ, ಈ ಹಾವನ್ನು ಕೂಡ ಹಾರದ ಹಾಗೆ ಎತ್ತಿ ಹಿಡಿದುಕೊಂಡು, ಜೋಪಾನವಾಗಿ ಕಾಡಿಗೆ ತೆಗೆದುಕೊಂಡು ಹೋಗಿ ಬಿಡುವ ಅದೆಷ್ಟೋ ಜನರಿದ್ದಾರೆ. ನೂರಾರು ಹಾವುಗಳನ್ನು ಏಕಕಾಲಕ್ಕೆ ಕಾಡಿಗೆ ಬಿಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ. ಎರಡು ದಿನಗಳ ಹಿಂದೆ ‘memewalanews’ ಎಂಬ ಇನ್​ಸ್ಟಾಗ್ರಾಂ (Instagram) ಬಳಕೆದಾರರು ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಆ ವ್ಯಕ್ತಿ ಸುಮಾರು 300 ಹಾವುಗಳನ್ನು ಹಿಡುದ ಕಾಡಿಗೆ ಬಿಟ್ಟಿದ್ದಾನೆ ಎಂದು ಇನ್​ಸ್ಟಾಗ್ರಾಂ ಬಳಕೆದಾರರು ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಕಾಡಿನಲ್ಲಿ ತನ್ನ ತೋಳುಗಳಲ್ಲಿ ಹಸಿರು ಬಣ್ಣದ ದೊಡ್ಡ ಗೋಣಿಚೀಲವನ್ನು ಹಿಡಿದುಕೊಂಡು ಅದನ್ನು ಕಾಡಿನಲ್ಲಿ ತೆರೆದ ಪ್ರದೇಶಕ್ಕೆ ತರುತ್ತಾನೆ. ಆ ಗೋಣಿ ಚೀಲದಿಂದ ಹೊರಬಂದ ಹಾವುಗಳ ಪ್ರಮಾಣವನ್ನು ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಆ ವ್ಯಕ್ತಿ ತನ್ನ ಕಾಲುಗಳ ಬಳಿಯೇ ಆ ಗೋಣಿ ಚೀಲವನ್ನು ಬಿಚ್ಚಿ, ಅದರೊಳಗಿದ್ದ 300ಕ್ಕೂ ಹೆಚ್ಚು ಹಾವುಗಳನ್ನು ಕೆಳಗೆ ಸುರಿದ ರೀತಿ ನೆಟ್ಟಿಗರನ್ನು ಬಿಚ್ಚಿ ಬೀಳಿಸಿದೆ.

View this post on Instagram

A post shared by Meme wala (@memewalanews)

ಕಾಡಿನಲ್ಲಿ ಹಾವುಗಳನ್ನು ಗೋಣಿ ಚೀಲದಿಂದ ಸುರಿದ ನಂತರ, ಆ ವ್ಯಕ್ತಿ ತನ್ನ ಕೈಗಳಿಂದ ಹಾವನ್ನು ಹರಡುವುದನ್ನು ನೋಡಬಹುದು. ಅದೇನೂ ದೊಡ್ಡ ವಿಷಯವಲ್ಲ. ಈ ವಿಡಿಯೋವನ್ನು ನೋಡಿದರೆ ನಿಮಗೂ ಮೈ ರೋಮಾಂಚನವಾದರೆ ಅಚ್ಚರಿಯೇನಲ್ಲ. ನಿಮಗೆ ಹಾವುಗಳನ್ನು ಕಂಡರೆ ಭಯವಾಗುವುದಾದರೆ ಈ ವಿಡಿಯೋವನ್ನು ನೋಡದಿರುವುದೇ ಒಳಿತು!

ಇದನ್ನೂ ಓದಿ: Shocking Video: ಗರ್ಭಿಣಿಯಾಗಿದ್ದ ಫಾರೆಸ್ಟ್​ ರೇಂಜರ್​ ಕೂದಲು ಹಿಡಿದೆಳೆದು, ಥಳಿಸಿದ ದಂಪತಿ; ಶಾಕಿಂಗ್ ವಿಡಿಯೋ ವೈರಲ್

Viral Video: ಗೋಲ್​ಗಪ್ಪ ಐಸ್ ಕ್ರೀಮ್ ತಿಂದಿದ್ದೀರಾ? ವೈರಲ್ ಆದ ಹೊಸ ರೆಸಿಪಿಯ ವಿಡಿಯೋ ನೋಡಿ

Published On - 8:11 pm, Tue, 1 February 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ